ಕೃಷ್ಣಮೃಗ ಬೇಟೆ : ನಾಲ್ವರು ಬಾಲಿವುಡ್ ತಾರೆಯರಿಗೆ ಹೊಸ ನೋಟಿಸ್

ಈ ಸುದ್ದಿಯನ್ನು ಶೇರ್ ಮಾಡಿ

ಜೋಧ್‍ಪುರ್, ಮೇ 21-ಕೃಷ್ಣಮೃಗ ಬೇಟೆ ಪ್ರಕರಣದ ಸಂಬಂಧ ರಾಜಸ್ತಾನ ಹೈಕೋರ್ಟ್‍ನ ಜೋಧ್ ಪುರ್ ಪೀಠವು  ಬಾಲಿವುಡ್ ತಾರೆಯರಾದ ಸೈಫ್ ಅಲಿ ಖಾನ್, ಸೋನಾಲಿ ಬೇಂದ್ರೆ, ನೀಲಂ ಕೊಠಾರಿ ಮತ್ತು ಟಬು ಅವರಿಗೆ ಹೊಸ ನೋಟಿಸ್‍ಗಳನ್ನು ಜಾರಿಗೊಳಿಸಿದೆ.

ನ್ಯಾಯಮೂರ್ತಿ ಮನೋಜ್ ಗರ್ಗ್ ಅವರ ಏಕ ನ್ಯಾಯಾಧೀಶರ ಪೀಠವು 1998ರ ಕೃಷ್ಣಮೃಗ (ಬ್ಲಾಕ್‍ಬಕ್) ಬೇಟೆ ಪ್ರಕರಣದಲ್ಲಿ ಈ ನಾಲ್ವರು ಬಾಲಿವುಡ್ ತಾರೆಯರಿಗೆ ನೋಟಿಸ್‍ಗಳನ್ನು ನೀಡಿದೆ. ಈ ಘಟನೆ ನಡೆದಾಗ ಇವರೊಂದಿಗೆ ಇದ್ದ ದುಷ್ಯಂತ್ ಸಿಂಗ್ ಅವರಿಗೂ ನೋಟಿಸ್ ಕೊಡಲಾಗಿದೆ.

ಎಂಟು ವಾರಗಳ ನಂತರ ಈ ಪ್ರಕರಣದ ವಿಚಾರಣೆ ನಡೆಯಲಿದೆ.  ಕಳೆದ ವರ್ಷ ಏಪ್ರಿಲ್ 5ರಂದು ಮುಖ್ಯ ನ್ಯಾಯಾಂಗ ದಂಡಾಧಿಕಾರಿ ಅವರ ನ್ಯಾಯಾಲಯವು ಈ ನಾಲ್ವರು ತಾರೆಯರನ್ನು ಖುಲಾಸೆಗೊಳಿಸಿತ್ತು.

ಇದರ ವಿರುದ್ಧ ರಾಜಸ್ತಾನ ಸರ್ಕಾರ ಮೇಲ್ಮನವಿ ಸಲ್ಲಿಸಿ ನಂತರ ಜೋಧ್‍ಪುರ್ ನ್ಯಾಯಾಲಯದ ಈ ನೋಟಿಸ್‍ಗಳನ್ನು ಜಾರಿಗೊಳಿಸಿದೆ.

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ