ಇಂದು ವಿಷ್ಣು, ಉಪೇಂದ್ರ ಹಾಗೂ ಶ್ರುತಿಗೆ ಹುಟ್ಟಹಬ್ಬದ ಸಂಭ್ರಮ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಸೆ.18- ಸ್ಯಾಂಡಲ್ ವುಡ್‍ನ ಜನಪ್ರಿಯ ನಟರಾದ ವಿಷ್ಣುವರ್ಧನ್, ಉಪೇಂದ್ರ ಹಾಗೂ ಶ್ರುತಿ ಅವರಿಗೆ ಹುಟ್ಟಹಬ್ಬದ ಸಂಭ್ರಮ. ಕೊರೊನಾ ಹಿನ್ನೆಲೆಯಲ್ಲಿ ತಮ್ಮ ನೆಚ್ಚಿನ ನಟರ ಹುಟ್ಟುಹಬ್ಬವನ್ನು ಯಾವುದೇ ಸಂಭ್ರಮವಿಲ್ಲದೆ ಸಾಮಾಜಿಕ ಜಾಲತಾಣಗಳಲ್ಲಿ ಶುಭಾಶಯಗಳನ್ನು ಕೋರುವ ಮೂಲಕ ಸರಳವಾಗಿ ಆಚರಿಸಲಾಯಿತು. ಹಿರಿಯ ನಟ ವಿಷ್ಣುವರ್ಧನ್ ಅವರು ನಮ್ಮೊಂದಿಗೆ ಇದ್ದಿದ್ದರೆ 71ನೆ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದರು.

ಆದರೂ ನಮ್ಮೊಂದಿಗೆ ಇಲ್ಲದಿದ್ದರೂ ಅಭಿಮಾನಿ ಗಳು ಸಾಹಸ ಸಿಂಹನ ಹುಟ್ಟುಹಬ್ಬವನ್ನು ಮರೆತಿಲ್ಲ. ಹಲವಾರು ಸಂಘಗಳು ಅವರ ಹೆಸರಿನಲ್ಲಿ ಸಾಮಾಜಿಕ ಕೆಲಸ ಮಾಡುವ ಮೂಲಕ ಗೌರವ ಸಲ್ಲಿಸಿದ್ದಾರೆ. ಉಪೇಂದ್ರ ಅವರಿಗೂ ಸಹ ಅಭಿಮಾನಿಗಳು, ಸ್ನೇಹಿತರು, ಚಿತ್ರರಂಗದ ಗಣ್ಯರು ಶುಭಾಶಯಗಳನ್ನು ಕೋರಿ ಸರಳವಾಗಿ ಹುಟ್ಟುಹಬ್ಬ ಆಚರಿಸಿದ್ದಾರೆ.

ನಟಿ ಶ್ರುತಿ ಅವರಿಗೂ ಕೂಡಾ ಅಭಿಮಾನಿಗಳು, ಚಿತ್ರರಂಗದ ನಟ-ನಟಿಯರು ಶುಭ ಹಾರೈಸಿದ್ದಾರೆ. ಕೋವಿಡ್ ನಿಯಮಗಳನ್ನು ಪಾಲಿಸುವ ಹಿನ್ನೆಲೆಯಲ್ಲಿ ಸರಳವಾಗಿ ಈ ಬಾರಿ ನೆಚ್ಚಿನ ನಟರ ಹುಟ್ಟುಹಬ್ಬವನ್ನು ಆಚರಿಸಲಾಗಿದೆ.

Facebook Comments