ಬಿಜೆಪಿ ಸೇರಿದ ಕಾಂಗ್ರೆಸ್, ಜೆಡಿಎಸ್ ನಾಯಕರು

ಈ ಸುದ್ದಿಯನ್ನು ಶೇರ್ ಮಾಡಿ

ದಾಸರಹಳ್ಳಿ, ಜೂ.1- ಕೊರೊನಾ ಲಾಕ್ ಡೌನ್ ನಿಂದ ಸಂಕಷ್ಟಕ್ಕೀಡಾಗಿರುವ ಅಸಹಾಯಕರ ಹಸಿವು ನೀಗಿಸಿ ಮಾಜಿ ಶಾಸಕ ಮುನಿರಾಜು ಜನಾನುರಾಗಿಯಾಗಿದ್ದಾರೆ. ಕ್ಷೇತ್ರದಲ್ಲಿ ಮುನಿರಾಜು ಅವರ ದಕ್ಷ ನಾಯಕತ್ವ ಜನಪರ ಕಾಳಜಿ ಮೆಚ್ಚಿ ಹಾಗೂ ಬಿಜೆಪಿ ಪಕ್ಷದ ತತ್ವ ಸಿದ್ಧಾಂತ ಒಪ್ಪಿ ಜೆಡಿಎಸ್ ಹಾಗೂ ಕಾಂಗ್ರೆಸ್ ತೊರೆದು ಮುಖಂಡರು ಬಿಜೆಪಿ ಸೇರ್ಪಡೆಯಾಗುತ್ತಿದ್ದಾರೆ.

ಇತ್ತೀಚೆಗೆ ರಾಜಗೋಪಾಲನಗರ ವಾರ್ಡ್‍ನ ಪಾಲಿಕೆ ಸದಸ್ಯೆ ಪದ್ಮಾವತಿ ನರಸಿಂಹಮೂರ್ತಿ ಜೆಡಿಎಸ್ ತೊರೆದು ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ. ಪಕ್ಷಾಂತರ ಪರ್ವ ಮುಂದುವರೆದಿದ್ದು ಪೀಣ್ಯ ಕೈಗಾರಿಕಾ ಪ್ರದೇಶ ವಾರ್ಡ್ ನ ಪಾಲಿಕೆ ಸದಸ್ಯೆ ಪತಿ ಹಾಗೂ ಚೊಕ್ಕಸಂದ್ರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ಎಲï. ತಿಮ್ಮನಂಜಯ್ಯ,ಯುವ ಬ್ರಿಗೇಡ್ ಭರತ್ ರಮೇಶ್ ಹಾಗೂ ಅಪಾರ ಬೆಂಬಲಿಗರು ಬಿಜೆಪಿಗೆ ಸೇರ್ಪಡೆಯಾದರು.

ಈ ವೇಳೆ ಮಾತನಾಡಿದ ಮಾಜಿ ಶಾಸಕ ಎಸ್. ಮುನಿರಾಜು, ಸಾಮಾನ್ಯ ಕಾರ್ಯಕರ್ತನು ಉನ್ನತ ಹುದ್ದಯನ್ನು ಅಲಂಕರಿಸುವ ಅವಕಾಶ ಇರುವುದು ಭಾರತೀಯ ಜನತಾ ಪಕ್ಷದಲ್ಲಿ ಮಾತ್ರ ಎಂದರು.  ಕಾಂಗ್ರೆಸ್ ಹಾಗೂ ಬಿಜೆಪಿ ಪಕ್ಷಗಳಲ್ಲಿ ವಂಶಪಾರಂಪರ್ಯ ರಾಜಕಾರಣ ಮನೆ ಮಾಡಿದೆ. ದೇಶದ ಹಿತಕ್ಕಿಂತ ಅವರಿಗೆ ಕುಟುಂಬದ ಕಲ್ಯಾಣವೇ ಮುಖ್ಯವಾಗಿರುವುದರಿಂದ ಆ ಪಕ್ಷಗಳಲ್ಲಿನ ಮುಖಂಡರು ನಾಯಕರ ನಡೆಯಿಂದ ಬೆಸತ್ತು ಬಿಜೆಪಿ ಸೇರಿದ್ದಾರೆ.

ಬಿಜೆಪಿಗೆ ಸೇರ್ಪಡೆಯಾಗಿರುವ ಮುಖಂಡರ ಸಂಘಟನಾ ಚಾತುರ್ಯ ಹಾಗೂ ಸಾಮಥ್ರ್ಯಕ್ಕನುಗುಣವಾಗಿ ಮುಂಬರುವ ದಿನಗಳಲ್ಲಿ ಪಕ್ಷ ತಕ್ಕ ಹುದ್ದ ಜವಾಬ್ದಾರಿ ನೀಡಲಿದ್ದು ಎಲ್ಲರೂ ಒಗ್ಗೂಡಿ ಪಕ್ಷವನ್ನು ಬಲಪಡಿಸೋಣ ಎಂದರು ದಾಸರಹಳ್ಳಿ ಬಿಜೆಪಿ ಮಂಡಲದ ಅಧ್ಯಕ್ಷ ಎನ್. ಲೋಕೇಶ್ ಸಾಮಾನ್ಯ ಕಾರ್ಯಕರ್ತನಾಗಿದ್ದ ನನ್ನನ್ನು ಪಕ್ಷ ಗುರುತಿಸಿ ವಾರ್ಡ್ ಅಧ್ಯಕ್ಷನಾಗಿ ಮಾಡಿ ನಂತರದಲ್ಲಿ ಪಾಲಿಕೆ ಚುನಾವಣೆಯಲ್ಲಿ ಟಿಕೆಟ್ ನೀಡಿತ್ತು ಜನತೆಯೂ ಆಶೀರ್ವದಿಸಿದ್ದರಿಂದ ಕಾಪೆರ್ರೇರ್ಟ ಆದೆ.

ಜನಪರ ಕಾಳಜಿ ಪಕ್ಷನಿಷ್ಠೆಯನ್ನು ಪರಿಗಣಿಸಿ ಕ್ಷೇತ್ರದ ಅಧ್ಯಕ್ಷನಾಗಿ ನೇಮಕ ಮಾಡಿ ಜವಾಬ್ದಾರಿ ನೀಡಿದ್ದು ಕಾರ್ಯಕರ್ತರು ಪಕ್ಷ ಸಂಘಟನೆ ಹಾಗೂ ಬಲವರ್ಧನೆಗೆ ಶ್ರಮಿಸಿದರೆ ಪರಿಶ್ರಮಕ್ಕೆ ತಕ್ಕ ಫಲ ದೊರೆಯುತ್ತದೆ ಎಂದರು. ಬಿಜೆಪಿ ಮುಖಂಡರಾದ ಗಂಗರಾಜು, ಸತೀಶ್ , ಶರತ್ ಹೊಂಬಾಳೆ, ಭರತ್ ರಮೇಶ್, ಪಿ.ಎಚ್,ರಾಜು, ರವಿಗೌಡ, ವಿನೋದ್ ಗೌಡ ಮೊದಲಾದವರಿದ್ದರು.

Facebook Comments