ಮಾರಕಾಸ್ತ್ರಗಳಿಂದ ಬೆದರಿಸಿ ಹಣ-ವಡವೆ ದೋಚುತ್ತಿದ್ದ ಸುಲಿಗೆಕೋರರು ಅಂದರ್

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಜೂ.6- ಸಾರ್ವಜನಿಕರಿಗೆ ಮಾರಕಾಸ್ತ್ರಗಳನ್ನು ತೋರಿಸಿ ಹಣ ಮತ್ತು ವಡವೆ ಸುಲಿಗೆ ಮಾಡುತ್ತಿದ್ದ ಸುಲಿಗೆಕೋರರನ್ನು ಬಂಧಿಸುವಲ್ಲಿ ನಂದಿನಿ ಲೇಔಟ್ ಪೊಲೀಸರು ಯಶಸ್ವಿಯಾಗಿದ್ದಾರೆ.

ಡಿಜೆ ಹಳ್ಳಿ ಟ್ಯಾನರಿ ರಸ್ತೆಯ ಸಜ್ಜಾದ್ ಅಲಿಯಾಸ್ ಶಾಕಲ್ (32), ನಂದಿನಿ ಬಡಾವಣೆಯ ಶಾಜಿಯಾ ಅಲಿಯಾಸ್ ಅಲ್ಮಾಸ್ (22) ಹಾಗೂ ಪಾಹಿಮಾ (27) ಬಂಧಿತ ಆರೋಪಿಗಳು.

ಮೆಹರಾಜ್‍ಖಾನ್ ಅಲಿಯಾಸ್ ಮಿರಾಜ್ ಮತ್ತು ಆತನ ಸಂಗಡಿಗರು ಇತ್ತೀಚೆಗೆ ನಂದಿನಿ ಬಡಾವಣೆಯಲ್ಲಿ ವಾಸವಾಗಿರುವ ತನ್ನ ಸಹೋದರ ಇದಾಯತ್ ಅವರ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿ ಪರಾರಿಯಾಗುತ್ತಿದ್ದಾರೆ ಎಂದು ಅಜೀಮ್ ಎಂಬುವವರು ದೂರು ನೀಡಿದ್ದರು.

ಈ ದೂರಿನ ಆಧಾರದ ಮೇಲೆ ಕಾರ್ಯಾಚರಣೆ ನಡೆಸಿದ ನಂದಿನಿ ಬಡಾವಣೆ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿ ರಾಬರಿ ಪ್ರಕರಣಗಳಿಗೆ ಸಂಬಂಧಿಸಿದ 4 ಲಕ್ಷ ರೂ. ಮೌಲ್ಯದ 80 ಗ್ರಾಂ ತೂಕದ ಚಿನ್ನದ ವಡವೆಗಳನ್ನು ವಶಪಡಿಸಿಕೊಂಡಿದ್ದಾರೆ.

ಆರೋಪಿಗಳ ವಿರುದ್ಧ ಕೆಆರ್ ಪುರಂ, ಬಸವನಗುಡಿ ಮತ್ತು ಜೆಪಿ ನಗರ ಪೊಲೀಸ್ ಠಾಣೆ ವ್ಯಾಪ್ತಿಗಳಲ್ಲಿ ಸಾರ್ವಜನಿಕರಿಗೆ ಮಾರಕಾಸ್ತ್ರಗಳನ್ನು ತೋರಿಸಿ ಹೆದರಿಸಿ ಹಣ ಮತ್ತು ವಡವೆಗಳನ್ನು ಸುಲಿಗೆ ಮಾಡಿದ ದೂರು ದಾಖಲಾಗಿವೆ.

ಡಿಸಿಪಿ ಶಶಿಕುಮಾರ್ ಮಾರ್ಗದರ್ಶನದಲ್ಲಿ ಎಸಿಪಿ ವೆಂಕಟೇಶ್ ನಾಯ್ಡು ನೇತೃತ್ವದಲ್ಲಿ ನಂದಿನಿ ಲೇಔಟ್ ಇನ್ಸ್‍ಪೆಕ್ಟರ್ ಲೋಹಿತ್ ಮತ್ತು ಅವರ ಸಿಬ್ಬಂದಿಗಳು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

Facebook Comments