ಪತನಗೊಂಡ ಇಂಡೋನೇಷ್ಯಾ ವಿಮಾನದ ಬ್ಲ್ಯಾಕ್ ಬಾಕ್ಸ್ ಪತ್ತೆ..!

ಈ ಸುದ್ದಿಯನ್ನು ಶೇರ್ ಮಾಡಿ

ಜಕಾರ್ತಾ, ಜ.11- ಅಪಘಾತಕ್ಕೀಡಾದ ಶ್ರೀವಿಜಯ ವಿಮಾನದ ಕಪ್ಪು ಪೆಟ್ಟಿಗೆಗಳ ಹುಡುಕಾಟ ತೀವ್ರಗೊಂಡಿದ್ದು, ಅದು ಬಿದ್ದಿರುವ ಸ್ಥಳ ಪತ್ತೆಯಾಗಿದೆ ಎಂದು ತಿಳಿದು ಬಂದಿದೆ. ಇದುವರೆಗೆ ಶೋಧ ಕಾರ್ಯದಲ್ಲಿ ವಿಮಾನದ ಕೆಲ ಭಾಗಗಳು ಮತ್ತು ಮಾನವ ಅವಶೇಷಗಳನ್ನು ಪತ್ತೆ ಹಚ್ಚಲಾಗಿದೆ. ಆದರೆ ಹೆಚ್ಚಿನ ಮಾಹಿತಿ ಸಿಗುತ್ತಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮೂಲಗಳ ಪ್ರಕಾರ ಜಕಾರ್ತಾದ ಕರಾವಳಿಯ ಉತ್ತರಕ್ಕೆ ಸಾವಿರ ದ್ವೀಪ ಸರಪಳಿಯಲ್ಲಿ ಲಂಕಾಂಗ್ ಮತ್ತು ಲಕಿ ದ್ವೀಪಗಳ ನಡುವೆ ಕಾಕ್ಪಿಟ್ ಧ್ವನಿ ಮತ್ತು ಫ್ಲೈಟ್ ಡಾಟಾ ರೆಕಾರ್ಡ್‍ಗಳನ್ನು ಹೊಂದಿರುವ ಪೆಟ್ಟಿಗೆಗಳಿಂದ ಸಿಗ್ನಲ್‍ಗಳು ಪತ್ತೆಯಾಗಿವೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಕಪ್ಪು ಪೆಟ್ಟಿಗೆಗಳಿಂದ ಶಬ್ದಗಳನ್ನು ಹೊರಸೂಸುವ ಸ್ಥಳವನ್ನು ಅವರು ಗುರುತಿಸಲಾಗಿದೆ.ಇದನ್ನು ಪತ್ತೆ ಹಚ್ಚಿದ ನಂತರ ಅಪಘಾತಕ್ಕೆ ಒಳಗಾಗುವ ಸಂದರ್ಭದಲ್ಲಿ ಪೈಲೆಟ್‍ಗಳ ನಡುವೆ ನಡೆದ ಸಂಭಾಷಣೆ ಹಾಗೂ ಇತರೆ ಅಂಕಿಅಂಶಗಳು ಸಿಗಲಿವೆ. ಇದನ್ನು ತನಿಖೆಗಾಗಿ ರಾಷ್ಟ್ರೀಯ ಸಾರಿಗೆ ಸುರಕ್ಷತಾ ಸಮಿತಿಗೆ ಹಸ್ತಾಂತರಿಸಲಾಗುವುದು ಎಂದು ತಿಳಿಸಲಾಗಿದೆ.

Facebook Comments