ಬಿಜೆಪಿಗೆ ಮತ್ತೆ ಮುಜುಗರ ಉಂಟು ಮಾಡಿದ ವರುಣ್‍ ಗಾಂಧಿ..!

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ,ಅ.14-ಸಂಸದ ವರುಣ್‍ಗಾಂಧಿ ಮತ್ತೆ ಬಿಜೆಪಿ ಪಕ್ಷಕ್ಕೆ ಮುಜುಗರ ಉಂಟಾಗುವಂತೆ ವರ್ತಿಸಿದ್ದಾರೆ. 1980ರಲ್ಲಿ ಅಂದಿನ ಪ್ರಧಾನಿ ಇಂದಿರಾಗಾಂಧಿ ಅವರಿಗೆ ರೈತರ ಹೋರಾಟಕ್ಕೆ ಬೆಂಬಲ ನೀಡುವಂತೆ ಮಾಜಿ ಪ್ರಧಾನಿ ವಾಜಪೇಯಿ ಅವರು ಮಾಡಿಕೊಂಡ ಮನವಿಯ ವಿಡಿಯೋ ತುಣುಕನ್ನು ಟ್ವಿಟ್ ಮಾಡುವ ಮೂಲಕ ಬಿಜೆಪಿ ಸಂಸದ ವರುಣ್‍ಗಾಂಧಿ ಪಕ್ಷಕ್ಕೆ ಮುಜುಗರ ಉಂಟು ಮಾಡಿದ್ದಾರೆ.

ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಕೃಷಿ ಕಾಯಿದೆ ತಿದ್ದುಪಡಿ ವಿರೋಸಿ ರೈತರು ಹೋರಾಟ ನಡೆಸುತ್ತಿರುವ ಸಂದರ್ಭದಲ್ಲಿ ವರುಣ್‍ಗಾಂಧಿ ಅವರು ವಾಜಪೇಯಿ ಅವರ ಹೇಳಿಕೆಯ ತುಣುಕು ಪೋಸ್ಟ್ ಮಾಡುವುದರ ಜೊತೆಗೆ ದೊಡ್ಡ ಮನುಷ್ಯರ ನೈಜ ಮಾತುಗಳಿಗೆ ಬೆಲೆ ಕೊಡಿ ಎಂದು ಹ್ಯಾಷ್‍ಟ್ಯಾಗ್ ಹಾಕಿದ್ದಾರೆ.

ಆಳುವ ಸರ್ಕಾರಗಳಿಂದ ರೈತರಿಗೆ ಯಾವುದೆ ತೊಂದರೆ ಎದುರಾದರೆ ನಾನು ರೈತರ ಪರ ನಿಲ್ಲುತ್ತೇನೆ ಎಂದು ವಾಜಪೇಯಿ ಮಾಡಿರುವ ಭಾಷಣದ ತುಣುಕನ್ನು ವರುಣ್ ಟ್ವಿಟ್ ಮಾಡಿರುವುದು ಬಿಜೆಪಿಗೆ ಮುಜುಗರ ಉಂಟು ಮಾಡಿದೆ.

Facebook Comments