3 ನವಿಲು ಸಾವು : ಮಹಾರಾಷ್ಟ್ರದಲ್ಲಿ ಹಕ್ಕಿ ಜ್ವರದ ಭೀತಿ

ಈ ಸುದ್ದಿಯನ್ನು ಶೇರ್ ಮಾಡಿ

ಔರಂಗಾಬಾದ್,ಜ.23- ಮೂರು ನವಿಲು ಸೇರಿದಂತೆ ಆರು ಪಕ್ಷಿಗಳು ಸಾವನ್ನಪ್ಪಿರುವುದರಿಂದ ಮಹಾರಾಷ್ಟ್ರದಲ್ಲಿ ಹಕ್ಕಿಜ್ವರದ ಭೀತಿ ಎದುರಾಗಿದೆ. ಔರಂಗಾಬಾದ್ ಜಿಲ್ಲೆಯ ಕೆಲ ಪ್ರದೇಶಗಳಲ್ಲಿ ನವಿಲು ಸೇರಿದಂತೆ ಆರು ಪಕ್ಷಿಗಳು ಸಾವನ್ನಪ್ಪಿರುವುದು ಕಂಡು ಬಂದಿರುವುದು ಆತಂಕಕ್ಕೆ ಕಾರಣವಾಗಿದೆ.

ಸಾವನ್ನಪ್ಪಿರುವ ಪಕ್ಷಿಗಳ ಕಳೆಬರಗಳನ್ನು ಪ್ರಯೋಗಾಲಯಕ್ಕೆ ರವಾನಿಸಲಾಗಿದೆ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ಕಾಡಿಗೆ ಹೊಂದಿಕೊಂಡಂತಿರುವ ಹಳ್ಳಿ ಸಮೀಪವೇ ಹಕ್ಕಿಗಳು ಸಾವನ್ನಪ್ಪಿರುವುದರಿಂದ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿದೆ. ಹಕ್ಕಿಗಳ ಸಾವಿಗೆ ಏನು ಕಾರಣ ಏನೆಂಬುದು ವರದಿ ಬಂದ ನಂತರವೇ ತಿಳಿದುಬರಲಿದೆ ಎಂದು ಅಧಿಕಾರಿಗಳು ಸ್ಪಷ್ಟನೆ ನೀಡಿದ್ದಾರೆ.

Facebook Comments