ರೈಲಿಗೆ ಸಿಕ್ಕಿ ಅಪರಿಚಿತ ಯುವಕ ಸಾವು

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಮೇ 27-ರೈಲಿಗೆ ಸಿಕ್ಕಿ ಸುಮಾರು 25ವರ್ಷದ ಯುವಕ ಸಾವನ್ನಪ್ಪಿರುವ ಘಟನೆ ಯಶವಂತಪುರ ರೈಲ್ವೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಚಿಕ್ಕಬಾಣವಾರ-ಯಶವಂತಪುರ ರೈಲ್ವೆ ನಿಲ್ದಾಣದ ಮಧ್ಯೆ ಹಾದು ಹೋಗುವ ಕಮ್ಮಗೊಂಡನಹಳ್ಳಿಯಲ್ಲಿ ಈ ಯುವಕ ರೈಲಿಗೆ ಸಿಕ್ಕಿ ಮೃತಪಟ್ಟಿದ್ದಾನೆ.

ಎತ್ತರ 5.7ಅಡಿ, ಕೋಲುಮುಖ, ಸಾಧಾರಣಶರೀರ, ಗೋಧಿ ಮೈಬಣ್ಣ ಹೊಂದಿರುವ ಈ ಯುವಕನ ಹೆಸರು-ವಿಳಾಸ ತಿಳಿದು ಬಂದಿಲ್ಲ. ನೀಲಿ ಬಣ್ಣದ ಜೀನ್ಸ್ ಪ್ಯಾಂಟು ಮತ್ತು ನೀಲಿ ಬಣ್ಣದ ತುಂಬು ತೋಳಿನ ಶರ್ಟ್ ಧರಿಸಿರುವ ಈ ಯುವಕನ ಎಡಗೈನಲ್ಲಿ ಬ್ಯಾಂಡೇಜ್ ಇದ್ದು, ಬಹುಶಃ ಎಡಗೈ ಮೂಳೆ ಮುರಿದಿರುವುದಕ್ಕೆ ಹಾಕಿರುವ ಬ್ಯಾಂಡೇಜ್‍ನಂತೆ ಕಾಣುತ್ತಿದೆ.

ಮೃತದೇಹವನ್ನು ಎಂ.ಎಸ್.ರಾಮಯ್ಯ ಆಸ್ಪತ್ರೆಯ ಶವಾಗಾರದಲ್ಲಿಡಲಾಗಿದೆ. ವಾರಸುದಾರರು ಕೂಡಲೇ 9480802118 ಸಂಪರ್ಕಿಸಲು ಕೋರಲಾಗಿದೆ.

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ