ಕುಮಾರಸ್ವಾಮಿ ವಿರುದ್ಧ ಮತ್ತೆ ಬಿಜೆಪಿ ಟ್ವೀಟ್ ಅಟ್ಯಾಕ್

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಅ.20- ಪ್ರತಿಪಕ್ಷ ಕಾಂಗ್ರೆಸ್ ಹಾಗೂ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ವಿರುದ್ಧ ಬಿಜೆಪಿ ಮತ್ತೆ ಟ್ವೀಟ್ ಪ್ರಹಾರವನ್ನು ಮುಂದುವರೆಸಿದೆ. ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಬಿಜೆಪಿಯಲ್ಲಿ ಮೂಲೆಗುಂಪು ಮಾಡಲಾಗಿದೆ ಎಂಬ ಕಾಂಗ್ರೆಸ್ ಆರೋಪಕ್ಕೂ ಟ್ವಿಟರ್‍ನಲ್ಲಿ ತಿರುಗೇಟು ಕೊಟ್ಟಿದೆ.

ಕಾಂಗ್ರೆಸ್ಸಿಗರೇ, ಬಿಜೆಪಿ ಎಂದಿದ್ದರೂ ಜೇನುಗೂಡಿನಂತೆ ಕೂಡು ಕುಟುಂಬ. ಹಿರಿಯ ನಾಯಕರಾದ ಯಡಿಯೂರಪ್ಪ ಅವರನ್ನು ಪಕ್ಷದಲ್ಲಿ ಸೈಡ್ ಲೈನ್ ಮಾಡಲಾಗಿದೆ ಎಂದು ಸುಳ್ಳು ಪ್ರಚಾರ ಮಾಡುವುದಕ್ಕೆ ಮುನ್ನ ಪಂಜಾಬಿನಲ್ಲಿ ಏನಾಯಿತು ಎಂದು ಸ್ವಲ್ಪ ವಿವರಿಸಿ ಎಂದು ಪ್ರಶ್ನಿಸಿದೆ.

ಇನ್ನು ಎಚ್.ಡಿ.ಕುಮಾರಸ್ವಾಮಿ ವಿರುದ್ಧ ಬಿಜೆಪಿ ಟ್ವಿಟರ್‍ನಲ್ಲಿ ಕಾಲೆಳದಿದೆ. ಸಿಗ್ನಲ್ ಜಂಪ್, ವಿಶ್ವಾಸ ದ್ರೋಹ ( ಬ್ರೀಚ್ ಆಫ್ ಟ್ರಸ್ಟ್ ), ಭ್ರಷ್ಟಾಚಾರ, ಸ್ವಜನ ಪಕ್ಷಪಾತ, ಎಲ್ಲಕ್ಕಿಂತ ಮುಖ್ಯವಾಗಿ ಬೈಗಮಿ ಎಂದು ಟೀಕಿಸಿದೆ. ಬೇರೆಯವರ ತಪ್ಪುಗಳ ಬಗ್ಗೆ ಸದಾ ಆಡಿಕೊಳ್ಳುವ ಎಚ್.ಡಿ.ಕುಮಾರಸ್ವಾಮಿ ಅವರೇ, ಇದೆಲ್ಲದರ ಬಗ್ಗೆ ತುಂಬಾಜಾಗರೂಕರಾಗಿರ ಬೇಕಲ್ಲವೇ? ಎಂದು ಪ್ರಶ್ನಿಸಿದೆ.

ಮಾನ್ಯ ಎಚ್.ಡಿ.ಕುಮಾರಸ್ವಾಮಿ ಅವರೇ, ಈ ದೇಶದಲ್ಲಿ ಪ್ರಜ್ಞಾವಂತರು, ಬುದ್ಧಿವಂತರು ಎಂದು ಭ್ರಮಿಸಿಕೊಂಡವರು ಮಾಡುವ ಕೆಲವು ಪ್ರಜ್ಞಾಪೂರ್ವಕ ತಪ್ಪುಗಳೇನು ಗೊತ್ತೇ? ಅವುಗಳ ಪಟ್ಟಿಕೊಡುತ್ತೇವೆ, ಒಮ್ಮೆ ಕಣ್ಣಾಡಿಸಿ. ಅವೆಲ್ಲವೂ ಭಾರತೀಯ ದಂಡ ಸಂಹಿತೆಯ ಪ್ರಕಾರ ಅಪರಾಧವೂ ಹೌದು ಎಂದು ವ್ಯಂಗ್ಯವಾಡಿದೆ.

Facebook Comments