ಮಸೀದಿ ಬಳಿ ಬಾಂಬ್ ಸ್ಫೋಟ : 6 ಪೊಲೀಸರು ಬಲಿ

ಈ ಸುದ್ದಿಯನ್ನು ಶೇರ್ ಮಾಡಿ

ಕರಾಚಿ, ಮೇ 14-ಪಾಕಿಸ್ತಾನದ ಬಲೂಚಿಸ್ತಾನ ಪ್ರಾಂತ್ಯದ ಮಸೀದಿ ಬಳಿ ನಿನ್ನೆ ರಾತ್ರಿ ಪ್ರಬಲ ದೂರ ನಿಯಂತ್ರಿತ ಬಾಂಬ್ ಸ್ಫೋಟದಲ್ಲಿ ಆರು ಪೊಲೀಸರು ಬಲಿಯಾಗಿ, ಇತರ 11 ಮಂದಿ ತೀವ್ರ ಗಾಯಗೊಂಡಿರುವ ಘಟನೆ ನಡೆದಿದೆ.  ಹಿಂಸಾಚಾರ ಪೀಡಿತ ಬಲೂಚಿಸ್ತಾನದಲ್ಲಿ ಕಳೆದ ಮೂರು ದಿನಗಳಲ್ಲಿ ನಡೆದ ಎರಡನೇ ವಿಧ್ವಂಸಕ ಕೃತ್ಯ ಇದಾಗಿದೆ.

ಬಲೂಚಿಸ್ತಾನದ ಪ್ರಾಂತೀಯ ರಾಜಧಾನಿ ಕ್ವೆಟ್ಟಾದ ಉಪ ನಗರ ಪ್ರದೇಶದ ಮಸೀದಿಯಲ್ಲಿ ರಂಜಾನ್ ಪ್ರಾರ್ಥನೆಗಾಗಿ ಜನರು ಸೇರಿದ್ದ ಸಂದರ್ಭದಲ್ಲೇ ಈ ಸ್ಫೋಟ ನಡೆಯಿತು.

ಮಸೀದಿಯಲ್ಲಿ ಪ್ರಾರ್ಥನೆ ಸಲ್ಲಿಸಿದ ಜನರಿಗೆ ಭದ್ರತೆ ಒದಗಿಸಲು ಪೊಲೀಸ್ ವಾಹನ ಸ್ಥಳಕ್ಕೆ ಆಗಮಿಸಿದ ವೇಳೆ ಶಕ್ತಿಶಾಲಿ ರಿಮೋಟ್ ಕಂಟ್ರೋಲ್ ಬಾಂಬ್ ಸ್ಫೋಟಿಸಲಾಯಿತು. ಈ ಕೃತ್ಯದಲ್ಲಿ ಕ್ಷಿಪ್ರ ಕಾರ್ಯಾಚರಣೆ ಸಮೂಹ (ಆರ್‍ಆರ್‍ಜಿ)ದ ಆರು ಪೊಲೀಸರು ಹತರಾಗಿ ಇತರ 11 ಮಂದಿ ಗಾಯಗೊಂಡರು ಎಂದು ಕ್ವೆಟ್ಟಾ ಉಪ ಪೊಲೀಸ್ ಮಹಾ ನಿರೀಕ್ಷಕ (ಡಿಐಜಿ) ರಜಾಕ್ ಚೀಮಾ ತಿಳಿಸಿದ್ದಾರೆ.

ಈ ಕೃತ್ಯವನ್ನು ಪ್ರಾಂತೀಯ ಗೃಹ ಸಚಿವ ಜಿಯಾವುಲ್ಲಾ ಲಾಂಗೋವಿ ಖಂಡಿಸಿದ್ದಾರೆ.  ಬಲೂಚಿಸ್ತಾನ ಪ್ರಾಂತ್ಯದ ಗ್ವಾಡರ್‍ನಲ್ಲಿ ಶನಿವಾರ ಲಕ್ಷುರಿ ಹೋಟೆಲ್ ಮೇಲೆ ದಾಳಿ ನಡೆಸಿದ ಮೂವರು ಶಸ್ತ್ರಸಜ್ಜಿತ ಉಗ್ರರು ಪಾಕ್ ನಾವಿಕ ಮತ್ತು ಮೂವರು ಬಂಡುಕೋರರೂ ಸೇರಿದಂತೆ 13 ಜನರನ್ನು ಕೊಂದಿದ್ದರು.

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ