ಪತ್ನಿ ಮೆಲಿಂಡಾಗೆ ವಿಚ್ಚೇದನ ನೀಡಿದ ಬಿಲ್‍ಗೇಟ್ಸ್

ಈ ಸುದ್ದಿಯನ್ನು ಶೇರ್ ಮಾಡಿ

ಸಿಯಟಲ್,ಮೇ 4-ಮೈಕ್ರೋಸಾಫ್ಟ್ ಸಂಸ್ಥೆ ಮುಖ್ಯಸ್ಥ ಹಾಗೂ ವಿಶ್ವದ ನಂಬರ್ ಓನ್ ಕೋಟ್ಯಾಧಿಪತಿ ಬಿಲ್ ಗೇಟ್ಸ್ ತಮ್ಮ ಪತ್ನಿ ಮಿಲಿಂಡಾ ಗೇಟ್ಸ್‍ಗೆ ವಿವಾವ ವಿಚ್ಚೇದನ ನೀಡಿದ್ದಾರೆ.ವಿಚ್ಚೇದನ ಪಡೆದುಕೊಂಡಿದ್ದರೂ ವಿಶ್ವದ ಅತಿ ದೊಡ್ಡ ಚಾರಿಟೆಬಲ್ ಟ್ರಸ್ಟ್ ಆಗಿರುವ ಬಿಲ್ ಮತ್ತು ಮೆಲಿಂಡಾ ಪ್ರತಿಷ್ಠಾನದಲ್ಲಿ ಇಬ್ಬರೂ ಜತೆಯಾಗಿ ಕಾರ್ಯ ನಿರ್ವಹಿಸಲು ಸಮ್ಮತಿ ವ್ಯಕ್ತಪಡಿಸಿದ್ದಾರೆ.

27 ವರ್ಷಗಳ ನಮ್ಮ ಸುಮಧುರ ದಾಂಪತ್ಯ ಜೀವನದಿಂದ ನಾವಿಬ್ಬರೂ ಮುಕ್ತಿ ಪಡೆದಿದ್ದೇವೆ ಎಂದು ಇಬ್ಬರೂ ಟ್ವಿಟ್ ಮಾಡಿದ್ದಾರೆ.ನಾವು ಮೂವರು ಮಕ್ಕಳಿಗೆ ಜನ್ಮ ನೀಡಿದ್ದೇವೆ. ವಿಶ್ವದಾದ್ಯಂತ ನಮ್ಮ ಸಂಸ್ಥೆಯನ್ನು ವಿಸ್ತರಿಸಿದ್ದೇವೆ.

ಸಾವಿರಾರು ಮಂದಿಗೆ ಉದ್ಯೋಗ ನೀಡಿದ್ದೇವೆ. ಜೀವನದ ಕೊನೆ ಗಳಿಗೆಯಲ್ಲಿ ಏಕಾಂಗಿತನ ಬೇಕು ಎಂದು ಅನ್ನಿಸಿದ್ದರಿಂದ ಪರಸ್ಪರ ಒಪ್ಪಿಗೆ ಮೇರೆಗೆ ವಿಚ್ಚೇದನ ಪಡೆದುಕೊಂಡಿದ್ದೇವೆ ಎಂದು ಅವರು ಸ್ಪಷ್ಟನೆ ನೀಡಿದ್ದಾರೆ.

Facebook Comments

Sri Raghav

Admin