ಪ್ರತಿಪಕ್ಷಗಳ ಆರೋಪಕ್ಕೆ ತಕ್ಕ ತಿರುಗೇಟು ನೀಡುವಂತೆ ಬಿಜೆಪಿ ನಾಯಕರಿಗೆ ಸೂಚನೆ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಆ.24- ಪ್ರತಿಪಕ್ಷಗಳು ಮಾಡುವ ಆರೋಪಕ್ಕೆ ಪ್ರತಿದಿನ ಕಡ್ಡಾಯವಾಗಿ ಪಕ್ಷದ ಮುಖಂಡರು ಸಾಮಾಜಿಕ ಜಾಲತಾಣಗಳಲ್ಲಿ ತಕ್ಕ ತಿರುಗೇಟು ನೀಡಬೇಕೆಂದು ಕೇಂದ್ರ ಬಿಜೆಪಿ ವರಿಷ್ಠರು ರಾಜ್ಯ ನಾಯಕರಿಗೆ ಸೂಚನೆ ಕೊಟ್ಟಿದ್ದಾರೆ.

ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರು ಎಲ್ಲಾ ರಾಜ್ಯ ಘಟಕಗಳ ಅಧ್ಯಕ್ಷರು, ಪ್ರಧಾನ ಕಾರ್ಯದರ್ಶಿಗಳು, ಉಪಾಧ್ಯಕ್ಷರು, ಕಾರ್ಯದರ್ಶಿಗಳು, ಖಜಾಂಚಿ ಸೇರಿದಂತೆ ಪದಾಕಾರಿಗಳಿಗೆ ಈ ಸಂದೇಶವನ್ನು ರವಾನಿಸಿದ್ದಾರೆ.

ಕರ್ನಾಟಕದಲ್ಲಿ ಅಕೃತ ಪ್ರತಿಪಕ್ಷ ಕಾಂಗ್ರೆಸ್ ಹಾಗೂ ಜೆಡಿಎಸ್ ಮುಖಂಡರು ನಮ್ಮ ಪಕ್ಷದ ವಿರುದ್ಧವಾಗಲಿ, ಇಲ್ಲವೇ ಕೇಂದ್ರ ಸರ್ಕಾರದ ವಿರುದ್ಧ ಆರೋಪ ಮಾಡಿದರೆ ಬೆಳಗ್ಗೆ 10ಯೊಳಗೆ ಸಮರ್ಪಕವಾದ ಹಾಗೂ ತಕ್ಕದಾದ ತಿರುಗೇಟು ನೀಡುವಂತೆ ಸೂಚಿಸಿದ್ದಾರೆ.

ಪ್ರತಿಯೊಬ್ಬ ಪದಾಕಾರಿಗಳು ಕಡ್ಡಾಯ ವಾಗಿ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯ ವಾಗಿರಬೇಕು. ವಾಟ್ಸಪ್, ಟ್ವಿಟರ್, ಫೇಸ್‍ಬುಕ್, ಇನ್‍ಸ್ಟ್ರಾಗ್ರಾಮ್ ಸೇರಿದಂತೆ ಎಲ್ಲಾ ಸಾಮಾಜಿಕ ಜಾಲತಾಣಗಳಲ್ಲೂ ಪ್ರತಿದಿನ ಪ್ರತಿಕ್ರಿಯೆ ನೀಡುತ್ತಲೇ ಇರಬೇಕೆಂದು ತಾಕೀತು ಮಾಡಿದ್ದಾರೆ.

ವಿಶೇಷವಾಗಿ ವಿಧಾನಸಭೆಯ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರುಗಳು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ವಿರುದ್ಧ ಮಾಡುವ ಆರೋಪಗಳಿಗೆ ತಿರುಗೇಟು ನೀಡಲು ಬಿಜೆಪಿ ನುರಿತ ಹಾಗೂ ಅನುಭವಿ ತಂಡವನ್ನು ರಚಿಸಿದೆ.

ಈ ಇಬ್ಬರು ನಾಯಕರು ಯಾವುದೇ ಪರಿಸ್ಥಿತಿ ಇರಲಿ ಇಲ್ಲವೇ ವಿಷಯಗಲೇ ಇರಲಿ ನಮ್ಮ ಪಕ್ಷ ಮತ್ತು ಸರ್ಕಾರದ ವಿರುದ್ಧ ಆರೋಪ ಮಾಡಿದರೆ 10 ಗಂಟೆಯೊಳಗೆ ಆಯಾ ಮಾಧ್ಯಮಗಳ ವರದಿ, ಹಿಂದೆ ಅವರ ಆಡಳಿತದಲ್ಲಿ ಮಾಡಿದ ಪ್ರಮಾದಗಳನ್ನು ಸಾಕ್ಷಿಯಾಗಿಟ್ಟುಕೊಂಡು ತಿರುಗೇಟು ನೀಡುವಂತೆ ನಡ್ಡಾ ಹೇಳಿದ್ದಾರೆ.

ಪ್ರಧಾನ ಕಾರ್ಯದರ್ಶಿಗಳು ಪಕ್ಷದ ಹಿರಿಯ ಮುಖಂಡರ ಸಲಹೆಸೂಚನೆಗಳನ್ನು ಪಡೆಯಬೇಕು. ಯಾವ ಆರೋಪಕ್ಕೆ ಏನು ಪ್ರತಿಕ್ರಿಯೆ ಕೊಡಬೇಕು ಎಂಬುದನ್ನು ಹಿರಿಯರಿಂದ ಸಲಹೆ ಪಡೆಯಿರಿ. ಅಪ್ಪಿತಪ್ಪಿಯೂ ವಿವಾದಕ್ಕೆ ಸಿಲುಕಬಾರದೆಂಬ ಕಿವಿಮಾತನ್ನು ಹೇಳಿದ್ದಾರೆ.

ಇತರೆ ಪಕ್ಷಗಳಿಗಿಂತ ಬಿಜೆಪಿ ಸಾಮಾಜಿಕ ಜಾಲತಾಣಗಳಲ್ಲೂ ಹೆಚ್ಚು ಸಕ್ರಿಯವಾಗಿದೆ. ನಮ್ಮ ಮಾದರಿಯನ್ನು ಬೇರೆ ಪಕ್ಷಗಳು ಅನುಸರಿಸುತ್ತಿವೆ. ನಾವು ಇನ್ನಷ್ಟು ಅವರಿಗಿಂತಲೂ ಸಕ್ರಿಯವಾಗಬೇಕೆಂದು ಹೇಳಿದ್ದಾರೆ.
2014 ಮತ್ತು 2019 ಲೋಕಸಭೆ ಚುನಾವಣೆ ಯಲ್ಲೂ ಸಾಮಾಜಿಕ ಜಾಲತಾಣವನ್ನು ಅತಿಹೆಚ್ಚು ಸದ್ಬಳಕೆ ಮಾಡಿಕೊಂಡಿದ್ದೇ ನಾವು.

ಮುಂಬರುವ ಎಲ್ಲಾ ಹಂತದ ಚುನಾವಣೆಗಳಲ್ಲೂ ನಾವು ಇದನ್ನು ಇನ್ನಷ್ಟು ಸಮರ್ಪಕವಾಗಿ ಬಳಸಿಕೊಳ್ಳಬೇಕು ಎಂದು ನಡ್ಡಾ ಸಲಹೆ ಮಾಡಿದ್ದಾರೆ.

ಕೇಂದ್ರ ಮತ್ತು ರಾಜ್ಯ ಸರ್ಕಾರದ ಸಾಧನೆಗಳು ನಿರಂತರವಾಗಿ ಪ್ರಚಾರ ಪಡೆಯುತ್ತಲೇ ಇರಬೇಕು. ಈಗ ಪ್ರತಿಯೊಬ್ಬರು ಸ್ಮಾರ್ಟ್ ಫೆÇೀನ್ ಬಳಸುತ್ತಿದ್ದು, ತಮ್ಮ ಅಂಗೈಯಲ್ಲೇ ವಿಶ್ವದ ವಿದ್ಯಮಾನಗಳನ್ನು ತಿಳಿಯಬಹುದು.

ಸರ್ಕಾರದ ಯೋಜನೆಗಳು ತಳ ಸಮುದಾಯಕ್ಕೆ ಸಮರ್ಪಕವಾಗಿ ತಲುಪದಿದ್ದರೆ ಸಾಮಾಜಿಕ ಜಾಲತಾಣಗಳ ಮೂಲಕವೇ ಕಾರ್ಯಕರ್ತರಿಗೆ ಸೂಚಿಸುವುದು, ಯಾವ ಯಾವ ಭಾಗಗಳಲ್ಲಿ ಮೂಲಭೂತ ಸೌಕರ್ಯಗಳಿಲ್ಲವೋ ಅದನ್ನು ಗಮನಕ್ಕೆ ತರುವುದು ಸೇರಿದಂತೆ ಹಲವು ರೀತಿಯ ಕಾರ್ಯಕ್ರಮಗಳನ್ನು ರೂಪಿಸಬೇಕೆಂದು ಸ್ಥಳೀಯ ಬಿಜೆಪಿ ನಾಯಕರಿಗೆ ಸೂಚಿಸಿರುವುದಾಗಿ ತಿಳಿದು ಬಂದಿದೆ.

Facebook Comments

Sri Raghav

Admin