ಚಿನ್ನಾಭರಣ ಅಂಗಡಿಯಲ್ಲಿ 26 ಲಕ್ಷ ಮೌಲ್ಯದ ಆಭರಣ ಕಳವು

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ನ.8- ಜ್ಯುವೆಲರಿ ಅಂಗಡಿಯೊಂದರಲ್ಲಿ ಸುಮಾರು 26 ಲಕ್ಷ ರೂ. ಮೌಲ್ಯದ 694 ಗ್ರಾಂ ಚಿನ್ನಾಭರಣ ಕಳವಾಗಿರುವ ಘಟನೆ ಪುಟ್ಟೇನಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.  ಜೆಪಿನಗರದ 7ನೇ ಹಂತದಲ್ಲಿ ರಾಜಾಹಂಸ ಜ್ಯುವೆಲ್ಸ್ ಅಂಗಡಿ ಇದೆ. ಮಾಲೀಕರಾದ ರಾಹುಲ್ ಜೈನ್ ಎಂಬುವರು ನಿನ್ನೆ ಮಧ್ಯಾಹ್ನ ಊಟ ಮಾಡತ್ತಿದ್ದರು. ಈ ಸಂದರ್ಭದಲ್ಲಿ ಅಂಗಡಿಯಲ್ಲಿದ್ದ ಆಭರಣಗಳು ಕಳ್ಳತನವಾಗಿವೆ.

ಊಟ ಮುಗಿಸಿ ಮಾಲೀಕರು ಬಂದು ನೋಡಿದಾಗ ಆಭರಣ ಕಳವಾಗಿರುವುದು ಗಮನಕ್ಕೆ ಬಂದಿದೆ. ತಕ್ಷಣ ಅವರು ಪುಟ್ಟೇನಹಳ್ಳಿ ಪೊಲೀಸರಿಗೆ ದೂರು ನೀಡಿದ್ದಾರೆ. ಆಭರಣಗಳ ಕಳ್ಳತನ ಹೇಗಾಗಿದೆ ಎಂದು ನಿಖರವಾಗಿ ಕಂಡುಬಂದಿಲ್ಲ. ಅಂಗಡಿಯ ನೌಕರನೊಬ್ಬನ ಮೇಲೆ ಮಾಲೀಕರು ಶಂಕೆ ವ್ಯಕ್ತಪಡಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿ ರುವ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

Facebook Comments