ಆಗ್ನೇಯ ವಿಭಾಗ ಪೊಲೀಸರ ಭರ್ಜರಿ ಬೇಟೆ: 8 ಕೋಟಿ ಕಳವು ಮಾಲು ವಶ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಫೆ.15-ಆಗ್ನೇಯ ವಿಭಾಗದ ಪೊಲೀಸರು ಕಾರ್ಯಾಚರಣೆ ನಡೆಸಿ ರಾಜ್ಯ ಮತ್ತು ಅಂತಾರಾಜ್ಯದ 39 ಮಂದಿ ಆರೋಪಿಗಳನ್ನು ಬಂಧಿಸಿ 89 ಪ್ರಕರಣಗಳನ್ನು ಪತ್ತೆಹಚ್ಚಿ ಸುಮಾರು 8 ಕೋಟಿ 31 ಲಕ್ಷ ಮೊತ್ತದ ಹಣ, ಆಭರಣ, ಮಾದಕವಸ್ತು, ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ.

ವಶಪಡಿಸಿಕೊಂಡಿರುವ ಮಾಲುಗಳ ಪೈಕಿ ಒಂದು 1 ಕೆಜಿ 670 ಗ್ರಾಂ ಚಿನ್ನಾಭರಣ, 1 ಕೆಜಿ 296 ಗ್ರಾಂ ಬೆಳ್ಳಿ ವಸ್ತುಗಳು, 8.30ಲಕ್ಷ ರೂ. ನಗದು, ಮೊಬೈಲ್, ಮಾದಕ ವಸ್ತುಗಳಾದ 35 ಕೆಜಿ 100 ಗ್ರಾಂ ಗಾಂಜಾ, 3 ಗ್ರಾಂ 500 ಮಿಲಿ ಎಂಡಿಎಂಎ ಮಾದಕವಸ್ತು, 250 ಗ್ರಾಂ ಚರಸ್ ಮತ್ತು 1.05 ಲೀಟರ್ ಗಾಂಜಾ ಆಯಿಲ್, 53 ದ್ವಿಚಕ್ರ ವಾಹನಗಳು, 25 ನಾಲ್ಕು ಚಕ್ರದ ವಾಹನಗಳು, ಲ್ಯಾಪ್‍ಟಾಪ್, ಟಿವಿಗಳು ಸೇರಿವೆ.

ಪತ್ತೆಹಚ್ಚಿರುವ 89 ಪ್ರಕರಣಗಳಲ್ಲಿ ಬೊಮ್ಮನಹಳ್ಳಿ ಪೊಲೀಸರು 37 ಪ್ರಕರಣ, ಎಸ್.ಜಿ.ಪಾಳ್ಯ ಪೊಲೀಸರು 2, ಮೈಕೋಲೇಔಟ್ 5, ತಿಲಕ್‍ನಗರ-1, ಎಲೆಕ್ಟ್ರಾನಿಕ್ ಸಿಟಿ 5, ಹುಳಿಮಾವು 14, ಪರಪ್ಪನ ಅಗ್ರಹಾರ 9, ಬಂಡೇಪಾಳ್ಯ 5, ಬೇಗೂರು 6 ಮತ್ತು ಎಚ್.ಎಸ್.ಆರ್ ಲೇಔಟ್ ಪೊಲೀಸರು 5 ಪ್ರಕರಣಗಳನ್ನು ಪತ್ತೆ ಹಚ್ಚಿದ್ದಾರೆ. ಬೊಮ್ಮನಹಳ್ಳಿ ಪೊಲೀಸರು 81.20 ಲಕ್ಷ ರೂ. ಬೆಲೆಯ 31 ಬೈಕ್‍ಗಳು, 7 ಕಾರುಗಳು, ಎಸ್‍ಜಿ ಪಾಳ್ಯ ಪೊಲೀಸರು 13 ಲಕ್ಷ ಬೆಲೆಯ ಕಾರು, ಮಾದಕ ವಸ್ತು,

ಮೈಕೋ ಲೇಔಟ್ 3.50 ಲಕ್ಷ ಬೆಲೆಯ ಆಭರಣ, 2 ಬೈಕ್, ಮೊಬೈಲ್, ಲ್ಯಾಪ್‍ಟಾಪ್, ಟಿವಿ, ತಿಲಕ್‍ನಗರ ಪೊಲೀಸರು 40 ಲಕ್ಷ ಬೆಲೆಯ 2 ಬೈಕ್, 3 ಕಾರು, ಎಲೆಕ್ಟ್ರಾನಿಕ್ ಸಿಟಿ ಪೊಲೀಸರು 6 ಬೈಕ್‍ಗಳು, ಹುಳಿಮಾವು ಪೊಲೀಸರು 2.5 ಕೋಟಿ ಮೌಲ್ಯದ 14 ಕಾರುಗಳು, ಪಿ.ಅಗ್ರಹಾರ ಪೊಲೀಸರು 6.30 ಲಕ್ಷ ಬೆಲೆಯ ಚಿನ್ನಾಭರಣ, 7 ಬೈಕ್, ಬಂಡೆಪಾಳ್ಯ
ಪೊಲೀಸರು 35.30 ಲಕ್ಷ ಬೆಲೆಯ ಚಿನ್ನಾಭರಣ, 8.30 ಲಕ್ಷ ರೂ. ನಗದು, ಬೇಗೂರು ಪೊಲೀಸರು 5.30 ಲಕ್ಷ ಬೆಲೆಯ ಚಿನ್ನಾಭರಣ, 5 ಬೈಕ್ ಹಾಗೂ ಎಚ್‍ಎಸ್‍ಆರ್ ಲೇಔಟ್ ಪೊಲೀಸರು 30 ಲಕ್ಷ ಬೆಲೆಯ ಚಿನ್ನಾಭರಣ, ಬೆಳ್ಳಿ ವಸ್ತುಗಳು, ಗಾಂಜಾ ವಶಪಡಿಸಿಕೊಂಡಿದ್ದಾರೆ.

ಈ ಠಾಣೆಗಳ ಅಧಿಕಾರಿ ಮತ್ತು ಸಿಬ್ಬಂದಿಯವರು ಅಪರಾಧ ಪ್ರಕರಣಗಳನ್ನು ಪತ್ತೆಹಚ್ಚುವ ಕಾರ್ಯದಲ್ಲಿ ಯಶಸ್ವಿಯಾಗಿದ್ದು, ಇವರ ಕಾರ್ಯ ಶ್ಲಾಘನೀಯವಾಗಿದೆ.

Facebook Comments