ಬಿಗ್ ಬ್ರೇಕಿಂಗ್ : ಉಪಚುನಾವಣೆಗೆ ಬಿಜೆಪಿ ಹುರಿಯಾಳುಗಳ ಪಟ್ಟಿ ರಿಲೀಸ್..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು : ಪ್ರತಿಷ್ಟೆಯ ಕಣವಾಗಿ ಪರಿಣಮಿಸಿರುವ ರಾಜ್ಯದ ಮೂರು ಕ್ಷೇತ್ರದ ಉಪಚುನಾವಣೆಗೆ ಆಡಳಿತಾರೂಢ ಬಿಜೆಪಿ ಅಭ್ಯರ್ಥಿಗಳ ಹೆಸರನ್ನು ಪ್ರಕಟಿಸಿದೆ. ಜಿದ್ದಾಜಿದ್ದಿನ ಕಣವಾಗಿರುವ ಬೆಳಗಾವಿ ಲೋಕಸಭಾ ಕ್ಷೇತ್ರದ ಉಪಚುನಾವಣೆಗೆ ಕೇಂದ್ರದ ಮಾಜಿ ಸಚಿವ ದಿ.ಸುರೇಶ್ ಅಂಗಡಿ ಪತ್ನಿ ಮಂಗಳ ಅಂಗಡಿಗೆ ಟಿಕೆಟ್ ನೀಡುವ ಮೂಲಕ ಅನುಕಂಪದ ಲಾಭ ಪಡೆಯಲು ಮುಂದಾಗಿದೆ.

ನಿರೀಕ್ಷೆಯಂತೆ ಮಸ್ಕಿ ವಿಧಾನಸಭಾ ಕ್ಷೇತ್ರಕ್ಕೆ ಮಾಜಿ ಶಾಸಕ ಪ್ರತಾಪ್ ಗೌಡ ಪಾಟೀಲ್ ಗೆ ಮಣೆಹಾಕಲಾಗಿದೆ. ಭಾರೀ ಹಣಾಹಣಿಯಿಂದ ಕೂಡಿರುವ ಬಸವಕಲ್ಯಾಣಕ್ಕೆ ಶರಣು ಸಲಗಾರ ಗೆ ಟಿಕೆಟ್ ನೀಡಲಾಗಿದೆ. ಗುರುವಾರ ಸಂಜೆ ಬಿಜೆಪಿ ಕೇಂದ್ರ ಚುನಾವಣಾ ‌ಸಮಿತಿ ರಾಜ್ಯದ ಮೂರು ಕ್ಷೇತ್ರಗಳಿಗೆ ಟಿಕೆಟ್ ಘೋಷಣೆ ಮಾಡಿದ್ದು, ಸಾಕಷ್ಟು ಅಳೆದು ತೂಗಹಾಕಿಯೇ ಅಂತಿಮಗೊಳಿಸಿದೆ.

ಬೆಳಗಾವಿ ಲೋಕಸಭಾ ಕ್ಷೇತ್ರಕ್ಕೆ ಕಾಂಗ್ರೆಸ್ ಕೆಪಿಸಿಸಿ ಕಾಯಾ9ಧ್ಯಕ್ಷ ಸತೀಶ್ ಜಾರಕಿಹೊಳಿಗೆ ಮಣೆಹಾಕುವ ಸಾಧ್ಯತೆ ಇರುವ ಕಾರಣ, ಬಿಜೆಪಿ ಕೂಡ ಪ್ರಬಲ ಅಭ್ಯಥಿ9ಯನ್ನೇ ಕಣಕ್ಕೀಳಿಸಿದೆ. ಈ ಮೊದಲು ಇದೇ ಕ್ಷೇತ್ರದಿಂದ ಸುರೇಶ್ ಅಂಗಡಿ ಪುತ್ರಿ ಶ್ರದ್ದಾ ಶೆಟ್ಟರ್ ಹೆಸರು ಕೇಳಿ ಬಂದಿತ್ತು.

ಯಾವಾಗ ಕಾಂಗ್ರೆಸ್ ಸತೀಶ್ ಜಾರಕಿಹೊಳಿ ಅಭ್ಯಥಿ9ಯನ್ನಾಗಿಸಲು ಮುಂದಾಯಿತೋ ಬಿಜೆಪಿ ಕೂಡ ಅನುಕಂಪದ ಲಾಭ ಪಡೆಯುವ ಲೆಕ್ಕಾಚಾರದಿಂದಲೇ ಮಂಗಳ ಅಂಗಡಿಗೆ ಮಣೆಹಾಕಿದೆ. ವಿಶೇಷ ಎಂದರೆ ಬಿಜೆಪಿ ಕುಟುಂಬ ರಾಜಕಾರಣಕ್ಕೆ ಮಣೆ ಹಾಕುತ್ತಿರಲಿಲ್ಲ.

ಈ ಹಿಂದೆ ಕೇಂದ್ರದ ಮಾಜಿ‌ ಸಚಿವ ದಿ.ಅನಂತ್ ಕುಮಾರ್ ಅವರು ಪ್ರತಿನಿಧಿಸುತ್ತಿದ್ದ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರಕ್ಕೆ ಅವರ ಪತ್ನಿ ತೇಜಶ್ವಿನಿ ಅನಂತ್ ಕುಮಾರ್ ಅವರಿಗೆ ಟಿಕೆಟ್ ನೀಡಬೇಕೆಂಬ ಬೇಡಿಕೆ ಎಂಬ ಅಭಿಪ್ರಾಯ ಕೇಳಿ ಬಂದಿತ್ತು. ಕೊನೆಗೆ ಅಚ್ಚರಿಯ ಬೆಳವಣಿಗೆಯಲ್ಲಿ ಇದೇ ಕ್ಷೇತ್ರದಿಂದ ತೇಜಸ್ಚಿ ಸೂಯ9 ಟಿಕೆಟ್ ನೀಡಲಾಗಿತ್ತು.

ಇನ್ನು ಈ ಮೊದಲೇ ಕೊಟ್ಟ ಮಾತಿನಂತೆ ರಾಯಚೂರು ಜಿಲ್ಲೆಯ ಮಸ್ಕಿ ವಿಧಾನಸಭಾ ಕ್ಷೇತ್ರಕ್ಕೆ ಪ್ರತಾಪ್ ಗೌಡ ಪಾಟೀಲ್ ಗೆ ಮಣೆ ಹಾಕಲಾಗಿದೆ. ಕಾಂಗ್ರೆಸ್ ಈ ಕ್ಷೇತ್ರದಿಂದ ಬಸವನಗೌಡ ತುರವಿಹಾಳ್ ಗೆ ಈಗಾಗಲೇ ಟಿಕೆಟ್ ನೀಡಿದೆ. ಅಚ್ಚರಿಯ ಬೆಳವಣಿಗೆ ಎಂಬಂತೆ ಬಸವಕಲ್ಯಾಣ ಕ್ಷೇತ್ರದಿಂದ ಶರಣು ಸಲಗಾರ ಟಿಕೆಟ್ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಇ ಮೊದಲು ಇದೇ ಕ್ಷೇತ್ರದಿಂದ ಮಾಜಿ ಶಾಸಕ ಮಲ್ಲಿಕಾರ್ಜುನ ಖೂಬಾ , ಸೂಯ9ಕಾಂತ ನಾಗಮಾರಪಲ್ಲಿ ಹಾಗೂ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಪುತ್ರ ಬಿ.ವೈ.ವಿಜೇಯೇಂದ್ರ ಹೆಸರುಗಳು ಕೇಳಿ ಬಂದಿದ್ದವು.

ಅಂತಿಮವಾಗಿ ವರಿಷ್ಠರು ಶರಣು ಸಾಲಗಾರ ಗೆ ಟಿಕೆಟ್ ಘೋಷಣೆ ಮಾಡಲಾಗಿದೆ. ಕೇಂದ್ರದಲ್ಲಿ ರೈಲ್ವೆ ಖಾತೆ ರಾಜ್ಯ ಸಚಿವರಾಗಿದ್ದ ಸುರೇಶ್ ಅಂಗಡಿ ಕೋವಿಡ್ – 19ಗೆ ತುತ್ತಾಗಿದ್ದಾರು. ಇದೇ ರೀತಿ ಬಸವಕಲ್ಯಾಣದ‌ ಶಾಸಕರಾಗಿದ್ದ ನಾರಾಯಣರಾವ್ ಕೂಡ ಕೋವಿಡ್ ನಿಂದಾಗಿ ಸಾವನ್ನಪ್ಪಿದ್ದರು.

ಪ್ರತಾಪ್ ಗೌಡ ಪಾಟೀಲ್ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಬಿಜೆಪಿ ಸೇರಿದ್ದರು. ಏಪ್ರಿಲ್ 17 ರಂದು ಮೂರು ಕ್ಷೇತ್ರಗಳಿಗೆ ಮತದಾನ ನಡೆಯಲಿದ್ದು, ಮೇ 2 ರಂದು ಫಲಿತಾಂಶ ಪ್ರಕಟವಾಗಲಿದೆ. ಈ ಮೂರು ಕ್ಷೇತ್ರಗಳ ಉಪಚುನಾವಣೆಯ ಫಲಿತಾಂಶ ರಾಜ್ಯ ರಾಜಕೀಯದಲ್ಲಿ ಭಾರೀ ಕುತೂಹಲ ಕೆರಳಿಸಿದ್ದು, ಇದು ಆಡಳಿತ ಮತ್ತು ಪ್ರತಿಪಕ್ಷಗಳಿಗೆ ದಿಕ್ಸೂಚಿಯಾಗಲಿದೆ ಎಂದು ವ್ಯಾಖ್ಯಾನಿಸಲಾಗಿದೆ.

Facebook Comments

Sri Raghav

Admin