ಒಂದೇ ದಿನ ನಾಲ್ವರು ಕ್ರಿಕೆಟ್ ಆಟಗಾರರಿಗೆ ಜನ್ಮದಿನ, ಶುಭಾಶಯಗಳ ಮಹಾಪೂರ

ಈ ಸುದ್ದಿಯನ್ನು ಶೇರ್ ಮಾಡಿ

ಹೈದರಾಬಾದ್, ಡಿ.6- ವೆಸ್ಟ್‍ಇಂಡೀಸ್ ವಿರುದ್ಧ ಮುತ್ತಿನ ನಗರಿ ಹೈದರಾಬಾದ್‍ನಲ್ಲಿ ಮೊದಲ ಟ್ವೆಂಟಿ-20 ಪಂದ್ಯವಾಡುತ್ತಿರುವ ಟೀಂ ಇಂಡಿಯಾದಲ್ಲಿ ಜನ್ಮದಿನ ಸಂಭ್ರಮ ಮನೆ ಮಾಡಿದೆ.  ವೆಸ್ಟ್‍ಇಂಡೀಸ್ ಸರಣಿಗೆ ಆಯ್ಕೆಯಾಗಿರುವ ಶ್ರೇಯಾಸ್ ಐಯ್ಯರ್, ರವೀಂದ್ರಾ ಜಾಡೇಜಾ, ಭಾರತದ ವೇಗಿ ಜಸ್‍ಪ್ರೀತ್ ಬೂಮ್ರಾ, ಕರ್ನಾಟಕ ತಂಡದ ರಣಜಿ ನಾಯಕ ಕರುಣ್‍ನಾಯರ್ ಅವರುಗಳು ಇಂದು ತಮ್ಮ ಜನ್ಮದಿನ ಸಂಭ್ರಮವನ್ನು ಆಚರಿಸಿಕೊಂಡಿದ್ದಾರೆ.

ಕ್ರಿಕೆಟ್ ಸಂಸ್ಥೆಯಲ್ಲೇ ಅತ್ಯಂತ ಶ್ರೀಮಂತ ಸಂಸ್ಥೆಯಾಗಿರುವ ಬಿಬಿಸಿಐ ಟ್ವಿಟ್ಟರ್ ಮೂಲಕ ಸಂದೇಶ ಕಳಿಸಿದ್ದು ಈ ನಾಲ್ವರು ಆಟಗಾರರ ಮುಂದಿನ ಕ್ರಿಕೆಟ್ ಜೀವನ ಉತ್ತಮವಾಗಿರಲೆಂದು ಶುಭ ಹಾರೈಸಿದೆ. ರವೀಂದ್ರಾಜಾಡೇಜಾ ಹಾಗೂ ಶ್ರೇಯಾಸ್ ಐಯ್ಯರ್ ಅವರು ಭಾರತ ತಂಡದ ಆಟಗಾರರೊಂದಿಗೆ ಕೂಡಿ ಕೇಕ್ ಕತ್ತರಿಸಿ ಜನ್ಮದಿನವನ್ನು ಆಚರಿಸಿಕೊಂಡರು. ಟೀಂ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ, ಉಪನಾಯಕ ರೋಹಿತ್‍ಶರ್ಮಾ, ತರಬೇತುದಾರ ರವಿಶಾಸ್ತ್ರಿ ಸೇರಿದಂತೆ ತಂಡದ ಆಟಗಾರರು ಜನ್ಮದಿನದ ಶುಭಾಶಯ ಕೋರಿದರು.

# ಜಡ್ಡುಗೆ ಜನ್ಮದಿನ ಸಂಭ್ರಮ: ಸೌರಾಷ್ಟ್ರದ ಅಲೌಂಡರ್ ಆಟಗಾರರಾದ ಜಡೇಜಾ 6 ಡಿಸೆಂಬರ್ 1988ರಂದು ಸೌರಾಷ್ಟ್ರದಲ್ಲಿ ಜನಿಸಿದರು. ಫೆಬ್ರುವರಿ 8, 2009ರಂದು ಶ್ರೀಲಂಕಾ ವಿರುದ್ಧ ಏಕದಿನ ಪಂದ್ಯವನ್ನಾಡುವ ಮೂಲಕ ಅಂತರರಾಷ್ಟ್ರೀಯ ಕ್ರಿಕೆಟ್‍ಗೆ ಪಾದಾರ್ಪಣೆ ಮಾಡಿದರು.

2019ರಲ್ಲಿ ಆಡಿರುವ 11 ಪಂದ್ಯಗಳಿಂದ 494 ರನ್ ಗಳಿಸಿರುವ ಜಾಡೇಜಾ ಒಟ್ಟಾರೆ 48 ಟೆಸ್ಟ್ ಪಂದ್ಯಗಳಿಂದ 1844 ರನ್ ಗಳಿಸಿದ್ದರೆ 211 ವಿಕೆಟ್ ಕಬಳಿಸಿದ್ದಾರೆ. 156 ಏಕದಿನ ಪಂದ್ಯಗಳಿಂದ 2128 ರನ್, 178 ವಿಕೆಟ್, ಟ್ವೆಂಟಿ-20 ಯಲ್ಲಿ 44 ಪಂದ್ಯಗಳಿಂದ 154 ರನ್,33 ವಿಕೆಟ್ ಕಬಳಿಸಿ ಭಾರತ ತಂಡದ ಸ್ಪಿನ್ನ್ ಬಲವೆನಿಸಿಕೊಂಡಿದ್ದಾರೆ.

#ಐಯ್ಯರ್‍ಗೆ `ಶ್ರೇಯಾ’ ದಿನ: ಭಾರತ ತಂಡದ ಯುವ ಬ್ಯಾಟ್ಸ್‍ಮನ್ ಆಗಿ ಬ್ಯಾಟಿಂಗ್ ಬಲ ಹೆಚ್ಚಿಸಿರುವ ಶ್ರೇಯಾಸ್ ಐಯ್ಯರ್ , 6 ಡಿಸೆಂಬರ್ 1994ರಲ್ಲಿ ಮುಂಬೈನಲ್ಲಿ ಜನಿಸಿದ್ದು, ನವೆಂಬರ್ 1, 2017ರಲ್ಲಿ ನ್ಯೂಜಿಲೆಂಡ್ ವಿರುದ್ಧ ಟ್ವೆಂಟಿ-20 ಪಂದ್ಯ ಆಡುವ ಮೂಲಕ ಅಂತರಾಷ್ಟ್ರೀಯ ಕ್ರಿಕೆಟ್‍ಗೆ ಪಾದಾರ್ಪಣೆ ಮಾಡಿದರೂ, 2 ವರ್ಷಗಳ ಕಾಲ ತಂಡದಲ್ಲಿ ಸ್ಥಾನ ಪಡೆಯಲು ಎಡವಿದರೂ ಕೂಡ ಈಗ ತಂಡದಲ್ಲಿ ಉತ್ತಮ ಬ್ಯಾಟ್ಸ್‍ಮನ್ ಆಗಿ ರೂಪುಗೊಂಡಿದ್ದಾರೆ.

ಇತ್ತೀಚೆಗೆ ಬಾಂಗ್ಲಾದೇಶ ವಿರುದ್ಧ ನಡೆದ ನಿರ್ಣಾಯಕ ಟ್ವೆಂಟಿ-20 ಪಂದ್ಯದಲ್ಲಿ 62 ರನ್ ಗಳಿಸುವ ಮೂಲಕ ತಂಡ ಸರಣಿ ಗೆಲ್ಲುವಲ್ಲಿ ಮುಖ್ಯ ಪಾತ್ರ ವಹಿಸಿದ್ದ ಐಯ್ಯರ್ 9 ಏಕದಿನ ಪಂದ್ಯಗಳಿಂದ 346 ಹಾಗೂ 11 ಟ್ವೆಂಟಿ-20 ಪಂದ್ಯಗಳಿಂದ 212 ರನ್‍ಗಳನ್ನು ಗಳಿಸಿದ್ದು ಟೆಸ್ಟ್ ಪಾರ್ದಾಪಣೆ ಮಾಡಲು ಹಾತೊರೆಯುತ್ತಿದ್ದಾರೆ.

# ಬೂಮ್ರಾಗೆ ಬರ್ತ್‍ಡೇ ಆನಂದ: ಭಾರತ ತಂಡದ ಪ್ರಮುಖ ಬೌಲರ್ ಅಸ್ತ್ರವಾಗಿರುವ ಜಸ್‍ಪ್ರೀತ್‍ಬೂಮ್ರಾ ಇತ್ತೀಚೆಗೆ ಗಾಯಗೊಂಡಿರುವುದರಿಂದ ವೆಸ್ಟ್‍ಇಂಡೀಸ್ ಸರಣಿಯಿಂದಲೂ ದೂರ ಉಳಿದಿದ್ದರೂ ಕೂಡ ಈಗಲೂ ಭಾರತದ ಬೌಲಿಂಗ್ ಬಲವನ್ನು ಹೆಚ್ಚಿಸುವ ಸಾಮಥ್ರ್ಯವನ್ನು ಹೊಂದಿದ್ದಾರೆ.

ಜುಲೈನಿಂದ ಕ್ರಿಕೆಟ್ ಅಂಗಳದಿಂದ ದೂರವಿರುವ ಜಸ್‍ಪ್ರೀತ್ ಬೂಮ್ರಾ ಟೆಸ್ಟ್‍ನಲ್ಲಿ ಈಗಲೂ ವಿಶ್ವದ 5ನೆ ಬೌಲರ್ ಆಗಿ ಗುರುತಿಸಿಕೊಂಡಿದ್ದರೆ, ಏಕದಿನ ಮಾದರಿಯಲ್ಲಿ ಈಗಲೂ ಅವರೇ ನಂಬರ್ 1 ಬೌಲರ್. 1993 ಡಿಸೆಂಬರ್ 6 ರಂದು ಅಹಮದಾಬಾದ್‍ನಲ್ಲಿ ಜನಿಸಿದ ಬೂಮ್ರಾ ಆಸ್ಟ್ರೇಲಿಯಾ ವಿರುದ್ಧ 23 ಜನವರಿ 2016ರಂದು ಏಕದಿನ ಪಂದ್ಯವನ್ನಾಡುವ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್‍ನಲ್ಲಿ ಗುರುತಿಸಿಕೊಂಡರು. 12 ಟೆಸ್ಟ್ ಪಂದ್ಯಗಳಿಂದ 62 ವಿಕೆಟ್, 58 ಏಕದಿನ ಪಂದ್ಯಗಳಿಂದ 103 ವಿಕೆಟ್, 42 ಟ್ವೆಂಟಿ-20 ಪಂದ್ಯಗಳಿಂದ 51 ವಿಕೆಟ್‍ಗಳನ್ನು ಕಬಳಿಸಿದ್ದಾರೆ.

# ಕರುಣ್‍ಗೆ ಹುಟ್ಟುಹಬ್ಬದ ಸಂತಸ: ಜೋಧ್‍ಪುರ್‍ನಲ್ಲಿ ಜನಿಸಿದರೂ ಕೂಡ ಕರುಡನಾಡಿನ ಕುವರನೆಂದೇ ಬಿಂಬಿಸಿಕೊಂಡಿರುವ ಲಿಟ್ಲ್ ಮಾಸ್ಟರ್ ಕರುಣ್‍ನಾಯರ್ ಪ್ರಸ್ತುತ ನಡೆಯಲಿರುವ ರಣಜಿ ಪಂದ್ಯವಾಳಿಯಲ್ಲಿ ಕರ್ನಾಟಕ ತಂಡವನ್ನು ಪ್ರತಿನಿಧಿಸಲಿದ್ದಾರೆ.

1991ರ ಡಿಸೆಂಬರ್ 6 ರಂದು ಜೋಧ್‍ಪುರ್‍ನಲ್ಲಿ ಜನಿಸಿದ ಕರುಣ್‍ನಾಯರ್, 2016 ಜೂನ್ 11 ರಂದು ಜಿಂಬಾಬ್ವೆ ವಿರುದ್ಧ ನಡೆದ ಏಕದಿನ ಪಂದ್ಯದಲ್ಲಿ ಭಾರತದ 212ನೆ ಆಟಗಾರನಾಗಿ ಕಣಕ್ಕಿಳಿದ ಕರುಣ್‍ನಾಯರ್ 2016ರಲ್ಲಿ ಪಾದಾರ್ಪಣೆ ಮಾಡಿದ ಪಂದ್ಯದಲ್ಲೇ ಇಂಗ್ಲೆಂಡ್ ವಿರುದ್ಧ ಅಜೇಯ 303 ರನ್ ಗಳಿಸುವ ಮೂಲಕ ತಮ್ಮ ಬ್ಯಾಟಿಂಗ್ ವೈಭವವನ್ನು ತೋರ್ಪಡಿಸಿದರಾದರೂ 2017ರ ನಂತರ ಭಾರತ ತಂಡದಲ್ಲಿ ಆಡಲು ಅವಕಾಶ ಸಿಗದೇ ಇದ್ದರೂ ಮುಂದಿನ ದಿನಗಳಲ್ಲಿ ಟೀಂ ಇಂಡಿಯಾವನ್ನು ಪ್ರತಿನಿಧಿಸುವ ಹುಮ್ಮಸ್ಸಿನಲ್ಲಿದ್ದಾರೆ.
ಕರುಣ್‍ನಾಯರ್ 6 ಟೆಸ್ಟ್ ಪಂದ್ಯಗಳಿಂದ 374ರನ್, 2 ಏಕದಿನ ಪಂದ್ಯಗಳಿಂದ 46 ರನ್‍ಗಳನ್ನು ಗಳಿಸಿದ್ದಾರೆ.

Facebook Comments