ಬಿಜೆಪಿ ಕೋಮು ದ್ವೇಷದ ವೈರಸ್ ಹಬ್ಬಿಸುತ್ತಿದೆ : ಸೋನಿಯಾ ಆರೋಪ

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ, ಏ.23-ಭಾರತದಲ್ಲಿ ಬಿಜೆಪಿ ಕೋಮು ಪೂರ್ವಗ್ರಹ ಮತ್ತು ದ್ವೇಷದ ವೈರಸ್ ಹಬ್ಬಿಸುತ್ತಿದೆ ಎಂದು ಆರೋಪಿಸಿರುವ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ, ಇದರಿಂದ ಸಾಮಾಜಿಕ ಸೌರ್ಹಾದತೆಗೆ ಗಂಭೀರ ಹಾನಿಯಾಗಲಿದೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.

ದೆಹಲಿಯಲ್ಲಿ ಇಂದು ಬೆಳಗ್ಗೆ ನಡೆದ ಕಾಂಗ್ರೆಸ್ ಕಾರ್ಯಕಾರಿಣಿ ಸಭೆಯಲ್ಲಿ ಮಾತನಾಡಿದ ಅವರು, ಬಿಜೆಪಿ ಸೃಷ್ಟಿಸಿರುವ ಅವಾಂತರ ಗಳಿಂದಾಗಿ ಪ್ರತಿಯೊಬ್ಬ ಭಾರತೀಯರಲ್ಲೂ ಆತಂಕ ಮನೆಮಾಡಿದೆ. ಈ ಹಾನಿಯನ್ನು ಸರಿಪಡಿಸಲು ಕಾಂಗ್ರೆಸ್ ಶ್ರಮಿಸಲಿದೆ ಎಂದರು.

ನಾವೆಲ್ಲರೂ ಕೊರೊನಾ ಪಿಡುಗನ್ನು ನಿಗ್ರಹಿಸಲು ಒಗ್ಗೂಡಿ ಶ್ರಮಿಸುತ್ತಿದ್ದರೆ, ಬಿಜೆಪಿ ದೇಶದಲ್ಲಿ ಕೋಮು ಪೂರ್ವಗ್ರಹ ಮತ್ತು ದ್ವೇಷದ ವೈರಸ್‍ನನ್ನು ಹಬ್ಬಿಸುತ್ತಿದೆ ಎಂದು ಕಾಂಗ್ರೆಸ್ ಅಧಿನಾಯಕಿ ಆರೋಪಿಸಿದರು.

ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಮಾತನಾಡಿ, ಕೊರೊನಾ ವಿರುದ್ಧ ಹೋರಾಡುವ ದೇಶದ ಸಾಮಥ್ರ್ಯವನ್ನು ಪರಾಮರ್ಶಿಸಿ ಅದಕ್ಕೆ ಅನುಗುಣವಾಗಿ ಕಾರ್ಯತಂತ್ರ ರೂಪಿಸಬೇಕು. ಕೇಂದ್ರ ಮತ್ತು ರಾಜ್ಯಗಳ ನಡುವೆ ಸದೃಢ ಸಹಕಾರ ಇದ್ದಾಗ ಮಾತ್ರ ಈ ಪಿಡುಗಳನ್ನು ಯಶಸ್ವಿಯಾಗಿ ನಿವಾರಿಸಲು ಸಾಧ್ಯ ಎಂದು ಸಲಹೆ ಮಾಡಿದರು.

ಕಾಂಗ್ರೆಸ್ ಧುರೀಣ ರಾಹುಲ್ ಗಾಂಧಿ ಮಾತನಾಡಿ, ಕೇಂದ್ರ ಸರ್ಕಾರ ಈ ಸನ್ನಿವೇಶದಲ್ಲಿ ತಾರತಮ್ಯ ಮಾಡದೇ ಎಲ್ಲ ರಾಜ್ಯಗಳಿಗೂ ಅಗತ್ಯವಾದ ಹಣಕಾಶು ನೆರವು ನೀಡಬೇಕು ಎಂದರು. ಕಾಂಗ್ರೆಸ್ ಅಡಳಿತವಿರುವ ರಾಜ್ಯಗಳ ಮುಖ್ಯಮಂತ್ರಿಗಳು ಮಾತನಾಡಿ, ಕೇಂದ್ರ ಸರ್ಕಾರವು ಈ ಕೂಡಲೇ ರಾಜ್ಯಗಳಿಗೆ ಹಣಕಾಸು ನೆರವು ಬಿಡುಗಡೆ ಮಾಡಬೇಕೆಂದು ಆಗ್ರಹಿಸಿದರು.

Facebook Comments

Sri Raghav

Admin