ವೀಡಿಯೋ ಮಾಡಲು ಹೋಗಿ ಹುಲಿ ಬಾಯಿಗೆ ಆಹಾರವಾಗುತ್ತಿದ್ದ ಬೈಕ್ ಸವಾರರು..!

ಈ ಸುದ್ದಿಯನ್ನು ಶೇರ್ ಮಾಡಿ

ಕೊಳ್ಳೇಗಾಲ, ಜೂ. 30- ಅರಣ್ಯದಲ್ಲಿ ವಿಡಿಯೋ ಮಾಡುವಾಗ ಆಕಸ್ಮಿಕವಾಗಿ ಹುಲಿ ಎದುರಾದರೆ…! ಇದು ನಿಜ.. ಅರಣ್ಯ ಮಾರ್ಗದಲ್ಲಿ ಬೈಕ್ ಸವಾರರಿಬ್ಬರು ಹೋಗುವಾಗ ಖುಷಿಗೆ ವಿಡಿಯೋ ಮಾಡಿ ವನ್ಯಜೀವಿಗಳ ಚಿತ್ರ ಸೆರೆ ಹಿಡಿಯಲು ಮುಂದಾಗಿದ್ದಾರೆ. ಆದರೆ ಇವರಿಗೆ ಎದುರಾದದ್ದು ಹುಲಿರಾಯ.

ಬೈಕ್ ಸದ್ದಿಗೆ ಕಾಡಿನಿಂದ ಹುಲಿಯೊಂದು ಹೊರಬಂದಿದೆ. ಅದನ್ನು ಕಂಡು ದಿಗ್ಬ್ರಮೆಕೊಂಡು, ಕ್ಷಣ ಮಾತ್ರದಲ್ಲೇ ಸವಾರರು ಎದ್ದೇಯೋ ಬಿದ್ದೇವೋ ಎಂದು ಬೈಕನ್ನು ವೇಗವಾಗಿ ಚಾಲಾಯಿಸಿಕೊಂಡು ಬದುಕಿದಿಯಾ ಬಡಜೀವ ಎಂದು ಪೆರಿಕಿತ್ತಿದ್ದಾರೆ.

ಕೇರಳ ಮೂಲದ ಇಬ್ಬರು, ಬೈಕ್‍ನಲ್ಲಿ ಗುಂಡ್ಲುಪೇಟೆಯಿಂದ ಕೇರಳಕ್ಕೆ ತೆರಳುವಾಗ, ಬಂಡೀಪುರದ ಮೂಲೆಹೊಳ ಚೆಕ್‍ ಪೋಸ್ಟ್ ಬಳಿ ಬೈಕ್‍ನ ಸದ್ದಿಗೆ ಹುಲಿಯೊಂದು ಕಾಡಿನಿಂದ ಹೊರ ಬಂದಿದೆ.

ಹಿಂಬದಿ ಕುಳಿತ್ತಿದ್ದ ಸವಾರ ಕಾಡಿನಲ್ಲಿ ಯಾವುದಾದರೂ ಪ್ರಾಣಿ ಕಾಣಿಸಿಕೊಳ್ಳಬಹುದೆಂದು ವಿಡಿಯೋ ಮಾಡಲು ಸಿದ್ದವಾಗಿದ್ದ ಈ ವೇಳೆ ಹುಲಿಯೊಂದು ಕಾಡಿನಿಂದ ಹೊರ ಬಂದಿದೆ. ಆದರೆ ಬೈಕ್ ಸವಾರರು ಹುಲಿ ಬಂದ ತಕ್ಷಣ ಬೈಕ್‍ನ್ನು ವೇಗವಾಗಿ ಚಲಿಸಿ ಹುಲಿ ದಾಳಿಯಿಂದ ತಪ್ಪಿಸಿಕೊಂಡಿದ್ದಾರೆ. ಈ ವಿಡಿಯೋವನ್ನು ಸವಾರರು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ.

Facebook Comments

Sri Raghav

Admin