ಜೋರಾದ ಪಕ್ಷಾಂತರ ಪರ್ವ, ಕೈ-ಕಮಲ ವಾಗ್ವಾದ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಜ.26- ರಾಜ್ಯ ರಾಜ ಕಾರಣದಲ್ಲಿ ಇಂದು ಕೂಡ ಪಕ್ಷಾಂತರ ಪರ್ವದ ರಾಜಕಾರಣ ಮತ್ತೆ ಸದ್ದು ಮಾಡಿದ್ದು, ಕಾಂಗ್ರೆಸ್ ಮತ್ತು ಬಿಜೆಪಿ ನಾಯಕರ ನಡುವೆ ಭಾರೀ ವಾಕ್ಸಮರ ಮುಂದುವರೆದಿದೆ. ಬುಟ್ಟಿಯಲ್ಲಿ ಹಾವಿದೆ ಎಂದು ಪುಂಗಿ ಊದುವುದನ್ನು ನಿಲ್ಲಿಸಿ. ನಿಮಗೆ ತಾಕತ್ತಿದ್ದರೆ ಶಾಸಕರ ಹೆಸರನ್ನು ಬಹಿರಂಗಪಡಿಸಿ ಎಂದು ಬಿಜೆಪಿ ನಾಯಕರು ಕಾಂಗ್ರೆಸ್‍ನವರಿಗೆ ತಿರುಗೇಟು ನೀಡಿದ್ದಾರೆ.

ಇದಕ್ಕೆ ಅಷ್ಟೇ ತೀಕ್ಷ್ಣವಾಗಿ ಪ್ರತಿಕ್ರಿಯಿಸಿರುವ ಕಾಂಗ್ರೆಸ್ ನಾಯಕರು, ನಮ್ಮ ಬುಟ್ಟಿಯಲ್ಲಿ ಹಾವಿದೆಯೋ ಲಕ್ಷ್ಮಿ ಪಟಾಕಿ ಇದೆಯೋ ಸದ್ಯದಲ್ಲೇ ಗೊತ್ತಾಗಲಿದೆ. ಅಲ್ಲಿಯ ತನಕ ಕಾದು ನೋಡಿ ಎಂದು ಬಿಜೆಪಿ ಬುಡಕ್ಕೆ ಬಾಂಬ್ ಸಿಡಿಸಿದ್ದಾರೆ.

ಬಿಜೆಪಿಯಿಂದ ಬರುವ ಶಾಸಕರ ಹೆಸರನ್ನು ಬಹಿರಂಗಪಡಿಸಬೇಕೆಂದು ಕಂದಾಯ ಸಚಿವ ಆರ್.ಅಶೋಕ್ ಕಾಂಗ್ರೆಸ್ ನಾಯಕರಿಗೆ ಬಹಿರಂಗ ಸವಾಲು ಹಾಕಿದ್ದು, ನನ್ನ ಜೊತೆಯೂ 20 ಶಾಸಕರು ಸಂಪರ್ಕದಲ್ಲಿದ್ದಾರೆ. ಸೂಕ್ತ ಕಾಲದಲ್ಲಿ ಅವರ ಹೆಸರನ್ನು ಬಹಿರಂಗಪಡಿಸುತ್ತೇನೆ ಎಂದು ಕೈ ಮುಖಖಂಡರಿಗೆ ಎದುರೇಟು ನೀಡಿದರು.

ಇದಕ್ಕೆ ಉತ್ತರಿಸಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಒಬ್ಬ ಸಚಿವರು ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯನವರ ಜೊತೆ ಸಂಪರ್ಕದಲ್ಲಿದ್ದಾರೆ. ಮತ್ತೋರ್ವ ಶಾಸಕ ಹೋಗಲು ಸಿದ್ದರಿದ್ದಾರೆ ಎಂದು ಶಾಸಕ ಬಸನಗೌಡ ಪಾಟೀಲ್ ಹೇಳಿರುವುದು ಏನನ್ನೂ ಸೂಚಿಸುತ್ತದೆ ಎಂದು ಪ್ರಶ್ನಿಸಿದರು.

Facebook Comments