ಉತ್ತಮ ಆರೋಗ್ಯಕ್ಕೆ ಹಾಗಲಕಾಯಿಯ ‘ಕಹಿ’ ಸತ್ಯಗಳು

ಈ ಸುದ್ದಿಯನ್ನು ಶೇರ್ ಮಾಡಿ

hagalaಹಾಗಲ ಕಾಯಿ ಬಾಯಿಗೆ ಕಹಿಯಾದರೂ ದೇಹಕ್ಕೆ ಸಿಹಿ. ಇದು ಔಷಧೀಯ ಗುಣ ಹಾಗೂ ಪೌಷ್ಟಿಕಾಂಶಗಳನ್ನು ಹೊಂದಿದಿರುವ ತರಕಾರಿ. ಹಾಗಲಕಾಯಿಯ ಹೊರಮೈ ಮುಳ್ಳಿನಂತಹ ರಚನೆಯಿಂದ ಕೂಡಿದ್ದು, ಕಡುಹಸುರು ಹಾಗೂ ಬಿಳಿ ಬಣ್ಣವನ್ನು ಹೊಂದಿರುತ್ತವೆ. ಮೂಲ: ಇದು ಉಷ್ಣ ಪ್ರದೇಶದಲ್ಲಿ ಬೆಳೆಯುವ ಸಸ್ಯವಾಗಿದೆ.

ಪ್ರಪಂಚದ ಹೆಚ್ಚಿನ ಎಲ್ಲೆಡೆ ಇದರ ಬೇಸಾಯ, ಬಳಕೆ ಮಾಡಲಾಗುತ್ತದೆ. ನಮ್ಮ ದೇಶದಲ್ಲಿ ಇದಕ್ಕೆ ಆದ್ಯತೆ ಹೆಚ್ಚು. ಹಾಗಲ ‘ಕುಕುರ್ಬಿಟೇಸೀ’ ಎಂಬ ಸಸ್ಯ ಕುಟುಂಬಕ್ಕೆ ಸೇರಿದ್ದಾಗಿದೆ. ಬಳ್ಳಿಯಾಗಿ ಹಬ್ಬುವ ವರ್ಗಕ್ಕೆ ಸೇರಿದ್ದು, ಈ ಗಿಡ ಬೆಳೆಯಲು ಆಸರೆಯ ಅಗತ್ಯವಿದೆ.

ಇದರ ಎಲೆ ಮತ್ತ ಕಾಯಿಯ ಬಣ್ಣ ಹಸುರು. ಎಲೆಗಳು ಕೈಯ ಆಕಾರ ಹೊಂದಿದ್ದು ಸೀಳುಗಳನ್ನು ಒಳಗೊಂಡಿರುತ್ತವೆ. ಕಾಡುಗಳಲ್ಲಿ ಹಾಗಲವನ್ನೇ ಹೋಲುವ ಇತರ ಕಾಯಿಗಳು ಕಾಣಸಿಗುತ್ತವೆ.

#ಪೌಷ್ಟಿಕಾಂಶ   :  ಹಾಗಲ ಕಾಯಿ ರುಚಿ ಕಹಿಯಾದರೂ ಒಂದು ಪೌಷ್ಟಿಕಾಂಶಯುಕ್ತ ತರಕಾರಿ. ಇದು ಹೆಚ್ಚಿನ ಪ್ರಮಾಣದಲ್ಲಿ ಶರ್ಕರ ಪಿಷ್ಟ, ಪ್ರೋಟೀನ್, ‘ಸಿ’ ಜೀವಸತ್ವ , ಖನಿಜಾಂಶಗಳನ್ನು ಒಳಗೊಂಡಿರುತ್ತದೆ. ಅಲ್ಲದೆ ಥಯಮಿನ್, ಕ್ಯಾಲಿಯಂ, ಕೊಬ್ಬು, ರಂಜಕ, ಕಬ್ಬಿಣ, ಪೊಟ್ಯಾಷ್, ರೈಬೊಫ್ಲೇಲಿನ ಇತ್ಯಾದಿಗಳನ್ನು ಹೊಂದಿದೆ.

# ಔಷಧೀಯ ಗುಣ  : ಆಯುರ್ವೇದದಲ್ಲಿ ಇದನ್ನು ಹಲವಾರು ಕಾಯಿಲೆಗಳಿಗೆ ಔಷಧವಾಗಿ ಬಳಸಲಾಗುತ್ತದೆ. ಸಕ್ಕರೆ ಕಾಯಿಲೆ, ಮೂಲವ್ಯಾಧಿ, ಚರ್ಮದ ಕಾಯಿಲೆಗಳಿರುವವರು ಇದನ್ನ ಸೇವಿಸಿದರೆ ಉತ್ತಮ. ಹಾಗಲ ಕಾಯಿಯ ರಸವನ್ನು ಲಿಂಬೆ ರಸದೊಂದಿಗೆ ಮಿಶ್ರ ಮಾಡಿ ಸೇವಿಸಿದರೆ ರಕ್ತ ಶುದ್ಧಿಯಾಗುತ್ತದೆ. ಇದರ ಬಳಕೆಯಿಂದ ರೋಗ ನಿರೊಧಕ ಶಕ್ತಿ ವೃದ್ಧಿಸುವುದು. ಜಂತುನಾಶಕ, ಜೀರ್ಣಕಾರಕ, ಜ್ವರ ಪೀಡಿತರಿಗೆ ಬಾಯಿ ರುಚಿ ಹೆಚ್ಚಲು, ಮಲಬದ್ಧತೆಗೂ ಒಳ್ಳೆಯದು.

#  ಹಾಗಲ ಕಾಯಿಯಿಂದ ರುಚಿ ರುಚಿಯಾದ ನಾನಾ ತರದ ಅಡುಗೆಗಳನ್ನು ತಯಾರಿಸಲಾಗುತ್ತದೆ. ಮುಖ್ಯವಾಗಿ ಹಾಗಲ ಕಾಯಿ ಗೊಜ್ಜು, ಮೆಣಸುಕಾಯಿ, ಸಾಂಬಾರು, ಸೆಂಡಿಗೆ ಇತ್ಯಾದಿ. ಹಾಗಲ ತಳಿ: ಹಾಗಲದಲ್ಲಿ ಸ್ಥಳೀಯ ತಳಿಗಳಲ್ಲದೆ ಭಾರತೀಯ ಕೃಷಿ ಸಂಶೋಧನಾ ಸಂಸ್ಥೆ, ಭಾರತೀಯ ತೋಟಗಾರಿಕೆ ಸಂಶೋಧನಾ ಸಂಸ್ಥೆ ಹಾಗೂ ತಮಿಳುನಾಡು ಕೃಷಿ ವಿಶ್ವವಿದ್ಯಾನಿಲಯಗಳು ಕೆಲವೊಂದು ಉತ್ತಮ ತಳಿಗಳನ್ನು ಸಂಶೋಧಿಸಿವೆ. ಮುಖ್ಯವಾಗಿ ಅರ್ಕಾಹರಿತ್, ಪೂಸಾದೋಮೌಸವಿ, ಕೊಯಮತ್ತೂರು ಲಾಂಗ್ ಮೊದಲಾದವುಗಳು.

# ಹಾಗಲ ಕಾಯಿಯ ರಸವನ್ನು ಸ್ವಲ್ಪ ಬೆಚ್ಚಗೆ ಮಾಡಿ ನೋವಿರುವ ಕಿವಿಗೆ 2-3 ಹನಿಗಳು ಹಾಕಿದರೆ , ಕಿವಿ ನೋವು ಮಾಯವಾಗುತ್ತದೆ .  ಹಾಗಲ ಎಲೆಗಳಿಂದ ರಸ ತೆಗೆದು , ಆ ರಸವನ್ನು ಅಂಗಾಲುಗಳಿಗೆ ಹಚ್ಚಿದರೆ ಅಂಗಾಲು ಉರಿ ಕಡಿಮೆಯಾಗುತ್ತದೆ.   ಹಾಗಲ ಕಾಯಿಯನ್ನು ನೆರಳಿನಲ್ಲಿ ಒಣಗಿಸಿ ಪುಡಿ ಮಾಡಿ. 2-3 ಗ್ರಾಂ ಪುಡಿಗೆ 1ಚಮಚ ಜೇನುತುಪ್ಪ ಅಥವಾ ನೀರಿನೋಡನೆ ದಿನಕ್ಕೆ 3 ಬಾರಿ ಊಟದ ಮುಂಚೆ ಸೇವಿಸಿದರೆ , ರಕ್ತದಲ್ಲಿನ ಸಕ್ಕರೆ ಪ್ರಮಾಣ ಕಡಿಮೆಯಾಗುತ್ತದೆ.

# ಹೊಟ್ಟೆಯ ಹುಳುವಿನ ಸಮಸ್ಯೆಗೆ 10 – 12 ಹಾಗಲ ಎಲೆಗಳ ರಸವನ್ನು ತೆಗೆದು 3 – 4 ದಿನಗಳ ಕಾಲ ಸೇವಿಸಿದರೆ ಹೊಟ್ಟೆ ಹುಳುವಿನ ಸಮಸ್ಯೆ ನಿವಾರಣೆಯಾಗುತ್ತದೆ.

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ