ಡ್ಯಾನ್ಸ್ ಬಾರ್ ಮೇಲೆ ಸಿಸಿಬಿ ದಾಳಿ, 5 ಲಕ್ಷ ರೂ. ವಶ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ನ.9- ಕ್ಯಾಬರೆ ಡ್ಯಾನ್ಸ್ ನಡೆಯುತ್ತಿದ್ದ ಲೇಡಿಸ್ ಬಾರ್‍ವೊಂದರ ಮೇಲೆ ದಾಳಿ ನಡೆಸಿರುವ ಸಿಸಿಬಿ ಪೊಲೀಸರು 120 ಮಹಿಳೆಯರನ್ನು ರಕ್ಷಿಸಿ ಡ್ಯಾನ್ಸರ್‍ಗಳ ಮೇಲೆ ಎಸೆಯಲಾಗುತ್ತಿದ್ದ 5 ಲಕ್ಷ ರೂ.ಗಳನ್ನು ವಶಪಡಿಸಿಕೊಂಡಿದ್ದಾರೆ.

ಅಶೋಕನಗರ ಪೊಲೀಸ್ ಠಾಣಾ ವ್ಯಾಪ್ತಿಯ ರೆಸಿಡೆನ್ಸಿ ರಸ್ತೆಯಲ್ಲಿರುವ ಟೈಮ್ಸ್ ಬಾರ್‍ನಲ್ಲಿ ಅಕ್ರಮವಾಗಿ ಕ್ಯಾಬರೆ ನಡೆಸಲಾಗುತ್ತಿದೆ ಎಂಬ ಬಗ್ಗೆ ಬಂದ ಖಚಿತ ಮಾಹಿತಿಯನ್ನಾಧರಿಸಿ ಈ ದಾಳಿ ನಡೆಸಲಾಗಿದೆ. ದಾಳಿ ಸಂದರ್ಭದಲ್ಲಿ ಬಾರ್‍ನಲ್ಲಿದ್ದವರು ಕುಡಿದ ಮತ್ತಿನಲ್ಲಿ ಡ್ಯಾನ್ಸರ್‍ಗಳ ಮೇಲೆ ಹಣದ ಮಳೆ ಸುರಿಸುತ್ತಿದ್ದರು.

ತಕ್ಷಣ ಕ್ಯಾಬರೆಯನ್ನು ರದ್ದುಗೊಳಿಸಿ ಬಾರ್‍ನಲ್ಲಿದ್ದ 120 ಮಹಿಳೆಯರನ್ನು ರಕ್ಷಿಸಿ ಬಾರ್ ಮಾಲೀಕರ ವಿರುದ್ಧ ಅಶೋಕನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.

Facebook Comments