ಬೆಂಗಳೂರಲ್ಲಿ ಬ್ಲಾಕ್ ಫಂಗಸ್ ಆತಂಕ..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಮೇ.15-ಮಹಾರಾಷ್ಟ್ರವನ್ನು ಇನ್ನಿಲ್ಲದಂತೆ ಕಾಡುತ್ತಿರುವ ಬ್ಲಾಕ್ ಫಂಗಸ್ ನಗರಕ್ಕೂ ಕಾಲಿಟ್ಟಿದೆಯೇ ಎಂಬ ಅನುಮಾನ ಕಾಡುತ್ತಿದೆ.ಈಗಾಗಲೆ ಕೆಲವರನ್ನು ಬ್ಲಾಕ್ ಫಂಗಸ್ ಬಲಿ ಪಡೆದಿರುವ ಸಾಧ್ಯತೆಗಳನ್ನು ತಳ್ಳಿ ಹಾಕುವಂತಿಲ್ಲ.

ನಿನ್ನೆ ಕೊರೊನಾ ಸೋಂಕಿನಿಂದ ಗುಣಮುಖರಾಗಿದ್ದ ಸಿಂಧುಶ್ರೀ ಎಂಬುವರು ಮೃತಪಟ್ಟಿದ್ದು ಅವರ ಸಾವಿಗೆ ಬ್ಲಾಕ್ ಫಂಗಸ್ ಕಾರಣ ಎನ್ನಲಾಗಿದೆ.ಇದರ ಜತೆಗೆ ಇಂದು ಶ್ರೀನಿವಾಸ್ ಎಂಬ ಮತ್ತೊಬ್ಬ ವ್ಯಕ್ತಿ ಬ್ಲಾಕ್ ಫಂಗಸ್‍ಗೆ ಬಲಿಯಾಗಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ.

ಹೀಗಾಗಿ ನಗರದಲ್ಲೂ ಬ್ಲಾಕ್ ಫಂಗಸ್ ಅಟ್ಟಹಾಸ ಮೆರೆಯುತ್ತಿದ್ದು ಸರ್ಕಾರ ಫಂಗಸ್ ನಿವಾರಣೆಗೆ ಅಗತ್ಯ ಕ್ರಮಕೈಗೊಳ್ಳುವ ಅವಶ್ಯಕತೆ ಇದೆ. ಕೊರೊನಾ ಸೋಂಕಿನಿಂದ ಗುಣಮುಖರಾದವರು ಮನೆಗಳಿಗೆ ತೆರಳಿದ ನಂತರ ರೋಗಿಗಳು ಫಂಗಸ್ ಬಗ್ಗೆ ಎಚ್ಚರಿಕೆ ವಹಿಸುವ ಸಾಧ್ಯತೆಗಳಿವೆ.

Facebook Comments

Sri Raghav

Admin