ವಿಸ್ಮಯ : ಗೋಧಿ ಹೊಲದಲ್ಲಿ ವೃತ್ತಾಕಾರದ ರಚನೆ ಪ್ರತ್ಯಕ್ಷ..!

ಈ ಸುದ್ದಿಯನ್ನು ಶೇರ್ ಮಾಡಿ

ಬರ್ಲಿನ್,ಆ.20-ಜರ್ಮನಿಯ ಗೋಧಿ ಹೊಲದಲ್ಲಿ ಕಂಡುಬಂದ ವಿದ್ಯಮಾನವೊಂದು ಭಾರೀ ಕುತೂಹಲ ಮತ್ತು ಚರ್ಚೆಗೆ ಗ್ರಾಸವಾಗಿದೆ. ಸಮೃದ್ಧವಾಗಿ ಬೆಳೆದ ಬೆಳೆಗಳ ಮಧ್ಯೆ ಹಠಾತ್ ವೃತ್ತಾಕಾರದ ವಿನ್ಯಾಸ ಗೋಚರಿಸಿದ್ದು ವಿಸ್ಮಯ ಎನಿಸಿದೆ.

ಜರ್ಮನಿಯ ಪಾಹೀ ಪಟ್ಟಣದಲ್ಲಿ ಕಂಡುಬಂದ ವಿಸ್ಮಯ ಸಂಗತಿ ಇದು. ಈ ಪ್ರದೇಶದ ಗೋ ಹೊಲವೊಂದರಲ್ಲಿ ಬೆಳೆದು ನಿಂತ ಬೆಳೆಗಳ ಮಧ್ಯೆ ಹಠಾತ್ ದೊಡ್ಡ ವೃತ್ತಾಕಾರದ ವಿನ್ಯಾಸ ಕಂಡುಬಂದಿದ್ದು ಸ್ಥಳೀಯರು ಮತ್ತು ಪ್ರವಾಸಿಗರಲ್ಲಿ ಭಾರೀ ಕುತೂಹಲ ಕೆರಳಿಸಿದೆ.

ಕ್ರಾಪ್ ಸರ್ಕಲ್ ಎಂದು ಕರೆಯಲ್ಪಟ್ಟಿರುವ ಈ ದೃಶ್ಯವನ್ನು ಜನರು ಕಣ್ಣಾರೆ ಕಂಡು ಚಕಿತಗೊಂಡಿದ್ದಾರೆ. ಈ ವಿಸ್ಮಯ ವೃತ್ತವು ಅತ್ಯಂತ ನಿಖರ ರೇಖಾಗಣಿತದ ವೃತ್ತದ ಆಕಾರದಲ್ಲಿದೆ. ಸ್ಥಳೀಯರು, ಪ್ರವಾಸಿಗಳು ಮತ್ತು ಮಕ್ಕಳು ಬೆಳೆ ವೃತ್ತದ ಮಧ್ಯೆ ಹೋಗಿ ಇದರ ಫೋಟೋಗಳನ್ನು ಕ್ಲಿಕ್ಕಿಸುತ್ತಿದ್ದಾರೆ.

ಪಕ್ಷಿ ನೋಟದಲ್ಲಿ ಗೋದಿ ಹೊಲದಲ್ಲಿ ಮೂಡಿರುವ ಈ ವೃತ್ತಾಕಾರದ ವಿಸ್ಮಯ ಹೆಚ್ಚು ಸ್ಪಷ್ಟವಾಗಿ ಕಾಣಿಸುತ್ತದೆ. ಈ ವಿಸ್ಮಯ ವೃತ್ತವನ್ನು ನೋಡಿ ಜನರು ಒಂದೊಂದು ರೀತಿಯಲ್ಲಿ ವಿಶ್ಲೇಷಣೆ ಮಾಡುತ್ತಿದ್ದಾರೆ.

ಇದು ರಾತ್ರೋ ರಾತ್ರಿ ಯಾರೋ ಮನುಷ್ಯರು ಮಾಡಿರುವ ಕೆಲಸ ಎಂದು ಕೆಲವರು ಹೇಳುತ್ತಿದ್ದರೆ, ಇನ್ನು ಹಲವರು ಇದು ಖಂಡಿತ ಮಾನವರ ಕೆಲಸವಲ್ಲ.

ಯಾವುದೇ ಪ್ರಾಣಿ ಈ ರೀತಿ ಮಾಡಿದೆ ಎಂದು ವಾದಿಸುತ್ತಿದ್ದಾರೆ. ಮತ್ತೆ ಕೆಲವರು ಇದು ಗಾಳಿಯ ಶಕ್ತಿಯಿಂದ ಆದ ವಿನ್ಯಾಸ ಎಂದು ಹೇಳುತ್ತಿದ್ದಾರೆ. ವೈಜ್ಞಾನಿಕ ಮನೋಭಾವ ಇರುವವರು ಇದು ಪತ್ತೆಯಾಗದ ಭೂ ಶಕ್ತಿ ಕ್ಷೇತ್ರಗಳಿಂದಲೋ ಅಥವಾ ಆಕ್ಷಾಂಶ ಮತ್ತು ರೇಖಾಂಶಗಳ ಚಲನೆಯಿಂದಲೋ ಆಗಿರುವ ವಿಶಿಷ್ಟ ವಿನ್ಯಾಸ ಎಂದು ತರ್ಕ ಮಂಡಿಸಿದ್ದಾರೆ.

Facebook Comments

Sri Raghav

Admin