ಪಕ್ಷವನ್ನೇ ನಿಭಾಯಿಸಲಾಗದ ರಾಹುಲ್ ದೇಶವನ್ನು ನಿಭಾಯಿಸಬಲ್ಲರೇ..? : ಕಟೀಲ್

ಈ ಸುದ್ದಿಯನ್ನು ಶೇರ್ ಮಾಡಿ

ಹುಬ್ಬಳ್ಳಿ, ಅ.19- ರಾಹುಲ್ ಹಾಗೂ ಸೋನಿಯಾ ಗಾಂ ಅವರು ತಮ್ಮ ಪಕ್ಷವನ್ನೇ ನಿಬಾಯಿಸಲಾಗದವರು ಪ್ರಧಾನಿ ಬಗ್ಗೆ ಇಲ್ಲ ಸಲ್ಲದ ಟೀಕೆಗಳನ್ನು ಮಾಡುತ್ತಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‍ಕುಮಾರ್ ವ್ಯಂಗ್ಯವಾಡಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಹುಲ್ ಗಾಂಧಿಗೆ ಪಕ್ಷವನ್ನೇ ಸಂಭಾಳಿಸಲು ಆಗುತ್ತಿಲ್ಲ. ಸೋನಿಯಾ ಗಾಂಧಿಗೂ ಆಗುತ್ತಿಲ್ಲ. ಇಂತಹವರು ಪ್ರಧಾನಿ ಬಗ್ಗೆ ಮಾತನಾಡುವ ಯಾವ ನೈತಿಕತೆ ಇದೆ ಎಂದು ಕಿಡಿಕಾರಿದರು.

ಕಾಂಗ್ರೆಸ್ ನವರು ಪಕ್ಷ ಕಟ್ಟಲು ವಿಲವಿಲ ಒದ್ದಾಡುತ್ತಿದ್ದಾರೆ. ಇಂತಹವರು ನಮ್ಮ ಪ್ರಧಾನಿ ಬಗ್ಗೆ ಹೆಬ್ಬೆಟ್ಟು ಅಂತ ಟೀಕೆ ಮಾಡ್ತಾರೆ. ನಮ್ಮ ಪ್ರಧಾನಿ 7 ವರ್ಷದ ಆಡಳಿತದಲ್ಲಿ ಬಲಿಷ್ಠ ರಾಷ್ಟ್ರವನ್ನಾಗಿ ಮಾಡಿದ್ದಾರೆ. ಪಾಕಿಸ್ತಾನ ಹಾಗೂ ಚೀನಾಗೆ ಆಗಾಗ ತಕ್ಕ ಉತ್ತರ ನೀಡಿದ್ದಾರೆ ಎಂದು ಹೇಳಿದರು.

ಇಡೀ ವಿಶ್ವವೇ ಪ್ರಧಾನಿ ನರೇಂದ್ರಮೋದಿಯವರನ್ನು ಗೌರವದಿಂದ ಕಾಣುತ್ತಿದ್ದಾರೆ, ಇದರ ಬಗ್ಗೆ ಸಹಿಸಿಕೊಳ್ಳದ ಕಾಂಗ್ರೆಸ್ ನಾಯಕರು ಜನರನ್ನು ದಿಕ್ಕಿ ತಪ್ಪಿಸುವಂತಹ ಕೆಲಸ ಮಾಡುತ್ತಿದ್ದಾರೆ, ಅವರ ಪಕ್ಷದಲ್ಲೇ ಒಡಕು, ಗೊಂದಲಗಳಿದ್ದು ಅವುಗಳನ್ನು ಸರಿಪಡಿಸಿಕೊಳ್ಳಲಾಗದೆ ನಮ್ಮ ಪಕ್ಷದ ಕಡೆ ಬೆಟ್ಟು ಮಾಡಿ ತೋರಿಸುವುದು ಎಷ್ಟು ಸರಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳೀನ್‍ಕುಮಾರ್ ಕಟೀಲ್ ಟೀಕಿಸಿದರು.

Facebook Comments