ಕೇಂದ್ರ ಸರ್ಕಾರ ಬ್ಲಾಕ್ ಫಂಗಸ್ ಗೆ ಇಂಜಕ್ಷನ್ ಹಂಚಿಕೆ: ಕರ್ನಾಕಟಕ್ಕೆ 1030 ವೈಲ್ಸ್ ಗಳು ಲಭ್ಯ

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ, ಮೇ 25- ಬ್ಲಾಕ್ ಫಂಗಸ್ ಗೆ ಚಿಕಿತ್ಸೆ ನೀಡಲು ಅಗತ್ಯವಾದ ಆಮ್ ಫೋಟೆರಿಸಿನ್-ಬಿ ಇಂಜಕ್ಷನ್ ಅನ್ನು ದೇಶಾದ್ಯಂತ ಹೊಸದಾಗಿ 19,420 ವೈಲ್ಸ್ ಗಳನ್ನು ಕೇಂದ್ರ ಸರ್ಕಾರ ಹಂಚಿಕೆ ಮಾಡಿದೆ. ಅದರಲ್ಲಿ ಕರ್ನಾಕಟಕ್ಕೆ 1030 ವೈಲ್ಸ್ ಗಳು ಲಭ್ಯವಾಗಿದ್ದು, ಕಳೆದ ಬಾರಿ 1270 ವೈಲ್ಸ್ ಗಳು ಸಿಕ್ಕಿದ್ದವು. ಎಂದಿನಂತೆ ಈ ಭಾರಿ ಕೂಡ ಗುಜರಾತ್ ಹೆಚ್ಚು ಔಷಧಿ ಪಡೆಯುವಲ್ಲಿ ಮೇಲುಗೈ ಸಾಧಿಸಿದೆ. ಮಹರಾಷ್ಟ್ರ ಎರಡನೇ ಸ್ಥಾನದಲ್ಲಿದೆ.

ಇಂದು ಬೆಳಗ್ಗೆ ಟ್ವಿಟ್ ಮಾಡಿರುವ ಕೇಂದ್ರ ರಸಾಯನಿಕ ಹಾಗೂ ರಸಗೊಬ್ಬರ ಸಚಿವ ಡಿ.ವಿ.ಸದಾನಂದಗೌಡ ಅವರು, ಕಳೆದ ಮೇ 21ರಂದು ದೇಶದ ವಿವಿಧ ರಾಜ್ಯಗಳಿಗೆ 23,680 ವೈಲ್ಸ್ ಗಳನ್ನು ಹಂಚಿಕೆ ಮಾಡಲಾಗಿತ್ತು. ಇಂದು ಮತ್ತೆ 19,420 ವೈಲ್ಸ್ ಗಳನ್ನು ಹಂಚಿಕೆ ಮಾಲಾಗಿದೆ ಎಂದು ತಿಳಿಸಿದ್ಧಾರೆ.

ಅದರಲ್ಲಿ ಗುಜರಾತ್ ಗೆ 4640, ಮಹಾರಾಷ್ಟ್ರಕ್ಕೆ 4060, ಆಂಧ್ರ ಪ್ರದೇಶಕ್ಕೆ 1840, ಮಧ್ಯ ಪ್ರದೇಶಕ್ಕೆ 1470, ರಾಜಸ್ಥಾನ್ ಗೆ 1430, ಕರ್ನಾಟಕಕ್ಕೆ 1030 ವೈಲ್ಸ್ ಗಳನ್ನು ಹಂಚಿಕೆ ಮಾಡಲಾಗಿದೆ.

ಔಷಧಿ ಹಂಚಿಕೆಯಲ್ಲಿ ತಾರತಮ್ಯವಾಗುತ್ತಿದೆ ಎಂಬ ಆರೋಪದ ನಡುವೆಯೂ ಮತ್ತೆ ಕರ್ನಾಟಕ ಅಗತ್ಯದಷ್ಟು ಔಷಧಿ ಪಡೆಯಲು ಹಿನ್ನೆಡೆ ಅನುಭವಿಸಿದೆ.

ರಾಜ್ಯದಲ್ಲೂ ಬ್ಲಾಕ್ ಫಂಗಸ್ ದಿನೇ ದಿನೆ ಹೆಚ್ಚುತ್ತಿದೆ. ಔಷಧಿ ಕೊರತೆ ಹೆಚ್ಚಾಗಿ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುವವರಿಗೆ ದುಬಾರಿಯಾಗಿದೆ ಎಂಬ ಆರೋಪಗಳಿವೆ. ಔಷಧಿ ಹಂಚಿಕೆ ಮಾಡುವ ಜವಾಬ್ದಾರಿ ಹೊಂದಿರುವ ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ಕರ್ನಾಟಕದವರೆ ಆಗಿದ್ದಾರೆ, ಜೊತೆಗೆ 25 ಮಂದಿ ಬಿಜೆಪಿ ಸಂಸದರಿದ್ದರೂ ಬ್ಲಾಕ್ ಫಂಗಸ್ ಚಿಕಿತ್ಸಾ ಔಷಧಿ ಕೊರತೆ ಕಾಡುತ್ತಿರುವುದು ವಿಪರ್ಯಾಸ.

Facebook Comments