ಮೂವರು ಬೈಕ್‍ ಕಳ್ಳರು ಅಂದರ್

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಆ.16- ಬೈಕ್‍ಗಳನ್ನು ಕಳವು ಮಾಡಿ ತಲೆಮರೆಸಿಕೊಂಡಿದ್ದ ಮೂವರು ಆರೋಪಿಗಳನ್ನು ಪಶ್ಚಿಮ ವಿಭಾಗದ ಚಂದ್ರಾ ಲೇಔಟ್ ಠಾಣೆ ಪೊಲೀಸರು ಬಂಸಿದ್ದಾರೆ.

ಗಂಗೊಂಡನಹಳ್ಳಿ ಮತ್ತು ಪಾದರಾಯನಪುರ ಆಸಿಗಳಾದ ಸಯ್ಯದ್ ಉಮರ್ ಫಾರುಕ್ ಅಲಿಯಸ್ ಅಬೀದ್ (20), ಇಮ್ರಾನ್ ಅಲಿಯಾಸ್ ಮಚ್ಚರ್ ಇಮ್ರಾನ್ (21), ಸಯ್ಯದ್ ಮುಜಾಹಿದ್ ಅಲಿಯಾಸ್ ಸೈಲೆಂಟ್ ಬಂತ ಆರೋಪಿಗಳು.

ಆಗಸ್ಟ್ 13ರಂದು ಸಂಜೆ 6.30ರಲ್ಲಿ ಚಂದ್ರಾ ಲೇಔಟ್ ಠಾಣೆ ವ್ಯಾಪ್ತಿಯಲ್ಲಿ 70 ಸಾವಿರ ರೂ. ಬೆಲೆಯ 220 ಸಿಸಿ ಬಜಾಜ್ ಪಲ್ಸರ್ ಬೈಕ್‍ಅನ್ನು ಐದು ಮಂದಿ ದರೋಡೆ ಮಾಡಿದ್ದರು.

ಈ ಪ್ರಕರಣದ ಆರೋಪಿಗಳ ಪತ್ತೆಗಾಗಿ ಕೆಂಗೇರಿ ಗೇಟ್ ಉಪವಿಭಾಗದ ಸಹಾಯಕ ಪೊಲೀಸ್ ಆಯುಕ್ತ ಯು.ಡಿ.ಕೃಷ್ಣಕುಮಾರ್ ನೇತೃತ್ವದಲ್ಲಿ ಚಂದ್ರಾ ಲೇಔಟ್ ಠಾಣೆಯ ಇನ್ಸ್‍ಪೆಕ್ಟರ್ ಬ್ರಿಜೇಶ್ ಮ್ಯಾಥ್ಯು ನೇತೃತ್ವದಲ್ಲಿ ಪ್ರತ್ಯೇಕ ತಂಡವನ್ನು ರಚನೆ ಮಾಡಲಾಗಿತ್ತು.

ತಕ್ಷಣ ಕಾರ್ಯೋನ್ಮುಖವಾದ ತಂಡ ಒಂದೇ ದಿನದಲ್ಲಿ ಮೂವರು ಆರೋಪಿಗಳನ್ನು ಬಂಸುವಲ್ಲಿ ಯಶಸ್ವಿಯಾಗಿದೆ. ಆರೋಪಿಗಳಿಂದ ಸದರಿ ದರೋಡೆ ಪ್ರಕರಣವಲ್ಲದೆ ಗಿರಿನಗರ, ಹಲಸೂರು, ವಿಜಯನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕಳವು ಮಾಡಿದ್ದ 2,91,000ರೂ. ಬೆಲೆ ಬಾಳುವ ನಾಲ್ಕು 220 ಸಿಸಿ ಬಜಾರ್ ಪಲ್ಸರ್ ಬೈಕ್‍ಗಳು, 2 ಮೊಬೈಲ್ ಫೋನ್ ಹಾಗೂ ಕೃತ್ಯಕ್ಕೆ ಬಳಸಿದ್ದ ಒಂದು ಚಾಕುವನ್ನು ವಶಪಡಿಸಿಕೊಳ್ಳಲಾಗಿದೆ.

Facebook Comments

Sri Raghav

Admin