ಬೆಂಗಳೂರಲ್ಲಿ ಜಿಲೆಟಿನ್ ಸ್ಪೋಟಕ್ಕೆ ನಡುಗಿದ ಭೂಮಿ, ಬೆಚ್ಚಿ ಬಿದ್ದ ಜನ

ಈ ಸುದ್ದಿಯನ್ನು ಶೇರ್ ಮಾಡಿ


ಬೆಂಗಳೂರು,ಜು.03: ಬೆಂಗಳೂರಿನ ಎಚ್.ಎ.ಎಲ್ ಮೈದಾನದಲ್ಲಿ ಇಂದು ಸಂಜೆ ಇದ್ದಕ್ಕಿದ್ದಂತೆ ಒಂದು ಸ್ಪೋಟದ ಸದ್ದು ಕೇಳಿಸಿತ್ತು, ಅದರ ತೀವ್ರತೆ ಎಷ್ಟಿತ್ತೆಂದರೆ 1 ಕಿಲೋಮೀಟರ್ ಸುತ್ತಮುತ್ತ ಭೂಮಿ ಕಪಿಸಿತ್ತು. ಜನ ಬೆಚ್ಚಿಬಿದ್ದಿದ್ದರು. ಅಷ್ಟಕ್ಕೂ ಆಗಿದ್ದೇನೆದರೆ ಶಾಸ್ತ್ರಿ ನಗರದ ಎಚ್.ಎ.ಎಲ್ ಆವರಣದ ಒಳಗೆ ಸಂಜೆ 4:30 ರ ಸುಮಾರಿಗೆ ಬಂಡೆಗಳನ್ನು ಒಡೆಯಲು ಬಳಸುತ್ತಿದ್ದ ಜಿಲೆಟಿನ್ ಮದ್ದು ಸ್ಫೋಟಗೊಂಡಿತ್ತು. ಜನ ಒಂದು ಕ್ಷಣ ಆತಂಕಗೊಡಿದ್ದರು. ಅದೃಷ್ಟವಶಾತ್ ಜನರು ಇಲ್ಲದ ಜಾಗದಲ್ಲಿ ಸ್ಪೋಟವಾಗಿದ್ದರಿಂದ ಯಾವುದು ತೊಂದರೆಗಳು ಉಟಾಗಿಲ್ಲ. ಈ ಘಟನೆ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದು, ಜೆಲೆಟಿನ್ ಕಡ್ಡಿ ಇಲ್ಲಿ ಹೇಗೆ ಬಂತು, ಯಾರು ಇಟ್ಟಿದ್ದು ಎಂಬ ಮತ್ತಷ್ಟು ಮಾಹಿತಿಗಳನ್ನು ಕಲೆಹಾಕುತ್ತಿದ್ದಾರೆ . ಹೆಚ್‌ಎಎಲ್ ಪೊಲೀಸರು ಸ್ಥಳಕ್ಕೆ ಭೇಟಿ ಪರಿಶೀಲನೆ‌ ನಡೆಸಿದ್ದಾರೆ. ಅದೃಷ್ಟವಶಾತ್ ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಸ್ಪೋಟಗೊಂಡ ಜಾಗದಲ್ಲಿ ಇದ್ದ ಸಿಂಟೆಕ್ಸ್ ವಾಟರ್ ಟ್ಯಾಂಕ್ ಒಡೆದು ಹೋಗಿದೆ.

Blast--01

Facebook Comments

Sri Raghav

Admin