ಅಪರಿಚಿತ ಶವಗಳ ಪತ್ತೆಗೆ ಮನವಿ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಜೂ.4- ನಗರದ ಕಲಾಸಿಪಾಳ್ಯ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ವಿವಿಧ ದಿನಾಂಕಗಳಂದು ಅಪರಿಚಿತ ವ್ಯಕ್ತಿಗಳ ಶವ ಪತ್ತೆಯಾಗಿದ್ದು, ವಾರಸುದಾರರ ಪತ್ತೆಗೆ ಮನವಿ ಮಾಡಲಾಗಿದೆ. ಏಪ್ರಿಲ್ 8ರಂದು ಸಂಜೆ ಕಲಾಸಿಪಾಳ್ಯದ ಸಿಮೆಂಟ್ ಕಾಲೋನಿ ಮಸೀದಿ ಪಕ್ಕ ಫುಟ್‍ಪಾತ್‍ನಲ್ಲಿ ವೃದ್ಧೆಯೊಬ್ಬರ ಶವ ಪತ್ತೆಯಾಗಿದೆ. ಮೇಲ್ನೋಟಕ್ಕೆ ಕಾಯಿಲೆಯಿಂದ ಸಾವನ್ನಪ್ಪಿರುವಂತೆ ಕಂಡುಬಂದಿದೆ.

ವೃದ್ಧೆ 75 ರಿಂದ 80 ವರ್ಷ, 4.9 ಅಡಿ ಎತ್ತರ, ಸಾಧಾರಣ ಮೈಕಟ್ಟು, ಕೋಲು ಮುಖ, ಕಪ್ಪು ಬಣ್ಣ, ನೀಲಿ ಬಣ್ಣದ ಬಿಳಿ ಚಿತ್ರವಿರುವ ನೈಟಿ ಧರಿಸಿದ್ದಾರೆ. ವೃದ್ಧನ ಶವ ಪತ್ತೆ: ಇದೇ ಠಾಣೆ ವ್ಯಾಪ್ತಿಯ ಪ್ರದೀಪ್ ಸರ್ಕಲ್ ತಾಜ್ ಹೊಟೇಲ್ ಮುಂದೆ ಏಪ್ರಿಲ್ 10ರಂದು ಕಾಯಿಲೆಯಿಂದ ಸುಮಾರು 75 ವರ್ಷದ ವೃದ್ಧ ಮೃತಪಟ್ಟಿದ್ದಾರೆ. 5.3 ಅಡಿ ಎತ್ತರ, ಸಾಧಾರಣ ಮೈಕಟ್ಟು, ಕೋಲು ಮುಖ, ಕಪ್ಪು ಬಣ್ಣ, ಗಡ್ಡ-ಮೀಸೆ ಬಿಟ್ಟಿದ್ದಾರೆ. ನೀಲಿ ಮತ್ತು ಕಪ್ಪು ಗೆರೆಯುಳ್ಳ ತುಂಬುತೋಳಿನ ಸ್ವೆಟರ್, ಬೂದಿ ಬಣ್ಣದ ಬೆಡ್‍ಶಿಟ್ ಧರಿಸಿದ್ದಾರೆ.

ಏಪ್ರಿಲ್ 21ರಂದು ಬೆಳಗ್ಗೆ ಸುಮಾರು 9.30ರ ಸಮಯದಲ್ಲಿ ಕೋಟೆ ಶ್ರೀ ಧನ್ವಂತರಿ ಗಣಪತಿ ದೇವಸ್ಥಾನದ ಹಿಂದೆ 45 ರಿಂದ 50 ವರ್ಷದ ವ್ಯಕ್ತಿಯ ಶವ ಪತ್ತೆಯಾಗಿದೆ. 5.1 ಅಡಿ ಎತ್ತರ, ಸಾಧಾರಣ ಮೈಕಟ್ಟು, ದುಂಡು ಮುಖ, ಗೋಧಿ ಮೈಬಣ್ಣ, ಕಪ್ಪು-ಬಿಳಿ ಬಣ್ಣದ ಗಡ್ಡ-ಮೀಸೆ ಇದೆ. ನೀಲಿ ಬಣ್ಣದ ತುಂಬು ತೋಳಿನ ಶರ್ಟ್ ಧರಿಸಿದ್ದಾರೆ. ಇದೇ ಠಾಣೆಯ ಎನ್‍ಆರ್ ರಸ್ತೆ ಕ್ರಾಸ್ ಹೈಯತ್ ಸ್ಟ್ರೀಟ್‍ನ ತಾಜ್ ಗೆಸ್ಟ್‍ಹೌಸ್‍ನಲ್ಲಿ ಏಪ್ರಿಲ್ 14ರಂದು 55 ವರ್ಷದ ವ್ಯಕ್ತಿ ಯಾವುದೋ ಕಾಯಿಲೆಯಿಂದ ಮೃತಪಟ್ಟಿದ್ದಾರೆ. 5.6 ಅಡಿ ಎತ್ತರ, ಸಾಧಾರಣ ಮೈಕಟ್ಟು, ದುಂಡು ಮುಖ, ಕಪ್ಪು ಬಣ್ಣ, ಮೀಸೆ ಇದೆ. ಕಪ್ಪು ಮಿಶ್ರಿತ ಬೂದು ಬಣ್ಣದ ಪ್ಯಾಂಟ್ ಧರಿಸಿದ್ದಾನೆ.

ಗಂಡಸಿನ ಶವ ಪತ್ತೆ: ಕಲಾಸಿಪಾಳ್ಯ ಠಾಣೆ ವ್ಯಾಪ್ತಿಯ ಕೆ.ಎಂ.ರಸ್ತೆಯಲ್ಲಿರುವ ಸೂಪರ್ ಲಾಡ್ಜ್‍ನಲ್ಲಿ ಮಾರ್ಚ್ 25 ರಂದು 30 ರಿಂದ 35 ವರ್ಷದ ವ್ಯಕ್ತಿ ಮೃತಪಟ್ಟಿದ್ದು, ಯಾವುದೋ ಕಾಯಿಲೆಯಿಂದ ಮೃತಪಟ್ಟಿರುವಂತೆ ಕಂಡುಬಂದಿದೆ. 5.6 ಅಡಿ ಎತ್ತರ, ಸಾಧಾರಣ ಮೈಕಟ್ಟು, ದುಂಡು ಮುಖ, ಬಿಳಿ ಬಣ್ಣ, ಕಪ್ಪು ಕೂದಲು ಇದೆ. ಕುರುಚಲು ಗಡ್ಡ-ಮೀಸೆ ಇದೆ. ಬಿಳಿ ಮತ್ತು ಕಪ್ಪು ಬಣ್ಣದ ಟವೆಲ್ ಧರಿಸಿದ್ದಾರೆ.

ಈ ಮೇಲ್ಕಂಡ ವ್ಯಕ್ತಿಗಳ ವಾರಸುದಾರರು ಯಾರಾದರೂ ಇದ್ದಲ್ಲಿ ಕಲಾಸಿಪಾಳ್ಯ ಠಾಣೆ ದೂರವಾಣಿ 22942504 ಅಥವಾ ಪೆÇಲೀಸ್ ಕಂಟ್ರೋಲ್ ರೂಂ 100 ಸಂಪರ್ಕಿಸುವಂತೆ ಪೊಲೀಸರು ಮನವಿ ಮಾಡಿದ್ದಾರೆ.

Facebook Comments