ನೌಕರನ ಅಡ್ಡಗಟ್ಟಿ ದರೋಡೆಗೆ ಯತ್ನ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಜು.4-ಖಾಸಗಿ ಕಂಪನಿಯೊಂದರ ನೌಕರನ ಅಡ್ಡಗಟ್ಟಿ ದರೋಡೆಗೆ ಯತ್ನಿಸಿರುವ ಘಟನೆ ಕೋರಮಂಗಲ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.  ಗೌರವ್ ಅಗರ್‍ವಾಲ್ ಎಂಬುವರು ಖಾಸಗಿ ಕಂಪನಿಯೊಂದರ ನೌಕರರಾಗಿದ್ದು , ಜೂ.27ರಂದು ರಾತ್ರಿ ತಾವರೆಕೆರೆ ಮುಖ್ಯರಸ್ತೆಯ ಭುವನೇಶ್ವರಿ ಲೇಔಟ್ ಮೂಲಕ ನಡೆದು ಹೋಗುತ್ತಿದ್ದರು.

ಈ ಸಂದರ್ಭದಲ್ಲಿ ದರೋಡೆಗೆ ಹೊಂಚು ಹಾಕಿ ಎರಡು ಬೈಕ್‍ಗಳಲ್ಲಿ ಮೂವರು ದರೋಡೆಕೋರರು ಬಂದು ಗೌರವ್ ಅಗರ್‍ವಾಲ್ ಅವರನ್ನು ಅಡ್ಡಗಟ್ಟಿ ಹಣ ಕಿತ್ತುಕೊಳ್ಳಲು ಯತ್ನಿಸಿದ್ದಾರೆ. ಈ ಸಂದರ್ಭದಲ್ಲಿ ಗೌರವ್ ಅವರು ಪ್ರತಿರೋಧ ಒಡ್ಡಿದಾಗ ದರೋಡೆಕೋರರು ಚಾಕುವಿನಿಂದ ಅವರ ಬೆರಳಿಗೆ ಇರಿದು ಪರಾರಿಯಾಗಿದ್ದಾರೆ.

ಘಟನೆ ಸಂಬಂಧ ಗೌರವ್ ಅಗರ್‍ವಾಲ್ ಅವರು ಕೋರಮಂಗಲ ಪೆÇಲೀಸ್ ಠಾಣೆಗೆ ದೂರು ನೀಡಿದ್ದಾರೆ.  ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ದರೋಡೆಕೋರರ ಪತ್ತೆಗೆ ಶೋಧ ಕೈಗೊಂಡಿದ್ದಾರೆ.

Facebook Comments