‘ಬಿಜೆಪಿ ಶಾಸಕರು ಸಿಂಹಗಳಿದ್ದಂತೆ, ಮಾರಾಟ ವಸ್ತುಗಳಲ್ಲ’ : ಈಶ್ವರಪ್ಪ

ಈ ಸುದ್ದಿಯನ್ನು ಶೇರ್ ಮಾಡಿ

ಕಲಬುರಗಿ,ಅ.4- ಬಿಜೆಪಿ ಶಾಸಕರು ಸಿಂಹಗಳಿದ್ದಂತೆ, ಮಾರಾಟ ವಸ್ತುಗಳಲ್ಲ. ಯಾರೂ ಕೂಡ ಪಕ್ಷ ತೊರೆಯಲ್ಲ. ಮೊದಲು ಕಾಂಗ್ರೆಸಿಗರು ತಮ್ಮವರನ್ನು ಉಳಿಸಿಕೊಳ್ಳಲಿ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಇಂದಿಲ್ಲಿ ಹರಿಹಾಯ್ದಿದ್ದಾರೆ.

ಕಾಂಗ್ರೆಸ್ ಮುಖಂಡ ಮಲ್ಲಿಕಾರ್ಜುನ ಖರ್ಗೆ ಅವರು ಪ್ರಧಾನಿ ವಿರುದ್ಧ ಲಘುವಾಗಿ ಮಾತನಾಡಿ ಅವರನ್ನು ಚಿಲ್ಲರೆ ಮನುಷ್ಯ ಎಂದು ಟೀಕಿಸಿದ್ದಾರೆ. ಮೋದಿ ಅವರ ಕಾರ್ಯವನ್ನು ವಿಶ್ವವೇ ಮೆಚ್ಚಿಕೊಂಡಿದೆ. ಅವರು ಚಿನ್ನದ ಗಟ್ಟಿ ಇದ್ದಂತೆ. ಕೂಡಲೇ ಖರ್ಗೆ ಅವರು ಕ್ಷಮೆ ಯಾಚಿಸಬೇಕು. ನನಗಂತೂ ಇದು ಭಾರೀ ನೋವು ತಂದಿದೆ ಎಂದು ಹೇಳಿದರು.

ದೇಶದ ಸಮಗ್ರತೆ ಹಾಗೂ ಏಕತೆಯನ್ನು ಕಾಪಾಡುವ ನಿಟ್ಟಿನಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ತೊಡಗಿರುವ ಸಂದರ್ಭದಲ್ಲಿ ಕೀಳುಮಟ್ಟದ ಹೇಳಿಕೆ ನೀಡುತ್ತಿರುವುದು ಅವರಿಗೆ ಶೋಭೆ ತರುವುದಿಲ್ಲ ಎಂದು ಟೀಕಿಸಿದ್ದಾರೆ.

ಕಾಂಗ್ರೆಸ್‍ನ ಕೆಲವರು ಬಿಜೆಪಿಯ 44 ಶಾಸಕರು ಪಕ್ಷ ತೊರೆದು ನಮ್ಮ ಜತೆ ಬರುತ್ತಾರೆ ಎಂದು ಹೇಳುತ್ತಿದ್ದಾರೆ. ಇದು ಅವರ ಕನಸಿನ ಮಾತು. ಯಾರೂ ಕೂಡ ಸಾಯುತ್ತಿರುವ ಪಕ್ಷಕ್ಕೆ ಹೋಗುವುದಿಲ್ಲ ಎಂದು ಲೇವಡಿ ಮಾಡಿದ್ದಾರೆ.

ಚುನಾವಣೆ ಬಂದರೆ ಕಾಂಗ್ರೆಸ್‍ಗೆ ನಡುಕ ಶುರುವಾಗುತ್ತದೆ. ಮುಂದಿನ ಸಿಂಧಗಿ ಹಾಗೂ ಹಾನಗಲ್ ಉಪಚುನಾವಣೆಯಲ್ಲಿ ಬಿಜೆಪಿ ಗೆಲುವು ನಿಶ್ಚಿತ ಎಂದು ಅವರು ಹೇಳಿದರು.

2024ರ ವೇಳೆಗೆ ಮನೆ ಮನೆಗೆ ಶುದ್ಧ ಕುಡಿಯುವ ನೀರು ನೀಡುವ ಉದ್ದೇಶದಿಂದ ರಾಜ್ಯದ 750 ಪಂಚಾಯಿತಿಗಳನ್ನು ಆಯ್ಕೆ ಮಾಡಿಕೊಂಡು 25 ಲಕ್ಷ ರೂ.ಗಳನ್ನು ನೀಡಲಾಗುತ್ತಿದೆ.

Facebook Comments