ದೋಸ್ತಿ ಸರ್ಕಾರಕ್ಕೆ ಡೆಡ್ ಲೈನ್ ನೀಡಿದ ರಾಜ್ಯಪಾಲರು..! ಬಿಜೆಪಿ ಅಹೋರಾತ್ರಿ ಧರಣಿ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು. ಜು. 18 : ಹಿಂದೆಂದೂ ಕಾಣದ ರಾಜಕೀಯ ಬೃಹನ್ ನಾಟಕಕ್ಕೆ ಸಾಕ್ಷೀಯಾದ ಕರ್ನಾಟಕ ವಿಧಾನಸಭೆ, ಆಡಳಿತ ಮತ್ತು ಪ್ರತಿಪಕ್ಷಗಳ ನಡುವೆ ಭಾರೀ ನಾಟಕೀಯ ನಡೆದು ವಿಶ್ವಾಸ ಮತ ನಿರ್ಣಯದ ಮೇಲೆ ನಡೆದ ಕಲಾಪ ಶುಕ್ರವಾರಕ್ಕೆ ಮುಂದೂಡಿಕೆಯಾಗಿದೆ.

ಏತನ್ಮಧ್ಯೆ ನಾಳೆ ಮಧ್ಯಾಹ್ನ 1.30 ರೊಳಗೆ ವಿಧಾನಸಭೆಯಲ್ಲಿ ಬಹುಮತ ಸಾಬೀತುಪಡಿಸುವಂತೆ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಗೆ ವಿ.ಆರ್.ವಾಲಾ ಪತ್ರ ಬಬರೆದಿದ್ದಾರೆ. ಇದರೊಂದಿಗೆ ಮೈತ್ರಿ ಸರ್ಕಾರಕ್ಕೆ ರಾಜ್ಯಪಾಲರು ಡೆಡ್ ಲೈನ್ ನೀಡಿದ್ದಾರೆ.

ಸರ್ಕಾರ ಹಾಗೂ ವಿಧಾನಸಭೆಯ ಸ್ಪೀಕರ್ ಉದ್ದೇಶ ಪೂರ್ವಕವಾಗಿ ವಿಳಂಬ ಧೋರಣೆ ಅನುಸರಿಸುತ್ತಿದ್ದಾರೆಂದು ಕಿಡಿಕಾರಿರುವ ಪ್ರತಿಪಕ್ಷ ಬಿಜೆಪಿ ,ಇಂದೇ ಬಹುಮತ ಸಾಬೀತುಪಡಿಸಬೇಕೆಂದು ಪಟ್ಟುಹಿಡಿದು
ಸದನದಲ್ಲೇ ಪಟ್ಟು ಹಿಡಿದಿದೆ. ಪ್ರತಿಪಕ್ಷ ಬಿಜೆಪಿ ನಾಯಕರು ವಿಶ್ವಾಸ ನಿರ್ಣಯ ಮಂಡಿಸುವವರೆಗೂ ಸದನ ಬಿಟ್ಟು ಕದಲುವುದಿಲ್ಲ ಎಂದು ಅಹೋರಾತ್ರಿ ಧರಣಿ ನಡೆಸುತ್ತಿದ್ದಾರೆ.

ವಿಧಾನಸಭಾ ಮೊಗಸಾಲೆಯಲ್ಲಿ ರಾತ್ರಿ ಕಳೆಯಲಿರುವ ಬಿಜೆಪಿ ಶಾಸಕರು ನಾಯಕರಾದ ಶ್ರೀ ಬಿ.ಎಸ್.ಯಡಿಯೂರಪ್ಪ ಅವರ ನೇತೃತ್ವದಲ್ಲಿ ಸಮಾಲೋಚನೆ ನಡೆಸಿದರಲ್ಲದೇ ಸ್ಥಳದಲ್ಲೇ ಭೋಜನ ಸ್ವೀಕರಿಸಿದರು.  ಯಡಿಯೂರಪ್ಪ ಸೇರಿದಂತೆ ಪಕ್ಷದ 105 ಶಾಸಕರು ಆಹೋರಾತ್ರಿ ಸದನದಲ್ಲೇ ಉಳಿದಿದ್ದಾರೆ.

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ

Sri Raghav

Admin