ಕುಡಿದು ಟೈಟಾಗಿ ನಡುರಸ್ತೆಯಲ್ಲಿ ತೂರಾಡುತ್ತ ‘ಮೋದಿ ಜಪ’ ಮಾಡಿದ ಅಭಿಮಾನಿ..! ವಿಡಿಯೋ ವೈರಲ್

ಈ ಸುದ್ದಿಯನ್ನು ಶೇರ್ ಮಾಡಿ

ಹಾಸನ. ಮಾ. 25 : “ಗುಂಡಿನ‌ ಮತ್ತೆ ಗಮ್ಮತ್ತು ಅಳತೆ ಮೀರಿದರೆ ಆಪತ್ತು”….. ಇಲ್ಲೊಬ್ಬ ಬಿಜೆಪಿ ಯುವ ಅಭಿಮಾನಿಯೊಬ್ಬ ಕುಡಿದ ಮತ್ತಿನಲ್ಲಿ ರಸ್ತೆ ಮದ್ಯ ತೂರಾಡಿದ ಬಿ.ಎಂ.ರಸ್ತೆ ನಡುವೆ ನಿಂತು ಮೋದಿ, ಮೋದಿ ಎಂದು ವಾಹನಗಳನ್ನು ಅಡ್ಡಗಟ್ಟಿ ಅವಾಂತರ ಸೃಷ್ಟಿಸಿದ ಘಟನೆ ನಗರದಲ್ಲಿ ನಡೆಯಿತು.

ಹಾಸನ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎ.ಮಂಜು ನಾಮಪತ್ರ ಸಲ್ಲಿಕೆ‌ ವೇಳೆ ಯುವಕಯೊಬ್ಬ ಕುಡಿದ ಮತ್ತಿನಲ್ಲಿ ರಸ್ತೆ ನಡುವೆ ನಿಂತು ವಾಹನಗಳನ್ನು ಅಡ್ಡಗಟ್ಟಿ ಮೋದಿಗೆ ಮತ ಹಾಕಬೇಕು.ದೇಶಕ್ಕೆ ಮೋದಿ ಬೇಕು ಎಂದು ವಾಹನಗಳನ್ನು ತಡೆದು ಸುಮಾರು 15 ನಿಮಿಷ ರಂಪಾಟ ನಡೆಸಿದ.

ಆಶ್ಚರ್ಯವೆಂದರೆ ಪೊಲೀಸ್ ವಾಹನ ಅಡ್ಡಗಟ್ಟಿದರೂ ಸಿಬ್ಬಂದಿ ನನಗೇಕೆ ಎಂಬಂತೆ ಅಲ್ಲಿಂದ ಹೊರಟರು.  ರಸ್ತೆ ಇಕ್ಕೆಲಗಳಲ್ಲಿ ಸಾರ್ವಜನಿಕರು ಯುವಕನ ವರ್ತನೆ ನೋಡಿ ಪುಕ್ಕಟೆ ಮನರಂಜನೆ ಪಡೆದರೆ, ಇನ್ನೂ ಕೆಲವು ಮಹಿಳೆಯರು ಏಕೆ ಈ ರೀತಿ ಈ ಹುಡ್ಗ ಆಡ್ತಿದಾನೆ ಮೊದ್ಲು ಆವ್ನನ್ನ ಕರ್ಕೊಂಡು ಬನ್ನಿ ಎಂದರು. ಆತನ ಇಬ್ಬರು ಸ್ನೇಹಿತರು ಅವನನ್ನು ಹಿಡಿದು ಕೊನೆಗೂ ಕರೆದೊಯ್ಯುದರು.

Facebook Comments

Sri Raghav

Admin