ಶಾಲೆಯಲ್ಲಿ ಬಾಂಬ್ ಸ್ಫೋಟ : 9 ಮಕ್ಕಳ ಸಾವು

ಈ ಸುದ್ದಿಯನ್ನು ಶೇರ್ ಮಾಡಿ

ಪೆಷಾವರ, ಅ.27-ಪಾಕಿಸ್ತಾನದ ಹಿಂಸಾಚಾರ ಪೀಡಿತ ಪೇಷಾವರ್ ನಗರದ ಪಾಠಶಾಲೆಯೊಂದರಲ್ಲಿ ಇಂದು ಬೆಳಗ್ಗೆ ಭಾರೀ ಬಾಂಬ್ ಸ್ಫೋಟ ಸಂಭವಿಸಿ 9 ಮಕ್ಕಳು ಹತರಾಗಿ 70ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಗಾಯಾಳುಗಳಲ್ಲಿ ಕೆಲವರ ಸ್ಥಿತಿ ಶೋಚನೀಯ ವಾಗಿದ್ದು, ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಆತಂಕವಿದೆ.

ಪೆಷಾವರ್ ನಗರದ ದಿರ್ ಕಾಲೋನಿಯ ಪಾಠಶಾಲೆಯಲ್ಲಿ ಇಂದು ಬೆಳಗ್ಗೆ ಪ್ರಾರ್ಥನೆ ನಡೆಯುತ್ತಿದ್ದ ಸಂದರ್ಭದಲ್ಲಿ ಬಾಂಬ್ ಸ್ಫೋಟ ಸಂಭವಿಸಿದೆ. ಶಾಲೆಯ ಗೋಡೆಗೆ ಸ್ಫೋಟಕಗಳು ಇದ್ದ ಮರಳು ಮೂಟೆಗಳನ್ನು ಇಟ್ಟು ಸ್ಫೋಟಿಸಲಾಗಿದೆ. ಈ ದಾಳಿಯಲ್ಲಿ 9 ಮಕ್ಕಳು ಸ್ಥಳದಲ್ಲೇ ಹತರಾದರು.ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು , ಕೆಲವರ ಸ್ಥಿತಿ  ಗಂಭೀರವಾಗಿದೆ.

Facebook Comments