ಯಾರು ಮುಖ್ಯಮಂತ್ರಿ ಪರ – ವಿರೋಧ ಹೇಳಿಕೆ ನೀಡುವಂತಿಲ್ಲ : ಸಚಿವ ಅಶೋಕ್

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಜೂ.7- ಯಾರೇ ಆದರೂ ಹೇಳಿಕೆಗಳನ್ನು ಮುಖ್ಯಮಂತ್ರಿ ವಿರೋಧವಾಗಿಯಾಗಲಿ, ಪರವಾಗಿಯಾಗಲಿ ನೀಡುವಂತಿಲ್ಲ. ಪಕ್ಷದ ಬದ್ದತೆಗೆ ಮಾತ್ರ ಇರಬೇಕು ಎಂದು ಕಂದಾಯ ಸಚಿವ ಆರ್ ಅಶೋಕ್ ಹೇಳಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಂತಹ ಹೇಳಿಕೆಗಳನ್ನು ನೀಡಿದವರ ವಿರುದ್ಧ ಕ್ರಮಕೈಗೊಳ್ಳಲಾಗುತ್ತದೆ.

ಈಗಾಗಲೇ ಬಿಜೆಪಿ ರಾಜ್ಯಾಧ್ಯಕ್ಷರ ನೇತೃತ್ವದಲ್ಲಿ ಒಂದು ಸಮಿತಿ ಮಾಡಲಾಗಿದ್ದು, ಎಲ್ಲವನ್ನೂ ಸಮಿತಿ ನೋಡಿಕೊಳ್ಳುತ್ತೆ. ಬಿಜೆಪಿ ಕಚೇರಿಯಲ್ಲಿ ಸಭೆ ಮಾಡಿ ಸಮಿತಿ ರಚನೆ ಮಾಡಿದ್ದೇವೆ. ಸಮಿತಿಯಲ್ಲಿ ಪ್ರಧಾನ ಕಾರ್ಯದರ್ಶಿ, ಮುಖ್ಯಮಂತ್ರಿ ಸೇರಿ ಮೂರು ಜನ ಸಚಿವರ ಇದ್ದೇವೆ.
ಇನ್ನೊಬ್ಬರು ಉತ್ತರ ಕರ್ನಾಟಕ ಸಚಿವರು ಸಮಿತಿಗೆ ಸೇರುತ್ತಾರೆ. ಸಮಿತಿಯ ಉದ್ದೇಶ ಪರ – ವಿರೋಧ ಚರ್ಚೆ ಶುರುವಾದ್ರೆ ಅದನ್ನು ತಡೆಯೋದು ಎಂದು ಹೇಳಿದರು.

ಮುಖ್ಯಮಂತ್ರಿ ಬದಲಾವಣೆಯ ಗಾಳಿ ಸುದ್ದಿಗೆ ನಿನ್ನೆ ಅಂತ್ಯ ಹಾಡಿದ್ದೇವೆ. ಮುಂದೆ ಯಾರು ಸಹ ಪರವಾಗಿ ಆಗಲಿ – ವಿರೋಧವಾಗಿ ಆಗಲಿ‌ ಮಾತಾಡುವಂತಿಲ್ಲ. ಇದಕ್ಕಾಗಿ ರಾಜ್ಯಾಧ್ಯಕ್ಷರು ಸೂಚನೆ ನೀಡಿದ್ದಾರೆ. ಒಂದು ವೇಳೆ ಮಾತಾಡಿದರೆ ಕ್ರಮ ತೆಗೆದುಕೊಳ್ಳುತ್ತೇವೆ ಎಂದರು.

Facebook Comments