ಖಾತೆಗೆ ಕ್ಯಾತೆ ತೆಗೆಯಲ್ಲ, ಯಾವುದೇ ಜವಾಬ್ದಾರಿ ವಹಿಸಿದರೂ ನಿಭಾಯಿಸುತ್ತೇನೆ : ಸುರೇಶ ಕುಮಾರ್

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಆ.20-ಮುಖ್ಯಮಂತ್ರಿಬಿ.ಎಸ್.ಯಡಿಯೂರಪ್ಪ ಅವರ ಖಾತೆಯಲ್ಲಿ ಇಂಥ ಖಾತೆಯೇ ಎಂದು ಕ್ಯಾತೆ ಮಾಡುವುದಿಲ್ಲ ಎಂದು ಮಾಜಿ ಸಚಿವ ಎಸ್.ಸುರೇಶ್‍ಕುಮಾರ್ ತಿಳಿಸಿದರು.

ನೂತನ ಸಚಿವರಾಗಿ ಪ್ರಮಾಣವಚನ ಸ್ವೀಕರಿಸುವ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿಯವರು ಯಾವುದೇ ಜವಾಬ್ದಾರಿ ವಹಿಸಿದರೂ ಅದನ್ನು ನಿಭಾಯಿಸಲು ಸಿದ್ಧ. ಆದರೆ ಇಂತಹ ಖಾತೆಯೇ ಬೇಕು ಎಂದು ಯಾವುದೇ ಕಾರಣಕ್ಕೂ ಕ್ಯಾತೆ ಮಾಡುವುದಿಲ್ಲ.

ಸಂಪುಟ ವಿಸ್ತರಣೆ ಮಾಡುವುದು ದೊಡ್ಡ ಕಸರತ್ತು. ಅದನ್ನು ನಮ್ಮ ನಾಯಕರು ಯಶಸ್ವಿಯಾಗಿ ನಿರ್ವಹಿಸಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಸುರೇಶ್‍ಕುಮಾರ್ ಅವರ ತಾಯಿ ಸುಶೀಲಮ್ಮ ಮಾತನಾಡಿ, ನಮ್ಮ ಮನೆಯಲ್ಲಿ ಮರಿಮೊಮ್ಮಗ ಹುಟ್ಟಿದ್ದಾನೆ.

ಅವನ ಕಾಲ್ಗುಣದಿಂದಲೇ ಮಗನಿಗೆ ಸಚಿವ ಸ್ಥಾನ ಸಿಕ್ಕಿದೆ. ದುಷ್ಟ ಶಕ್ತಿಗಳಿಂದ ದೂರ ಇದ್ದು, ನಿಷ್ಠೆಯಿಂದ ಕೆಲಸ ಮಾಡಲಿ ಎಂದು ಸುರೇಶ್‍ಕುಮಾರ್ ಅವರಿಗೆ ಹಾರೈಸಿದ್ದಾರೆ.ಆಸೆ ಅಪಾರವಿರುತ್ತದೆ. ಆದರೂ ಯಾವ ಜವಾಬ್ದಾರಿ ಕೊಟ್ಟರೂ ನಿಭಾಯಿಸುವ ಸಾಮಥ್ರ್ಯವಿದೆ.

ಸಚಿವ ಸ್ಥಾನಕ್ಕಾಗಿ ಪೈಪೋಟಿ ಇತ್ತು. ಸಚಿವ ಸ್ಥಾನ ಸಿಗದಿದ್ದರೆ ಬೇಸರ ಪಡುವುದು ಬೇಡ ಎಂದು ಮೊದಲೇ ಸುರೇಶ್‍ಕುಮಾರ್ ಹೇಳಿದ್ದರು. ಗಣೇಶ ನಮ್ಮನ್ನು ಕೈಬಿಟ್ಟಿಲ್ಲ ಎಂದು ತಿಳಿಸಿದರು.

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ

Sri Raghav

Admin