ದುಶ್ಚಟಕ್ಕಾಗಿ ಕಳವು ಮಾಡುತ್ತಿದ್ದವರ ಸೆರೆ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಅ.21-ದುಶ್ಚಟಕ್ಕಾಗಿ ಮನೆಗಳ್ಳತನ ಮತ್ತು ದ್ವಿಚಕ್ರ ವಾಹನಗಳನ್ನು ಕಳ್ಳತನ ಮಾಡುತ್ತಿದ್ದ ಆರು ಮಂದಿಯನ್ನು ಗಿರಿನಗರ ಠಾಣೆ ಪೊಲೀಸರು ಬಂಧಿಸಿ 15 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಹಾಗೂ ದ್ವಿಚಕ್ರ ವಾಹನಗಳು ಮತ್ತು ಮೊಬೈಲ್‍ಗಳನ್ನು ವಶಪಡಿಸಿಕೊಂಡಿದ್ದಾರೆ.

ನಾಗರಾಜ(22), ಕೌಶಿಕ್(22), ವಿಜಯಕುಮಾರ್(26), ಗಂಗಾಧರ(22), ರೇಣುಕುಮಾರ್(24) ಮತ್ತು ಶ್ರವಣ(20) ಬಂಧಿತ ಆರೋಪಿಗಳು. ದಕ್ಷಿಣ ವಿಭಾಗದ ವಿವಿಧ ಠಾಣಾ ವ್ಯಾಪ್ತಿಗಳಲ್ಲಿ ದುಶ್ಚಟಗಳಿಗಾಗಿ ಮನೆಗಳವು ಮತ್ತು ದ್ವಿಚಕ್ರ ವಾಹನಗಳ ಕಳ್ಳತನ ಹೆಚ್ಚಾಗಿ ನಡೆಯುತ್ತಿದ್ದ ಬಗ್ಗೆ ತನಿಖೆ ಕೈಗೊಂಡಿದ್ದ ಗಿರಿನಗರ ಠಾಣೆ ಪೊಲೀಸರು ಕಾರ್ಯಾಚರಣೆ ನಡೆಸಿ 6 ಮಂದಿಯನ್ನು ಬಂಧಿಸಿ 6 ಲಕ್ಷ ರೂ. ಮೌಲ್ಯದ 200 ಗ್ರಾಂ ಚಿನ್ನಾಭರಣ, 7.35 ಲಕ್ಷ ರೂ.ಮೌಲ್ಯದ 21 ದ್ವಿಚಕ್ರ ವಾಹನ ಮತ್ತು 1.65 ಲಕ್ಷ ಮೌಲ್ಯದ ವಿವಿಧ ಕಂಪನಿಯ 14 ಮೊಬೈಲ್‍ಗಳನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

ಆರೋಪಿಗಳ ಪೈಕಿ ನಾಗರಾಜ, ಕೌಶಿಕ್, ರೇಣುಕುಮಾರ್, ಶ್ರವಣ ಈ ಹಿಂದೆ ಹನುಮಂತನಗರ, ಸಿ.ಕೆ.ಅಚ್ಚುಕಟ್ಟು , ಕೆ.ಜಿ.ನಗರ, ರಾಜರಾಜೇಶ್ವರಿನಗರ, ರಾಜಗೋಪಾಲನಗರ, ವಿಜಯನಗರ, ಸುಬ್ರಹ್ಮಣ್ಯಪುರ ಇನ್ನು ಮುಂತಾದ ಠಾಣೆ ವ್ಯಾಪ್ತಿಗಳಲ್ಲಿ ಸುಲಿಗೆ, ದರೋಡೆ, ಕನ್ನಗಳವು, ದ್ವಿಚಕ್ರ ವಾಹನಗಳ ಕಳವು ಪ್ರಕರಣಗಳಲ್ಲಿ ಭಾಗಿಯಾಗಿರುವುದು ತಿಳಿದುಬಂದಿದೆ. ಈ ಉತ್ತಮ ಕಾರ್ಯವನ್ನು ಬೆಂಗಳೂರುನಗರ ಪೊಲೀಸ್ ಆಯುಕ್ತರು, ಹೆಚ್ಚುವರಿ ಪೊಲೀಸ್ ಆಯುಕ್ತರು ಶ್ಲಾಘಿಸಿದರು.

Facebook Comments