ಬಿಜೆಪಿ ಮುಖಂಡರ ಕಾರಿನಲ್ಲಿ 80 ಲಕ್ಷ ಹಣ ಪತ್ತೆ

ಈ ಸುದ್ದಿಯನ್ನು ಶೇರ್ ಮಾಡಿ

ಕಾರವಾರ, ಏ.17-ನಿನ್ನೆ ಬಿಜೆಪಿಯ ಮುಖಂಡರ ತಪಾಸಣೆ ವೇಳೆ 80 ಲಕ್ಷ ಹಣ ಪತ್ತೆಯಾಗಿದೆ ಎಂದು ಚುನಾವಣೆ ಜಿಲ್ಲಾ ನೋಡಲ್ ಅಧಿಕಾರಿ ಎಂ.ರೋಷನ್ ಮಾಹಿತಿ ನೀಡಿದ್ದಾರೆ.

ನಿನ್ನೆ ಶಿರಸಿ ನಗರದಲ್ಲಿ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಮತ್ತು ಚುನಾವಣಾಧಿಕಾರಿಗಳು ಜಂಟಿಯಾಗಿ ಕಾರ್ಯಾಚರಣೆ ನಡೆಸಿದರು. ಆ ವೇಳೆ ಜಿಲ್ಲಾ ಬಿಜೆಪಿ ಅಧ್ಯಕ್ಷ ಕೆ.ಜಿ.ನಾಯ್ಕ, ಜಿಲ್ಲಾ ಕಾರ್ಯ ದರ್ಶಿ ಕೃಷ್ಣ ಎಸಳೆ, ಶಿರಸಿ ಗ್ರಾಮೀಣ ಬಿಜೆಪಿ ಅಧ್ಯಕ್ಷ ರಮಾಕಾಂತ್ ಹೆಗ್ಡೆ ಅವರ ಕಾರುಗಳನ್ನು ತಪಾಸಣೆ ಮಾಡಲಾಗಿತ್ತು.

ಈ ವೇಳೆ ಒಟ್ಟು 80.20 ಲಕ್ಷ ನಗದು ಪತ್ತೆಯಾಗಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ. ಅದರಲ್ಲಿ ರಮಾಕಾಂತ್ ಹೆಗ್ಡೆ ಅವರ ಬಳಿ 70 ಲಕ್ಷ, ಕೃಷ್ಣ ಎಸಳೆ ಕಾರಿನಲ್ಲಿ 9.20 ಲಕ್ಷ ಹಣ ಪತ್ತೆಯಾಗಿತ್ತು. ಎಂದು ರೋಷನ್ ಮಾಹಿತಿ ನೀಡಿದ್ದಾರೆ.

Facebook Comments