ಪ್ರೀತಂಗೌಡ ವಿಡಿಯೋ ವೈರಲ್..! ಕೆಂಪಾಯ್ತು ಜೆಡಿಎಸ್ ಕಾರ್ಯಕರ್ತರ ಕಣ್ಣು..! (Video)

ಈ ಸುದ್ದಿಯನ್ನು ಶೇರ್ ಮಾಡಿ

ಹಾಸನ, ಏ.8-ಲೋಕಸಭೆ ಚುನಾವಣೆ ಕಾವು ಏರತೊಡಗಿದ್ದು, ರಾಜಕೀಯ ಪಕ್ಷಗಳ ಮೇಲಾಟ ನಡೆಯುತ್ತಿದೆ. ಶಾಸಕ ಪ್ರೀತಮ್‍ಗೌಡ ಕಾಂಗ್ರೆಸ್ ಮುಖಂಡರ ಸಭೆಯಲ್ಲಿ ನಡೆಸಿರುವ ಮಾತುಕತೆಯ ವಿಡಿಯೋ ವೈರಲ್ ಆಗಿದ್ದು, ಜೆಡಿಎಸ್ ಕಾರ್ಯಕರ್ತರನ್ನು ಕೆರಳಿಸಿದೆ.

ಪ್ರಸಕ್ತ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಎ.ಮಂಜು ಅವರ ಪರವಾಗಿ ಕೆಲಸ ಮಾಡುವಂತೆ ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರಿಗೆ ಮಾಡಿರುವ ಮನವಿ ಜೆಡಿಎಸ್ ಕೆಂಗಣ್ಣಿಗೆ ಗುರಿಯಾಗಿದೆ.

ಸಭೆಯಲ್ಲಿ ಪ್ರೀತಮ್‍ಗೌಡ ಮಾತನಾಡಿರುವ ವಿಚಾರ ಬಯಲಾಗಿದ್ದು, ಜೆಡಿಎಸ್ ಅಭ್ಯರ್ಥಿ ಸೋಲಿಸುವಂತೆ ನೀಡಿರುವ ಚುನಾವಣಾ ತಂತ್ರಗಾರಿಕೆ ಬಗ್ಗೆ ಜೆಡಿಎಸ್ ಕಾರ್ಯಕರ್ತರು ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಪ್ರತಿಯಾಗಿ ಶಾಸಕರ ಬಣ್ಣದ ಮಾತು ನಂಬಲು ಹಾಸನದ ಜನತೆ ದಡ್ಡರಲ್ಲ ಎಂಬ ಪೋಸ್ಟ್ ಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಹೀಗೆ ಹಾಸನ ಲೋಕಸಭಾ ಚುನಾವಣೆ ಕಣ ಆರೋಪ-ಪ್ರತ್ಯಾರೋಪಗಳಿಂದ ಕೂಡಿದ್ದು, ದಿನದಿಂದ ದಿನಕ್ಕೆ ಕಾವೇರತೊಡಗಿದೆ.

ವಿಡಿಯೋದಲ್ಲಿ ಪ್ರೀತಮ್ ಗೌಡ ಹೇಳಿದ್ದೇನು..?
ಹಾಸದಲ್ಲಿ ಮೈತ್ರಿ‌ ಅಭ್ಯರ್ಥಿ ಪ್ರಜ್ವಲ್ ಇನ್ನೂ ಹುಡುಗ.ಈಗಲೇ ಗೆಲ್ಲಿಸಿದರೆ ದುರಹಂಕಾರ ಬರುತ್ತದೆ ಅವನಿಗೆ ಮೋಸದಿಂದಲೇ‌ ಸೋಲಿಸಿ. ಈಗ ಬೂತ್ ಗೆ ಒಂದು‌ ಲಕ್ಷ ನೀಡುತ್ತಿದ್ದಾರೆ. ಸೋತರೆ ಮುಂದಿನ ಚುನಾವಣೆಯಲ್ಲಿ ಐದು ಲಕ್ಷ ನೀಡುತ್ತಾರೆ‌.

ಸೋತಾಗಲೇ ಅವರು ಕಾರ್ಯಕರ್ತರನ್ನ ಕರೆದು ಕೆಲಸ ಕೊಡೊದು‌ ಎಂದು ಸಲಹೆ‌ ನೀಡಿದ್ದಾರೆ.
ಈಗ ನೀವು ಪ್ರಜ್ವಲ್ ಗೆಲ್ಲಿಸಿದರೆ ಅವನಿಗೆ ದುರಹಂಕಾರ ಹೆಚ್ಚಾಗುತ್ತೆ.ಮುಂದೆ ಯಾರನ್ನೂ ಸರಿಯಾಗಿ‌‌‌ ಮಾತನಾಡಿಸಲ್ಲ. ಈ ಚುನಾವಣೆಯಲ್ಲಿ ಅವನನ್ನು ಸೋಲಿಸಿ‌ ಎಂದು ಪ್ರೀತಂ ಕಾರ್ಯಕರ್ತ ರಲ್ಲಿ ಕರೆ ನೀಡಿದ್ದಾರೆ.

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ

Sri Raghav

Admin