ಐನಾತಿ ಕಳ್ಳನ ಬಂಧನ : 18.20 ಲಕ್ಷ ಮೌಲ್ಯದ ಮಾಲು ವಶ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಜೂ.6- ಐನಾತಿ ಕಳ್ಳನೊಬ್ಬನನ್ನು ಬಂಧಿಸಿರುವ ಕೋರಮಂಗಲ ಠಾಣೆ ಪೊಲೀಸರು ಚಿನ್ನಾಭರಣ ಸೇರಿದಂತೆ ಒಟ್ಟು 18.20ಲಕ್ಷ ರೂ. ಮೌಲ್ಯದ ಮಾಲುಗಳನ್ನು ವಶಪಡಿಸಿಕೊಂಡಿದ್ದಾರೆ. ಬೆಂಗಳೂರಿನ ಬನಶಂಕರಿ 2ನೇ ಹಂತದ ನಿವಾಸಿ ಮಂಜುನಾಥ್ ಅಲಿಯಾಸ್ ಪುಳಂಗು ಮಂಜ (24) ಬಂಧಿತ ಆರೋಪಿ.

ಈತ ಮೂಲತಃ ಮಂಡ್ಯ ಜಿಲ್ಲೆ ಬಸರಾಳು ಗ್ರಾಮದವನು.ಬಂಧಿತನಿಂದ 105 ಗ್ರಾಂ ಚಿನ್ನಾಭರಣ, 6ಕೆಜಿ ತೂಕದ ಬೆಳ್ಳಿಯ ದೇವರ ವಿಗ್ರಹಗಳು, ಒಂದು ಕಾರು, ನಾಲ್ಕು ದ್ವಿಚಕ್ರ ವಾಹನಗಳು ಸೇರಿ ಒಟ್ಟು 18.20 ಲಕ್ಷ ರೂ. ಮೌಲ್ಯದ ಮಾಲುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ವಿವಿಧ ಠಾಣೆಗಳಲ್ಲಿ ಮನೆಕಳವು, ವಾಹನ ಕಳವು ಸೇರಿದಂತೆ ಈತನ ಮೇಲೆ 10ಕ್ಕು ಹೆಚ್ಚು ಪ್ರಕರಣಗಳಿವೆ ಎಂದು ಕೋರಮಂಗಲ ಠಾಣೆ ಪೊಲೀಸರು ತಿಳಿಸಿದ್ದಾರೆ.

Facebook Comments