ಸಂಭ್ರಮಾಚರಣೆಗೆ ಬಿಜೆಪಿ ಭರ್ಜರಿ ತಯಾರಿ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಮೇ 22- ಮಹಾ ಚುನಾವಣೆಯ ಫಲಿತಾಂಶ ನಾಳೆ ಪ್ರಕಟಗೊಳ್ಳುತ್ತಿರುವ ನಡುವೆಯೇ ಬಿಜೆಪಿ ಪಾಳಯದಲ್ಲಿ ಹುಮ್ಮಸ್ಸು ಇಮ್ಮಡಿಗೊಂಡಿದ್ದು , ಮತ್ತೊಮ್ಮೆ ಮೋದಿ ಪ್ರಧಾನಿಯಾಗುತ್ತಾರೆ ಎಂದು ಅಚಲ ವಿಶ್ವಾಸ ಹೊಂದಿ ಗೆಲುವಿನ ಸಂಭ್ರಮವನ್ನು ಆಚರಿಸಲು ಭರ್ಜರಿ ತಯಾರಿ ನಡೆದಿದೆ.

ಈಗಾಗಲೇ ವಿವಿಧೆಡೆ ಬಾಣಸಿಗರನ್ನು ಕರೆಸಿ ಲಕ್ಷಾಂತರ ಲಡ್ಡು ತಯಾರಿಕೆಗೆ ಬಿಜೆಪಿ ಮುಖಂಡರು ಮುಂದಾಗಿದ್ದಾರೆ. ಇದರ ಬಗ್ಗೆ ಸಾಮಾಜಿಕ ಜಾಲ ತಾಣದಲ್ಲೂ ಸಿದ್ಧತೆಯನ್ನು ತೋರಿಸಿದ್ದು ಇದು ವೈರಲ್ ಆಗಿದೆ.

ಫಲಿತಾಂಶ ಬರುವ ಮುಂಚೆಯೇ ಬಿಜೆಪಿ ಜಯದ ಲಯ ಕಾಣಿಸಿಕೊಂಡಿದ್ದು , ಮೋದಿ ಮುಖವಾಡ , ಬಿಜೆಪಿ ಧ್ವಜಗಳು ಮತ್ತು ಧ್ವನಿಸುರುಳಿಗಳು ಕೂಡ ಸಿದ್ಧಗೊಂಡಿದೆ ಎಂದು ಹೇಳಲಾಗುತ್ತಿದೆ.

ವಿಶೇಷವಾಗಿ ವಾರಣಾಸಿಯಿಂದ ಸ್ಪರ್ಧಿಸಿರುವ ನರೇಂದ್ರ ಮೋದಿ ಅವರು ಎಷ್ಟು ಮತಗಳ ಅಂತರದಿಂದ ಗೆಲ್ಲುತ್ತಾರೆ ಎಂಬುದನ್ನು ಊಹಿಸಿ ಎಂಬ ಪ್ರಶ್ನೆಯನ್ನು ಕೂಡ ಕೇಳಲಾಗಿದೆ.

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ