ಬೈಕ್ ವೀಲ್ಹಿಂಗ್ ಮಾಡುವವರ ಚಾಲನಾ ಪರವಾನಗಿ ರದ್ದತಿಗೆ ಶಿಫಾರಸು

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಫೆ.17- ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ರಸ್ತೆಯಲ್ಲಿ ವೀಲ್ಹಿಂಗ್ ಮಾಡುತ್ತಾ ಇತರೆ ವಾಹನ ಸವಾರರಿಗೆ ಹಾಗೂ ಪಾದಚಾರಿಗಳಿಗೆ ತೊಂದರೆ ನೀಡುತ್ತಿದ್ದ ಬೈಕ್ ಸವಾರರ ಚಾಲನಾ ಪರವಾನಗಿಯನ್ನು ರದ್ದು ಪಡಿಸಲು ನಗರದ ಸಂಚಾರಿ ಪೊಲೀಸರು ಸಾರಿಗೆ ಅಧಿಕಾರಿಗಳಿಗೆ ಶಿಫಾರಸು ಮಾಡಿದ್ದಾರೆ.

ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ರಸ್ತೆಯಲ್ಲಿ ವೀಲ್ಹಿಂಗ್ ಮಾಡುತ್ತಿದ್ದ 6 ಮಂದಿಯನ್ನು ಸಂಚಾರಿಪೊಲೀಸರು ಬಂಧಿಸಿ, 10 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ.
ಸಂಚಾರ ಉತ್ತರ ವಿಭಾಗದಲ್ಲಿ ರಾತ್ರಿ ವೇಳೆ ವಿಮಾನ ನಿಲ್ದಾಣ ರಸ್ತೆಯಲ್ಲಿ ವಿಶೇಷ ಕಾರ್ಯಾಚರಣೆ ನಡೆಸಿದ ನಗರ ಸಂಚಾರಿ ಪೊಲೀಸರು ವೀಲ್ಹಿಂಗ್ ಮಾಡುತ್ತಿದ್ದ 6 ಸವಾರರನ್ನು ಬಂಧಿಸಿ, 10 ಪ್ರಕರಣಗಳನ್ನು ದಾಖಲು ಮಾಡಿದ್ದಾರೆ.

ಕಾರ್ಯಾಚರಣೆ ವೇಳೆ ಕೆಲವು ವಾಹನ ಸವಾರರು ಪರಾರಿಯಾಗಿದ್ದಾರೆ. ಬಂಧಿತರ ಪೈಕಿ ನಾಲ್ಕು ಮಂದಿಗೆ ವಾಹನ ಚಾಲನ ಪರವಾನಗಿ ಇದ್ದು , ಇವುಗಳನ್ನು ರದ್ದುಪಡಿಸಲು ಪ್ರಾದೇಶಿಕ ಸಾರಿಗೆ ಅಧಿಕಾರಿಗಳಿಗೆ ಶಿಫಾರಸು ಮಾಡಲಾಗಿದೆ.

Facebook Comments

Sri Raghav

Admin