ತಮಿಳುನಾಡು ಮೂಲದ ಇಬ್ಬರು ಬೈಕ್ ಕಳ್ಳರ ಸೆರೆ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಜೂ.18- ನಗರದಲ್ಲಿ ಬೈಕ್‍ಗಳನ್ನು ಕಳ್ಳತನ ಮಾಡಿದ್ದ ತಮಿಳುನಾಡು ಮೂಲದ ಇಬ್ಬರನ್ನು ಬೊಮ್ಮನಹಳ್ಳಿ ಠಾಣೆ ಪೆÇಲೀಸರು ಬಂಧಿಸಿ 8 ಲಕ್ಷ ರೂ. ಮೌಲ್ಯದ ಬೈಕ್‍ಗಳನ್ನು ವಶಪಡಿಸಿಕೊಂಡಿದ್ದಾರೆ.ಪೆರಿಯಾಸ್ವಾಮಿ (20) ಮತ್ತು ಹರೀಶ್ (21) ಬಂಧಿತ ಆರೋಪಿಗಳು.

ಆರೋಪಿಗಳ ಬಂಧನದಿಂದ ಬೊಮ್ಮನಹಳ್ಳಿಯ ಎರಡು ಪ್ರಕರಣ, ಮೈಕೊ ಲೇಔಟ್‍ನ ಮೂರು ಪ್ರಕರಣ ಸೇರಿ ಐದು ಪ್ರಕರಣಗಳು ಬೆಳಕಿಗೆ ಬಂದಿವೆ. ಆರೋಪಿಗಳಿಂದ ರಾಯಲ್ ಎನ್‍ಫೀಲ್ಡ್ ಬೈಕ್, ಮಹಾಬೈಕ್, ಕೆಟಿಎಂ ಬೈಕ್‍ಗಳನ್ನು ವಶಪಡಿಸಿಕೊಂಡಿದ್ದು, ಇವುಗಳ ಮೌಲ್ಯ 8 ಲಕ್ಷ ರೂ. ಎಂದು ಅಂದಾಜಿಸಲಾಗಿದೆ.

Facebook Comments