ನಕಲಿ ಬ್ರಾಂಡ್ ಬಟ್ಟೆ ಮಾರಾಟ ಮಾಡುತ್ತಿದ್ದವನ ಬಂಧನ, 25 ಲಕ್ಷ ಮೌಲ್ಯದ ಮಾಲು ವಶ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಜೂ.6- ಪ್ರತಿಷ್ಠಿತ ಕಂಪೆನಿಗಳ ನಕಲಿ ಬಟ್ಟೆಗಳನ್ನು ಅಸಲಿ ಎಂದು ಮಾರಾಟ ಮಾಡುತ್ತಿದ್ದ ಮಳಿಗೆ ಮೇಲೆ ದಾಳಿ ನಡೆಸಿರುವ ಸಿಸಿಬಿ ಪೊಲೀಸರು ಒಬ್ಬ ಆರೋಪಿಯನ್ನು ಬಂಧಿಸಿ 25 ಲಕ್ಷ ಬೆಲೆ ಬಾಳುವ ನಕಲಿ ಬಟ್ಟೆಗಳನ್ನು ವಶಪಡಿಸಿಕೊಂಡಿದ್ದಾರೆ. ವೈಟ್‍ಫೀಲ್ಡ್‍ನ ಶ್ರೀರಾಮ ದೇವಸ್ಥಾನದ ರಸ್ತೆಯಲ್ಲಿರುವ ರೆಡ್‍ಕೋಟ್ ಶಾಪ್ ಮಾಲೀಕ ಅವಿನಾಶ್ ಬಂಧಿತ ಆರೋಪಿ.

ಅವಿನಾಶ್ ಪ್ರತಿಷ್ಠಿತ ಕಂಪೆನಿಗಳಾದ ಝರಾ, ಬರ್ಬೇರಿ, ನೈಕ್, ಯುಎಸ್ ಪೋಲೊ, ಕಡಿದಾಸ್ ಹಾಗೂ ಜಿಯುಸಿಸಿಐ ಮತ್ತಿತರ ಸಂಸ್ಥೆಗಳ ನಕಲಿ ಬಟ್ಟೆಗಳನ್ನು ದಾಸ್ತಾನು ಮಾಡಿಕೊಂಡು ಕಾಪಿರೈಟ್ ಉಲ್ಲಂಘಿಸಿ ಅಸಲಿ ಬಟ್ಟೆಗಳೆಂದು ಮಾರಾಟ ಮಾಡುತ್ತಿದ್ದಾನೆ ಎಂಬ ಬಗ್ಗೆ ಬಂದ ಖಚಿತ ಮಾಹಿತಿಯನ್ನಾಧರಿಸಿ ದಾಳಿ ನಡೆಸಿದ ಸಿಸಿಬಿ ಆರ್ಥಿಕ ಅಪರಾಧ ದಳದ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

ಬಂಧಿತನಿಂದ 25 ಲಕ್ಷ ರೂ. ಮೌಲ್ಯದ 1100 ನಕಲಿ ಬಟ್ಟೆಗಳನ್ನು ವಶಪಡಿಸಿಕೊಂಡು ವೈಟ್‍ಫೀಲ್ಡ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಮುಂದುವರಿಸಿದ್ದಾರೆ.

Facebook Comments