ಹ್ಯಾಂಡ್‍ಲಾಕ್ ಮುರಿದು ಬೈಕ್‍ಗಳ ಕಳ್ಳತನ : ಮೂವರ ಬಂಧನ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ನ.21- ರಾತ್ರಿ ಸಮಯದಲ್ಲಿ ದ್ವಿಚಕ್ರ ವಾಹನಗಳ ಹ್ಯಾಂಡ್ ಲಾಕ್ ಮುರಿದು ಕಳ್ಳತನ ಮಾಡುತ್ತಿದ್ದ ಮೂವರನ್ನು ಚಿಕ್ಕಜಾಲ ಠಾಣೆ ಪೊಲೀಸರು ಬಂಸಿ 2.70 ಲಕ್ಷ ರೂ. ಬೆಲೆ ಬಾಳುವ 9 ವಿವಿಧ ಕಂಪನಿಗಳ ದ್ವಿಚಕ್ರವಾಹನಗಳನ್ನು ವಶಪಡಿಸಿಕೊಂಡಿದ್ದಾರೆ.

ಜಾಬೀರ್(19), ಸುಬ್ರಮಣ್ಯ(19) ಮತ್ತು ನಾಗಾರ್ಜುನ್(21) ಬಂತ ಆರೋಪಿಗಳು. ಆರೋಪಿಗಳ ಬಂಧನದಿಂದ ಚಿಕ್ಕಜಾಲ ಠಾಣೆಯಲ್ಲಿ ದಾಖಲಾಗಿದ್ದ ನಾಲ್ಕು ಪ್ರಕರಣ, ಬಾಗಲೂರು ಮತ್ತು ಯಲಹಂಕ ನ್ಯೂಟೌನ್ ಪೊಲೀಸ್ ಠಾಣೆಯ ನಾಲ್ಕು ಪ್ರಕರಣಗಳು ಬೆಳಕಿಗೆ ಬಂದಿದೆ.

ಅ.24ರಂದು ರಾತ್ರಿ 9.30ರ ಸುಮಾರಿನಲ್ಲಿ ವೆಂಕಟೇಶ್ ಎಂಬುವರು ಸೊಣ್ಣಪ್ಪನಹಳ್ಳಿ ಗ್ರಾಮದ ಖಾಲಿ ಗೋಡೌನ್ ಬಳಿ ಆ್ಯಕ್ಟಿವ್ ಹೋಂಡಾ ಬೈಕ್ ನಿಲ್ಲಿಸಿದ್ದಾಗ ಕಳ್ಳರು ಹ್ಯಾಂಡ್ ಲಾಕ್ ಮುರಿದು ಕಳವು ಮಾಡಿದ್ದರು.

ಈ ಬಗ್ಗೆ ಪ್ರಕರಣ ದಾಖಲಾಗಿತ್ತು. ಇನ್‍ಸ್ಪೆಕ್ಟರ್ ಯಶವಂತ್ ಸಹಾಯಕ ಪೊಲೀಸ್ ಆಯುಕ್ತ ಸುಬ್ರಹ್ಮಣ್ಯ ಮತ್ತವರ ತಂಡ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಸುವಲ್ಲಿ ಯಶಸ್ವಿಯಾಗಿದೆ.

Facebook Comments