ಬೈಕ್ ಕದಿಯಲು ಕಾರಿನಲ್ಲಿ ಬರುತ್ತಿದ್ದರು ಈ ಖದೀಮರು..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ನ.14- ಕಾರಿನಲ್ಲಿ ಸುತ್ತಾಡುತ್ತಾ ಮನೆ ಮುಂದೆ ನಿಲ್ಲಿಸಿದಂತಹ ದ್ವಿಚಕ್ರ ವಾಹನಗಳನ್ನು ಕಳವು ಮಾಡುತ್ತಿದ್ದ ಮೂವರನ್ನು ಉತ್ತರ ವಿಭಾಗದ ನಂದಿನಿ ಲೇಔಟ್ ಠಾಣೆ ಪೊಲೀಸರು ಬಂಧಿಸಿ 2.30 ಲಕ್ಷ ರೂ. ಬೆಲೆ ಬಾಳುವ ನಾಲ್ಕು ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ. ಕೋರಮಂಗಲದ ಚಂದ್ರಕಾಂತ್(23), ಕೆಂಗೇರಿಯ ಮುನಿಸಂಜೀವ್(26), ನಂದಕುಮಾರ್(25) ಬಂಧಿತ ಆರೋಪಿಗಳು.

ನವೆಂಬರ್ 2ರಂದು ಲಗ್ಗೆರೆಯ ಎಸ್‍ಎಸ್ ಕಾಲೋನಿ ಬಿಜಿಎಸ್ ಕ್ರಾಸ್ ನಿವಾಸಿ ಮಂಜುನಾಥ್ ಎಂಬುವರು ಮನೆ ಮುಂದೆ ಬೈಕ್‍ನ್ನು ನಿಲ್ಲಿಸಿದ್ದರು. ಒಳಗಾಗುವಷ್ಟರಲ್ಲಿ ಇವರ ಬೈಕ್ ಕಳ್ಳತನವಾಗಿತ್ತು.

ಈ ಬಗ್ಗೆ ನಂದಿನಿ ಲೇಔಟ್ ಠಾಣೆಗೆ ದೂರು ನೀಡಿದ್ದರು.  ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ತನಿಖೆ ನಡೆಸಿ ಮೂವರನ್ನು ಬಂಧಿಸಿ ಬೈಕ್‍ಗಳನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದು, ಆರೋಪಿಗಳ ಬಂಧನದಿಂದ ಬ್ಯಾಟರಾಯನಪುರ ಬಾಣಸವಾಡಿಯ ಎರಡು ದ್ವಿಚಕ್ರ ವಾಹನ ಪ್ರಕರಣ ಪತ್ತೆಯಾಗಿದೆ.

ಇನ್ನುಳಿದ ಎರಡು ದ್ವಿಚಕ್ರ ವಾಹನಗಳ ಮಾಲೀಕರ ಪತ್ತೆ ಕಾರ್ಯ ಮುಂದುವರೆದಿದೆ. ಆರೋಪಿಗಳು ರಾತ್ರಿ ವೇಳೆ ಕಾರಿನಲ್ಲಿ ಸುತ್ತಾಡಿಕೊಂಡು ಮನೆ ಮುಂದೆ ನಿಲ್ಲಿಸಿದಂತಹ ವಾಹನಗಳನ್ನು ಕಳವು ಮಾಡುತ್ತಿದುದು ವಿಚಾರಣೆಯಿಂದ ತಿಳಿದುಬಂದಿದೆ.

Facebook Comments