‘ಬ್ಲಾಕ್ ಪ್ಯಾಂಥರ್’ ಖ್ಯಾತಿಯ ನಟ ಚಾಡ್‌ವಿಕ್‌ ಬೋಸ್‌ಮನ್‌ ಇನ್ನಿಲ್ಲ..!

ಈ ಸುದ್ದಿಯನ್ನು ಶೇರ್ ಮಾಡಿ

ಲಾಸ್ ಏಂಜಲೀಸ್,ಆ.29- ರೀಗಲ್ ಬ್ಲ್ಯಾಕ್ ಪ್ಯಾಂಥರ್ ಎಂದೇ ಖ್ಯಾತಿ ಪಡೆದಿರುವ ಹಾಲಿವುಡ್ ನಟ ಚಾಡ್ವಿಕ್ ಬೋಸ್ಮನ್(43) ಕ್ಯಾನ್ಸರ್‍ನಿಂದ ನಿಧನರಾಗಿದ್ದಾರೆ.

ಬೋಸ್ಮನ್ ಅವರು ಲಾಸ್ ಏಂಜಲೀಸ್‍ನಲ್ಲಿರುವ ಪತ್ನಿ ಹಾಗೂ ಕುಟುಂಬದ ಸದಸ್ಯರ ಸಮ್ಮುಖದಲ್ಲಿ ಮನೆಯಲ್ಲಿಯೇ ಕೊನೆಯುಸಿರೆಳೆದರೆಂದು ಅವರ ಪ್ರತಿನಿ ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಬೋಸ್‍ಮನ್ ಅವರಿಗೆ ನಾಲ್ಕು ವರ್ಷಗಳ ಹಿಂದೆ ಕರುಳಿನ ಕ್ಯಾನ್ಸರ್ ಇರುವುದು ಪತ್ತೆಯಾಗಿತ್ತು. ಅಂದಿನಿಂದ ಅವರನ್ನು ಕುಟುಂಬದವರು ಉಳಿಸಿಕೊಳ್ಳಲು ಎಲ್ಲಾ ರೀತಿಯ ಪ್ರಯತ್ನಗಳನ್ನು ನಡೆಸಿದರೂ ಪ್ರಯೋಜನವಾಗಿರಲಿಲ್ಲ. ನಿನ್ನೆ ಇಹಲೋಕ ತ್ಯಜಿಸಿದ್ದಾರೆ ಎಂದು ಪ್ರತಿನಿ ಅಸೋಸಿಯೇಟ್ ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.

ಬ್ಲ್ಯಾಕ್ ಐಕಾನ್‍ಗಳಾದ ಜಾಕಿ ರಾಬಿನ್ಸನ್ ಮತ್ತು ಜೇಮ್ಸ್ ಬ್ರೌನ್ ಪಾತ್ರವನ್ನು ನಿರ್ವಹಿಸಿದ ನಟ ಚಾಡ್ವಿಕ್ ಬೋಸ್ಮನ್ ದಿಟ್ಟ ಹೋರಾಟಗಾರ, ಎಲ್ಲದರಲ್ಲೂ ಸತತ ಪರಿಶ್ರಮ ವಹಿಸಿದ್ದರು. ಜನರು ತುಂಬ ಪ್ರೀತಿಸುವ ಅನೇಕ ಚಿತಗಳನ್ನು ಕೊಟ್ಟಿದ್ದಾರೆ ಎಂದು ಅವರ ಕುಟುಂಬದವರು ಸ್ಮರಿಸಿದ್ದಾರೆ.

ಕರುಳಿನ ಕೊನೆಯಲ್ಲಿ ಕೊಲೊನ್ ಎನ್ನುವ ಭಾಗ ಇರುತ್ತದೆ. ಇಲ್ಲಿ ಕ್ಯಾನ್ಸರ್ ಕಾರಕಗಳು ಬೆಳೆದು ಕೊಲೋನ್ ಕ್ಯಾನ್ಸರ್ ಉಂಟಾಗುತ್ತದೆ. ಯಾವುದೇ ವಯಸ್ಸಿನಲ್ಲೂ ಈ ಕ್ಯಾನ್ಸರ್ ಕಾಣಿಸಿಕೊಳ್ಳುತ್ತದೆ ಎಂದು ಬೋಸ್ಮನ್‍ಗೆ ಚಿಕಿತ್ಸೆ ನೀಡಿದ್ದ ವೈದ್ಯರು ಹೇಳಿದ್ದಾರೆ.

ಬೋಸ್ಮನ್ ತನ್ನ ರೋಗದ ವಿಚಾರವಾಗಿ ಸಾರ್ವಜನಿಕವಾಗಿ ಎಲ್ಲೂ ಮಾತನಾಡಿರಲಿಲ್ಲ. ಅಸಂಖ್ಯಾತ ಶಸ್ತ್ರಚಿಕಿತ್ಸೆಗಳು ಮತ್ತು ಕೀಮೋಥೆರಪಿ ಸಮಯದಲ್ಲೂ ಮಾರ್ಷಲ್‍ನಿಂದ ಡಾ 5 ಬ್ಲಡ್ಸ್, ಆಗಸ್ಟ್ ವಿಲ್ಸನ್ಸ್ ಮಾ ರೈನಿಸ್ ಬ್ಲ್ಯಾಕ್ ಬಾಟಮ್ ಇನ್ನೂ ಹಲವಾರು ಚಿತ್ರಗಳನ್ನು ಚಿತ್ರೀಕರಿಸಲಾಗಿತ್ತು.

Facebook Comments

Sri Raghav

Admin