ಬ್ಲಾಕ್ ಫಂಗಸ್ ಅಧ್ಯಯನಕ್ಕೆ ಮುಂದಾದ ಮಹಾರಾಷ್ಟ್ರ

ಈ ಸುದ್ದಿಯನ್ನು ಶೇರ್ ಮಾಡಿ

ಮುಂಬೈ,ಮೇ.13-ಕೊರೊನಾ ಸೋಂಕಿತರಲ್ಲಿ ಬ್ಲಾಕ್ ಫಂಗಸ್ ಕಾಣಿಸಿಕೊಳ್ಳಲು ನಿಖರ ಕಾರಣವೇನು. ಅದರ ನಿವಾರಣೆ ಹೇಗೆ ಎಂಬ ಬಗ್ಗೆ ಅಧ್ಯಯನ ನಡೆಸಲು ಮುಂದಾಗಿರುವ ಮಹಾರಾಷ್ಟ್ರ ಸರ್ಕಾರ. ಅದಕ್ಕಾಗಿ ಫಂಗಸ್‍ನ ಪ್ರತ್ಯೇಕ ಡಾಟಾ ಸಂಗ್ರಹ ಮಾಡಲು ತೀರ್ಮಾನಿಸಿದೆ.

ಮುಂಬೈ, ಪೂನಾ ಮತ್ತು ಥಾಣೆ ಜಿಲ್ಲೆಗಳ ಕೊರೊನಾ ಸೋಂಕಿತರಲ್ಲಿ ಈ ಫಂಗಸ್ ಕಾಣಿಸಿಕೊಂಡು ಆತಂಕ ಸೃಷ್ಟಿಸಿರುವ ಹಿನ್ನಲೆಯಲ್ಲಿ ಇಂತಹ ನಿರ್ಧಾರಕ್ಕೆ ಮಹಾರಾಷ್ಟ್ರ ಸರ್ಕಾರ ಬಂದಿದೆ. ಮಧುಮೇಹ ಹೊಂದಿರುವ ಕೊರೊನಾ ಸೋಂಕಿತರಲ್ಲಿ ಈ ಫಂಗಸ್ ಅತಿ ಹೆಚ್ಚು ಕಾಣಿಸಿಕೊಳ್ಳುತ್ತಿದೆ. ತಲೆನೋವು, ಜ್ವರ, ಕಣ್ಣುನೋವು, ಶೀತ,ನೆಗಡಿ, ಕಣ್ಣು ಮಂಜಾಗುವುದು ಇದರ ಲಕ್ಷಣಗಳು.

ಮಹಾರಾಷ್ಟ್ರದಲ್ಲಿ 2ಸಾವಿರಕ್ಕೂ ಹೆಚ್ಚು ಮಂದಿಯಲ್ಲಿ ಬ್ಲಾಕ್ ಫಂಗಸ್ ಕಾಣಿಸಿಕೊಂಡಿದೆ. ಮುಂಬೈನಲ್ಲಿ 111 ರೋಗಿಗಗಳು ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿದುಬಂದಿದೆ.

ಇದುವರೆಗೂ ಈ ಫಂಗಸ್ ರೋಗ ಲಕ್ಷಣದ ಬಗ್ಗೆ ಯಾವುದೆ ಮಾಹಿತಿ ಸಂಗ್ರಹ ಮಾಡುತ್ತಿರಲಿಲ್ಲ. ಆದರೆ, ಫಂಗಸ್ ಜೀವಕಾರಕವಾಗಿ ಪರಿವರ್ತನೆಯಾಗುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಿ ಇನ್ನು ಮುಂದೆ ಕಡ್ಡಾಯವಾಗಿ ಫಂಗಸ್‍ನ ಎಲ್ಲಾ ಡಾಟಾಗಳನ್ನು ಪ್ರತ್ಯೇಕವಾಗಿ ಸಂಗ್ರಹಿಸಿಡುವಂತೆ ಸರ್ಕಾರ ಸುತ್ತೊಲೆ ಹೊರಿಡಿಸಿದೆ.

ಫಂಗಸ್‍ನ ಸಂಪೂರ್ಣ ಡಾಟಾ ಸಂಗ್ರಹವಾದರೆ, ಫಂಗಸ್‍ಗೆ ಕಾರಣವೇನು ಹಾಗೂ ನಿವಾರಣೆ ಮಾಡುವ ಬಗ್ಗೆ ಅಧ್ಯಯನ ನಡೆಸಲು ಸಾಧ್ಯವಾಗುತ್ತದೆ ಎನ್ನುತ್ತಾರೆ ಆರೋಗ್ಯ ಇಲಾಖೆ ನಿರ್ದೇಶಕಿ ಡಾ.ಆರ್ಚನಾ ಪಾಟೀಲ್.

Facebook Comments

Sri Raghav

Admin