ಕರ್ಕಶ ಸೈಲೈನ್ಸರ್ ಅಳವಡಿಸಿದರೆ ಹಾಗೂ ವೀಲಿಂಗ್ ಮಾಡಿದರೆ ಜೈಲು..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಜ.9- ನಿಯಮ ಬಾಹಿರವಾಗಿ ತಮ್ಮ ವಾಹನಗಳಿಗೆ ಕರ್ಕಶ ಶಬ್ಧ ಮಾಡುವ ಸೈಲೆನ್ಸರ್‍ಗಳನ್ನು ಅಳವಡಿಸಿರುವುದು ಹಾಗೂ ವೀಲಿಂಗ್ ಮಾಡುವವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಿ ಕಠಿಣ ಕ್ರಮ ಕೈಗೊಳ್ಳುವುದಾಗಿ ಬೆಂಗಳೂರು ನಗರ ಪೊಲೀಸರು ಎಚ್ಚರಿಸಿದ್ದಾರೆ. ರಾಜಾಜಿನಗರ ಸಂಚಾರ ಪೊಲೀಸ್ ಠಾಣೆ ವ್ಯಾಪ್ತಿಯ ಶ್ರೀ ಜಗದ್ಗುರು ಬಸವೇಶ್ವರ ಪ್ರೌಢಶಾಲೆ ಸಭಾಂಗ ಣದಲ್ಲಿ ನಡೆದ ಸಂಚಾರ ಸಂಪರ್ಕ ದಿನ ಕಾರ್ಯಕ್ರಮದಲ್ಲಿ ಸಾರ್ವಜನಿಕ ಅಹವಾಲುಗಳಿಗೆ  ಉತ್ತರಿಸಿದ ಪಶ್ವಿಮ ಸಂಚಾರ ವಿಭಾಗದ ಡಿಸಿಪಿ ಸೌಮ್ಯಲತಾ ಅವರು, ಕರ್ಕಶವಾಗಿ ಶಬ್ಧ ಮಾಡುವ ವಾಹನಗಳ ಮಾಲೀಕರ ವಿರುದ್ಧ ಸಿಆರ್‍ಪಿಸಿ 107ಅಡಿ ಕೇಸು ದಾಖಲಿಸಲಾಗುವುದು.

ಜತೆಗೆ ಅವರ ವಿರುದ್ಧ ಕಾನೂನು ಮತ್ತು ಸುವ್ಯವಸ್ಥೆ ಪೊಲೀಸರಿಗೆ ವರದಿ ನೀಡಲಾಗುವುದು. ಒಂದು ಲಕ್ಷ ರೂ. ಬಾಂಡ್ ಪಡೆದು ವಾಹನ ಬಿಡುಗಡೆ ಮಾಡುವಂತೆ ಕ್ರಮ ಕೈಗೊಳ್ಳಲಾಗುವುದು ಎಂದರು. ವೀಲಿಂಗ್ ಮಾಡುವವರ ವಿರುದ್ಧ ಕೂಡ ಇದೇ ರೀತಿಯ ಕಠಿಣ ಕ್ರಮ ಜರುಗಿಸಲಾಗುತ್ತದೆ.

ಅಗತ್ಯ ಕಂಡು ಬಂದರೆ ಅವರನ್ನು ಜೈಲಿಗೆ ಕಳುಹಿಸಲು ಕೂಡ ಅವಕಾಶಗಳಿವೆ ಎಂದು ಹೇಳಿದರು. ಇದಕ್ಕೂ ಮೊದಲು ರಾಜಾಜಿನಗರದ ನಿವಾಸಿ ಗೀತಾ ಮಿಶ್ರ ಅವರು ಮಾತನಾಡಿ, ಕರ್ಕಶವಾದ ಸೈಲೆನಸ್ಸರ್‍ಗಳ ಹಾವಳಿಯಿಂದ ಹಿರಿಯ ನಾಗರಿಕರಿಗೆ ಭಾರೀ ತೊಂದರೆಯಾಗುತ್ತದೆ.

30ಸೆಕೆಂಡ್‍ನಷ್ಟು ಹೃದಯ ಸ್ತಂಭನವಾದಂತಹ ಅನುಭವವಾಗುತ್ತದೆ. ಆರೋಗ್ಯ ಹದಗೆಡುತ್ತದೆ. ಹಾಗಾಗಿ ಅಂತಹವರ ವಿರುದ್ಧ ಕ್ರಮ ಕೈಗೊಳ್ಳಿ ಎಂದು ಮನವಿ ಮಾಡಿದರು. ನಗರ ಪೊಲೀಸ್ ಆಯುಕ್ತ ಕಮಲ್‍ಪಂತ್, ಸಂಚಾರ ವಿಭಾಗದ ಜಂಟಿ ಪೊಲೀಸ್ ಆಯುಕ್ತ ರವಿಕಾಂತೇಗೌಡ ಅವರ ಅನುಮತಿ ಪಡೆದು ಡಿಸಿಪಿ ಸೌಮ್ಯಲತಾ ಅವರು ಕಾನೂನು ಪ್ರಕಾರ ತೆಗೆದುಕೊಳ್ಳುವ ಕ್ರಮಗಳ ಬಗ್ಗೆ ಮಾಹಿತಿ ನೀಡಿದರು.

Facebook Comments