ಪರಿಷತ್ ಹೈಡ್ರಾಮಾ : ರಾಜ್ಯಪಾಲರಿಗೆ ದೂರು ನೀಡಿದ ಬಿಜೆಪಿ ನಿಯೋಗ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಡಿ.15- ಸದನವನ್ನು ಸರಿಯಾಗಿ ನಿರ್ವಹಣೆ ಮಾಡದ ವಿಧಾನಪರಿಷತ್ ಸಭಾಪತಿಗಳ ವಿರುದ್ಧ ಬಿಜೆಪಿ ನಿಯೋಗ, ರಾಜ್ಯಪಾಲರಿಗೆ ದೂರು ನೀಡಲು ಮುಂದಾಗಿದೆ. ಸದನದ ನಿಯಮಕ್ಕೆ ತಕ್ಕಂತೆ ಕಲಾಪ ನಡೆಸದೆ ಪಕ್ಷಪಾತಿಯಂತೆ ವರ್ತಿಸಿರುವ ಸಭಾಪತಿಗಳಿಗೆ ಸೂಕ್ತ ನಿರ್ದೇಶನ ನೀಡಬೇಕೆಂದು ಬಿಜೆಪಿ ನಿಯೋಗ ರಾಜ್ಯಪಾಲರಿಗೆ ಮನವರಿಕೆ ಮಾಡಲಿದೆ.

ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ ನೇತೃತ್ವದಲ್ಲಿ ರಾಜ್ಯಪಾಲರನ್ನು ಭೇಟಿಯಾಗಲಿರುವ ಬಿಜೆಪಿ ನಿಯೋಗ ಆಪಾದನೆ ಹೊತ್ತಿರುವ ಸಭಾಪತಿಗಳನ್ನು ಪೀಠದಲ್ಲಿ ಕೂರಿಸದೆ ಉಪಸಭಾಪತಿಯವರೇ ಕಲಾಪ ನಡೆಸಲು ನಿರ್ದೇಶನ ನೀಡಬೇಕೆಂದು ಮನವಿ ಮಾಡಲಿದೆ.

ಆರೋಪಿತ ಸ್ಥಾನದಲ್ಲಿರುವ ಸಭಾಪತಿ ಪ್ರತಾಪ್‍ಚಂದ್ರಶೆಟ್ಟಿ ಅವರನ್ನು ಪೀಠದಲ್ಲಿ ಕೂರಿಸದೆ ಉಪಸಭಾಪತಿಗಳೇ ಕಾರ್ಯ ಕಲಾಪ ನಡೆಸಬೇಕು. ಯಾವುದೇ ಕಾರಣಕ್ಕೂ ಅವರು ಪೀಠದಲ್ಲಿ ಕೂರದಂತೆ ನಿರ್ದೇಶನ ನೀಡಬೇಕೆಂದು ಮನವರಿಕೆ ಮಾಡುವರು. ಸಭಾಪತಿಗಳು ಇಂದು ಸದನದ ಕಲಾಪಕ್ಕೆ ವಿರುದ್ಧವಾಗಿ ನಡೆದುಕೊಂಡು ಪಕ್ಷಪಾತಿಯಂತೆ ವರ್ತನೆ ಮಾಡಿದ್ದಾರೆ.

ಅವಿಶ್ವಾಸ ನಿರ್ಣಯ ಮಂಡಿಸಿರುವಾಗ ಆ ಸ್ಥಾನದಲ್ಲಿ ಕೂರುವುದು ಕ್ಷೋಭೆ ಅಲ್ಲ. ಹೀಗಾಗಿ ಕಲಾಪವನ್ನು ಉಪಸಭಾಪತಿ ನಡೆಸಲು ಅನುವು ಮಾಡುವಂತೆ ಕೋರಲಿದೆ.

Facebook Comments