ಬ್ರೇಕಿಂಗ್ : ಪೊಲೀಸರಿಗೆ ಸಿಕ್ತು ಬರ್ತ್ ಡೇ ಗಿಫ್ಟ್..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಸೆ.14-ನಗರ ಪೊಲೀಸ್ ಘಟಕದ ಎಲ್ಲ ಅಧಿಕಾರಿ ಮತ್ತು ಸಿಬ್ಬಂದಿಯವರಿಗೆ ಪೊಲೀಸ್ ಆಯುಕ್ತರ ಕಚೇರಿಯಿಂದ ಹುಟ್ಟುಹಬ್ಬದ ಗ್ರೀಟಿಂಗ್ ಕಾರ್ಡ್‍ಗಳನ್ನು ನೀಡಿ ಶುಭ ಕೋರಲು ಸೂಚಿಸಲಾಗಿದೆ.

ಯಾವುದೇ ಕರ್ತವ್ಯದ ಒತ್ತಡವಿದ್ದರೂ ಮತ್ತು ಅವರ ಹುಟ್ಟುಹಬ್ಬದಂದು ಕುಟುಂಬದವರೊಂದಿಗೆ ಸಂತೋಷದಿಂದ ಸಮಯ ಕಳೆಯಲು ಕಡ್ಡಾಯವಾಗಿ ವಾರದ ರಜೆಯೊಂದನ್ನು ನೀಡಬೇಕೆಂದು ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಆದೇಶ ಹೊರಡಿಸಿದ್ದಾರೆ.

ಎಎಸ್‍ಐ ಮತ್ತು ಮೇಲ್ಪಟ್ಟ ದರ್ಜೆಯ ಅಧಿಕಾರಿಗಳಿಗೆ ಸಂಬಂಧಪಟ್ಟ ಮೇಲಾಧಿಕಾರಿಗಳು ಅನುಮತಿ ರಜೆಯನ್ನು ಅವರ ಹುಟ್ಟುಹಬ್ಬದಂದು ನೀಡಬೇಕೆಂದು ಆಯುಕ್ತರು ಸೂಚಿಸಿದ್ದಾರೆ.

Facebook Comments

Sri Raghav

Admin